ಪುಟ:ಓಷದಿ ಶಾಸ್ತ್ರ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಓಪ್ರಧಿ ಶಾಸ್ತ್ರ ) [V ನೆಯ ೫ ನೆಯ ಅಧ್ಯಾಯ. ಎ ಗೈ ಯೂ, ಎಲೆ ಯ ಮೊಗ್ಗೆಯೆಂಬುದು ಪಕ೦ಡದ ಶಾಖೆಗಳಲ್ಲಿ ಬಹುಮೃದುವಾದ ಅಗ) ಭಾಗವು. ಇದು ಬಹಳ ಸೂಕ್ಷ್ಮವಾಗಿ, ಉದ್ದವಾಗದೆ, ಸುರುಟಿಕೊಂಡು, ಬಹ ಳ ಚಿಕ್ಕ ಚಿಗುರೆಲೆಗಳಿಂದ ವಿಶೇಷವಾಗಿ ಮುಚ್ಚಲ್ಪಟ್ಟಿರುವ ಎಳೆ ಕೆಂಭೆ ಯಾಗಿಯೇ ಇರುವುದು. ಸಾಧಾರಣವಾಗಿ ಗಿಡಗಳಿಲ್ಲ, ಕೊಂಬೆಗಳ ತುದಿ ಗಳಲ್ಲಿ ಮೊಗ್ಗೆಗಳಿರುವುದು ಚೆನ್ನಾಗಿ ತಿಳಿಯುವುದು. ಇಂಥ ಮೊಗ್ಗೆಗಳು ಕೊಂಬೆಗಳ ತುದಿಯಲ್ಲಿರುವುದು ಮಾತ್ರವಲ್ಲದೆ, ಗಿಣ್ಣು ಸಂದುಗಳಲ್ಲಿಯ ಇರುವವೆಂಬುದೂ, ಸಾಧಾರಣವಾಗಿ ಮಿಕ್ಕೆಡೆಗಳಲ್ಲಿ ಉಂಟಾಗತಕ್ಕದ್ದಲ್ಲ ವೆಂಬುದೂ, ಮೊದಲೇ ತಿಳಿಸಲ್ಪಟ್ಟಿರುವುದು. ಕೊಂಬೆಗಳು ಹೆಚ್ಚಾಗಿರುವ ಗಿಡಗಳಲ್ಲಿ, ಮೊಗ್ಗೆಗಳ ಹೆಚ್ಚಾಗಿರುವವು. ಕೊಂಬೆಗಳಿಲ್ಲದ ಮರಗಳಲ್ಲಿ ತುದಿಯ ಮೊಗ್ಗೆಗಳತ ವೇ ಇರುವವು. ಮರಗಳಲ್ಲಿ , ಗಿಡಗಳಲ್ಲಿಯ, ಕೊನೆಯ ಮೊಗ್ಗೆಗಳು ಸಾಧಾ ರಣವಾಗಿ ಬೆಳೆಯುತ್ತಾ ಬರುವುವು. ಇವು ಬೆಳೆಯುವವರೆಗೂ ಗಿಣ್ಣಿನ ಮೊಗೆ ಗಳು ಹೆಚ್ಚಾಗಿ ಬೆಳೆಯುವುದಿಲ್ಲ. ತುದಿಯ ಮೊಗ್ಗೆಗಳು ವ್ಯತ್ಯಾಸಹೋಂ ದಿದ ಮೇಲಾಗಲಿ, ಕಾರಣಾಂತರದಿಂದ ಅವು ಕೆಟ್ಟು ಹೋದಮೇಲಾಗಲಿ, ಇವು ಬೆಳೆದು ಕೊಂಬೆಗಳಾಗುವುವೇ ಹೊರತು, ಮೊದಲು ಬೆಳೆಯತಕ್ಕವುಗಳ ಗಿಡಗಳ ಕೊಂಬೆಗಳು ಚೆನ್ನಾಗಿಬೆಳೆದು, ಪೊದರಾಗಿ ಮುಚ್ಚಿಕೊಳ್ಳುವುದ ಕ್ಯಾಗಿ, ಅವುಗಳನ್ನು ಆಗಾಗ ಕತ್ತರಿಸುವ ವಾಡಿಕೆಯುಂಟು, ಉದಾಹರ