ಪುಟ:ಓಷದಿ ಶಾಸ್ತ್ರ.djvu/೩೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ.] ಗಿಡಗಳ ಬಾಕೆಯ ಕೆಲಸವೂ. 309 ಧಾತುಗಳಾಗಿರುವುವು. ದಲವಾಯ, ಪಾಣವಾಯು, ಇವೆರಡೂ ಸೇರಿ ನಿಂದ ಹುಟ್ಟಿಸಲ್ಪಡುವುವು. ಇದ್ದಲು ಇಂಗಾಲಾಮ್ಲದಿಂದ ಬೇರೆಯಾಗಿ ಬರುವುದು. ಇಂಗಾಲಾಮ್ಲವೆಂಬುದು, ಇದ್ದಲು ಮತ್ತು ಪ್ರಾಣವಾಯು, ಇವೆರಡೂ ಮಿಶ)ವಾದ ವಸ್ತುವಾಗಿದೆ. ಈ ವಸ್ತುವನ್ನು ಪುನಃ ಮಲ ವಸ್ತುಗಳಾಗಿ ವಿಭಾಗಿಸಿಡುವುದಕ್ಕೆ ಬಹಳ ತೀಕ್ಷವಾದ ಕಾವು ಬೇಕಾಗು ವುದು. ಹಾಗೆ ವಿಭಾಗಿಸಿದರೂ ಅವು ಕೂಡಲೇ ಸೇರಿಕೊಳ್ಳುವುವು. ವಿಭಾಗ ಹೊಂದಿಸಲಸಾಧ್ಯವಾದ ಈ ವಾಯುವನ್ನು , ಎಲೆಯ ಹಸುರು ರೇಣುಗಳು ಸೂರ್ಯಕಿರಣದ ಬೆಳಕಿನ ಸಹಾಯದಿಂದ ಪ್ರತ್ಯೇಕಧಾತುಗಳಾಗಿ ವಿಭಾಗಿಸಿ, ಕೂಡಲೆ, ಇದ್ದಲನ್ನು ಸೋಪಯೋಗ ಪಡಿಸಿಕೊಂಡು ಬಿಡುವುವು. ವಿಭಾಗಿ ಸಲ್ಪಟ್ಟ ಪ್ರಾಣವಾಯುವು ಹೊರಕ್ಕೆ ಬಂದು ಬಿಡುವುದು. ನೀರಿನಲ್ಲಿ ಮುಳು ಗಿಸಿಟ್ಟ ಪಾಚಿಯಿಂದ ಹೊರಟು ಬರುವ ಗುಳ್ಳೆಗಳೇ ಈ ಪಾಣವಾಯುವು- ಜೀವ ಜಂತುಗಳಿಗೂ ಓಷಧಿಗಳಿಗೂ ಇರುವ ವ್ಯತ್ಯಾಸಗಳೆಲ್ಲ ಈ ಬೆ ಳಕಿನ ಸೇರುವೆಯ ಕೆಲಸ ದಿಂದುಂಟಾದುದೇ, ಗಿಡಗಳಲ್ಲಿ ಮಾತ್ರವೇ ಈ ಬಗೆ ಯ ಕಿರಣ ಜನ್ಯ ಸಂಯೋಗ ಕಾರ್ಯವು ಸುಲಭವಾಗಿ ನಡೆಯುವುದೇ ಹೊ ರತು, ಇದುಶಾಣಿಗಳಲ್ಲಿ ನಡೆಯುವುದಸಾಧ್ಯವು, ಇದುವರೆಗೂ ಎಲೆಗಳೇ ಓಷಧಿಗಳಲ್ಲಿ ಬಹುಮುಖ್ಯವಾದ ಭಾಗವೆಂದು ಅಡಿಗಡಿಗೆ ಹೇಳುತ್ತಾ ಬಂದು ದಕ್ಕೆ ಕಾರಣವು ಈಗ ಚೆನ್ನಾಗಿ ನನಗೆ ವ್ಯಕ್ತವಾಯಿತಲ್ಲವೆ ? ಎಲೆಗಳು ಮಾಡುವ ಕೆಲಸವಾವುದೆಂಬುದನ್ನು ಪುನಃ ಗಮನಿಸಿ ನೋಡೋಣ. ಎಲೆಯು ಬೆಳಕನ್ನು ಗ್ರಹಿಸಿ, ಅದನ್ನು ಉಪಯೋಗಪಡಿಸಿಕೊಳ್ಳುವುದಕ್ಕಾಗಿ ಏರ್ಪಟ್ಟ ಒಂದು ಯಂತವಾಗಿದೆ. ನೀರು ಸುಲಭವಾಗಿ ಆವಿಯಾಗಿ ಹೋಗುವುದಕ್ಕಾ ಗಿಯೇ ಇವು ತೆಳ್ಳಗ, ಅಗಲವಾಗಿ ಸೃಷ್ಟಿಸಲ್ಪಟ್ಟಿರುವುದು, ನೀರು ಆವಿಯಾಗಿ ಹೋಗುತ್ತಿರುವುದರಿಂದ, ಅದರಲ್ಲಿ ಕರಗಿರುವ ಕೆಲವು ಉಪ್ಪು, ಗಳು ಎಲೆಗಳಲ್ಲಿ ನಿಂತು ಬಿಡುವುವು. ಇಂಗಾಲಾಮ್ಲವೂ, ಪ್ರಾಣವಾಯು