ಪುಟ:ಓಷದಿ ಶಾಸ್ತ್ರ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ]

ರು. 23 ಬರುವುವು, ಭತ್ತ, ಹುಲ್ಲು, ರಾಗಿ, ಜೋಳ, ಕಬ್ಬು ಮುಂತಾದುವುಗ ಳಲ್ಲಿ ಹೀಗೆಯೇ ಸಕಾ೦ಡದ ಕೆಳಗೆ, ತಂತಿಗಳಂತಿರುವ ಬೇರುಗಳು ಬಹ ಳವಾಗಿ ಉಂಟಾಗುವುವು. ಇವುಗಳನ್ನು ತೊಡಕುಬೇರುಗಳೆಂದು ಹೇಳ ಬಹುದು. (8 ನೆಯ ಪಟವನ್ನು ನೋಡಿರಿ.) ಬೇರುಗಳು, ಸಾಧಾರಣಬೇರುಗಳೆಂದೂ, ದಂಟುಬೇರುಗಳೆಂದೂ ಎರಡು ಬಗೆಯಾಗಿರುವುವು, ಸಾಧಾರಣ ಬೇರೆಂಬುದು ತಾಯಿಬೇರಿನಿಂ ದುಂಟಾಗುವುವು. ದಂಟು ಬೇರೆಂಬುದು ಪುಕಾಂಡದ ದಂಟುಗಳಲ್ಲಿ ಅನೇಕ ಕಡೆಗಳಿಂದ ಉಂಟಾಗತಕ್ಕಬೇರು. ಕೆಲವು ಗಿಡಗಳ ಬೇರುಗಳು ದಿಂಡಾಗಿ ಗೆಡ್ಡೆಗಳಾಗುವುವು. ಉದಾಹರಣವಾಗಿ, ಮೂಲಂಗಿ, ಗೆಣಸು, ಸಾಲಾಮಿಸರಿ ಮುಂತಾದವು ಗಳನ್ನು ಹೇಳಬಹುದು, ಮೂಲಂಗಿಗಿಡದಲ್ಲಿ, ಗಿಡವೊಂದಕ್ಕೆ ಗೆಡ್ಡೆ ಯೊಂದೇ ಇರುವುದು, ಪ್ರ) ಕಾಂಡವು ಬಹಳವಾಗಿ ಕುಗ್ಗಿ, ಗೆಡ್ಡೆಯ ತಲೆಯ ಮೇಲೆಯೇ ಎಲೆಗಳಿರುವುವು. ಮೂಲಂಗಿ ಗಿಡದಲ್ಲಿ, ಅದು ಸಸಿಯಾಗಿರು ವಾಗ, ತಾಯಿಬೇರು ಚಿಕ್ಕದಾಗಿದ್ದರೂ, ಗಿಡದ ಸಂಗಡ ಎಲೆಗಳು ಹೆಚ್ಚಾಗಿ ಬೆಳೆದು ಬಂದಹಾಗೆ, ಬೇರುಕೂಡ ಬೆಳೆಯುತ್ತಲೇ ಬಂದು, ದಪ್ಪನಾಗಿ ಗೆಡ್ಡೆಯಾಗುವುವು. (9 ನೆಯ ಪಟವನ್ನು ನೋಡಿರಿ.) ಗೆಣಸಿನ ಬಳ್ಳಿಗಳಲ್ಲಿ ಉಂಟಾಗತಕ್ಕ ಗೆಡ್ಡೆಯೆ೦ಬುದೂ ಅದರ ಬೇರು ಗಳೇ, ಈ ಬಳ್ಳಿಯ ಕವಲುಗಳು ನೆಲದಮೇಲೆಯೇ ಹಬ್ಬಿ ಹರಡಿಕೊಂಡು ಹೋಗುವಾಗ, ಗಿಣ್ಣುಗಳಲ್ಲಿ ದಂಟು ಬೇರುಗಳು ಹೊರಟು, ಭೂಮಿಯೊಳಕ್ಕೆ ನುಗ್ಗಿ ಹೋಗುವುವು. ಇವುಗಳಲ್ಲಿ ಕೆಲವು ಗೆಡ್ಡೆಗಳಾಗಿ ಬೆಳೆಯುವುವು. ಆದುದರಿಂದ ಗೆಣಸಿನ ಬಳ್ಳಿಯೊಂದರಲ್ಲಿ ಅನೇಕ ಗೆಡ್ಡೆಗಳುಂಟಾಗುವುವು -