ಪುಟ:ಓಷದಿ ಶಾಸ್ತ್ರ.djvu/೩೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ.] ಗಿಡಗಳ ಒಳಗಿನ ಸ್ವರೂಪ. 289 ಬೇರಿನಲ್ಲಿ, ದಾರುವಿನ ಬೆಳೆವಳಿಕೆಯು ವೃದ್ಧಿ ದನಕಗಳ ಸುತ್ತು ಉಂ ಟಾಗುವುದಕ್ಕೆ ಮೊದಲು, ನಲದ ಕಡೆಯಿಂದ ದಿಂಡಿನ ಕಡೆಗಾಗಿಯೇ ಬರು ವುದು. ವೃದ್ದಿ ಜನಕ ವು೦ಟಾದಮೇಲೆ, ಮಧ್ಯಾರಂಭಿಯಾಗುವುದು. ಅಂದರೆ, ಬೆಳೆವಳಿಕೆಯು ದಿಂಡಿನಲ್ಲಿಯೇ ಆರಂಭಿಸಿ, ವಲ್ಕಲದ ಕಡೆಗೆ ಹೋಗುತ್ತಿರು ವುದು, ದಂಟಿನಲ್ಲಿ ಯಾದರೆ ಯಾವಾಗಲೂ ಮಧ್ಯಾರಂಭಿಯಾಗಿಯೇ ಇರುವುದು, ಏಕಾಂಕುರದಳ ಸಸ್ಯಗಳ ಬೇರುಗಳಲ್ಲಿ, ದಾರುವು ಮಧ್ಯಾ ಭಿಸರವಾಗಿಯೇ ಬೆಳೆದುಬರುವುದು, ದು೦ಕುರದಳಗಳುಳ್ಳ ಸಸ್ಯಗಳ ಬೇರುಗಳಲ್ಲಿಯಾದರೋ, ವೃದ್ಧಿ ದನಕಗಳುಂಟಾಗುವ ವರೆಗೂ, ದಾರುವು ಮಧ್ಯಭಿಸರವಾಗಿಯು, ಅವುಗಳುಂಟಾದಮೇಲೆ ಮಧ್ಯಾರಂಭಿಯಾಗಿಯೂ ಬೆಳೆಯುವುದು, ಬೇರುಗಳಿಗೂ ದಂಟುಗಳಿಗೂ ಒಳಗಿನ ಸ್ಥಿತಿಯಲ್ಲಿರುವ ಮುಖ್ಯ ವ್ಯ ತ್ಯಾಸಗಳಾವುವೆಂದರೆ :-ದಂಟಿನಲ್ಲಿ ಹಲವು ಅಧಿಕವಿಶಾಲವಾಗಿರುವುದಿಲ್ಲ. ಬೇರಿನಲ್ಲಿ ವಲ್ಕಲವು ಅಗಲವಾಗಿರುವುದು, ದಾರುವು ಎಳೆದಂಟುಗಳಲ್ಲಿ ಮೇಲಿರುವುವು. ಬೇರಿನಲ್ಲಿ ನಡುವೆ ನಿಂತಿರುವುವು, ಬೇರಿನ ತುದಿಗಳು ಒರೆಗಳಿಂದ ಮುಚ್ಚಲ್ಪಟ್ಟಿರುವುವು. ದಂಟಿನ ತುದಿಗಳು ಹೀಗೆ ಮುಚ್ಚ ಬೇರು ಮತ್ತು ದಂಟು, ಇವುಗಳಲ್ಲಿ, ಅಗುಗಳು ಬಹು ಮುಖ್ಯವಾದುವು. ಈ ಭಾಗಗಳಿಂದಲೇ ಬೆಳೆವಳಿಕೆಯುಂಟಾಗುವುದು, ಕೊಂಬೆಗಳಲ್ಲಿರುವ ಮೊಗ್ಗೆಗಳ ತುದಿಗಳನ್ನೂ, ಬೇರಿನ ತುದಿಗಳನ್ನೂ, ಭೂತಕನ್ನ ಡಿಯಿಂದ ನೋಡಿದರೆ, ಇವು ತೆಳುವಾದ ತಡಿಕೆಗಳುಳ್ಳ ಚದರವಾದ ಗೂಡುಗಳ ಮೊತ್ತಗಳೇ ಎಂದು ಚೆನ್ನಾಗಿ ಗೊತ್ತಾಗುವುದು, 19