ಪುಟ:ಓಷದಿ ಶಾಸ್ತ್ರ.djvu/೩೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಗಿಡಗಳ ದಳಿಕೆಯ. ಕೆಲಸವೂ. 297 ಮೂಲಕವಾಗಿ ಒಳಕೊಳ್ಳುವುವು, ಬೇಡದ ವಸ್ತುಗಳು ನೀರಿನಲ್ಲಿ ವಿಶೇಷ ವಾಗಿದ್ದರೂ, ಅವುಗಳನ್ನು ಬಿಟ್ಟು ಬಿಡುವುದು. ಬೇಕಾದ ವಸ್ತುಗಳು ಎಷ್ಟು ಸ್ವಲ್ಪವಾಗಿ ನೀರಿನಲ್ಲಿ ಕರಗಿದ್ದರೂ, ಅದನ್ನು ಒಳಗೊಳ್ಳುವುದಕ್ಕೂ ಈ ಬೇರಿನ ರೋಮಗಳಿಗೆ ಸಾಮರ್ಥ್ಯವುಂಟು, ಈ ರೋಮಗಳಲ್ಲಿ ನೀರು ಹೊಕ್ಕು, ಅದರಿಂದ ವಲ್ಕಲದ ಗೂಡು ಗಳಲ್ಲಿ ಸೇರುವುವು. ಮೇಲೆಮೇಲೆ ನೀರು ಒಳಹುಗುತ್ತಲೇ ಇರುವುದರಿಂದ, ಆ ವಲ್ಕಲದ ಗೂಡುಗಳಲ್ಲಿ ನೀರು ತುಂಬಿಕೊಳ್ಳುವುದು, ಹೀಗೆ ನೀರು ತುಂಬಿದ ಮೇಲೂ, ಇನ್ನೂ ನೀರು ಒಳಹುಗುತ್ತಲೇ ಇದ್ದರೆ, ಒಳಗೆ ಸೇರಿರುವ ನೀರನ್ನು ಹೊಸದಾಗಿ ಬಂದ ನೀರು ಒತ್ತುವುದು. ಇದರಿಂದ ಸ್ವಲ್ಪ ಸ್ವಲ್ಪವಾಗಿ ನಡುವೆ ಇರುವ ದಾರುವಿನೊಳಗೂ ನೀರು ಸೇರುವುದು. ಬೇರಿನ ದಾರುವು ಸಕಾಂಡದ ದಾರುವಿನ ಸಂಗಡ ಸಂಬಂಧಪಟ್ಟಿರುವುದರಿಂದ, ಆನೀ. ರು ದಾರುವಿನಲ್ಲಿ ತುಂಬಿಕೊಳ್ಳುವುದು. ಸಕಾಂಡದ ದಾರುವಿನ ಮಾ ರ್ಗದಿಂದ ವೇಗವಾಗಿ ಮೇಲೆ ಹೋಗಿ, ಎಲೆಗಳನ್ನೂ ಸೇರುವುದು. ಪುಕಾಂಡದಲ್ಲಿ ನೀರು ಮೇಲೇರುತ್ತಿರುವುದನ್ನೇ “ ನೀರೇತ ?” ಎಂದು ಹೇಳುವರು. ಈ ನೀರೇತಕ್ಕೆ ಹಲವು ವಿಧವಾದ ಕಾರಣಗಳುಂಟು. ಕೆಲವರು ಎಲೆಗಳಿಂದ ನೀರು ಆವಿಯಾಗಿ ಹೊರಬೀಳುತ್ತಿರುವುದೇ ಮುಖ್ಯ ಹೇತುವೆಂದು ಅಭಿಪ್ರಾಯಪಡುವರು. ಇದು ಮುಖ್ಯ ಕಾರಣವಲ್ಲದಿದ್ದರೂ, ನೀರು ಏರುವುದಕ್ಕೆ ಇದೂ ಒಂದು ಮುಖ್ಯಸಹಾಯವೆಂದು ಹೇಳಬೇಕಾಗಿದೆ. ಎಲೆಗಳ ಗೂಡುಗಳಲ್ಲಿರುವ ನೀರು, ಗಾಳಿಯು ಬೀಸುತ್ತಿರುವುದರಿಂದ ಲ, ಬಿಸಿಲಿನಿಂದಲೂ, ಆವಿಯಾಗಿ ಹೋಗುತ್ತಿದ್ದ ಸ್ನ ಹಿಂದೆ ಇರುವ ನೀರು ಮಂದವಾಗುತ್ತ ಬರುವುದು. ಏಕೆಂದರೆ, ನೀರುಮಾತು ಆವಿಯಾಗಿ ಹೊರ ಟು ಹೋದರೆ, ಅದರಲ್ಲಿ ಕರಗಿದ್ದ ವಸ್ತುಗಳು ಹಾಗೆ ಹೋಗಲಾರವ ?