ಪುಟ:ಓಷದಿ ಶಾಸ್ತ್ರ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

48 ಓಷಧಿ ಶಾಸ್ತ್ರ ) [V ನೆಯ ಕಡೆಗೆ ಎತಿಗಳಾಗಿಯ ಮೊಗ್ಗೆಗಳಾಗಿ ಬೆಳೆಯುವುವು. ಮರ ಗಳು ಕೆಡದೆ ಬಹುಕಾಲ ಬೆಳೆಯುವುದಕ್ಕೆ ಕಾರಣವು ಮೊಗ್ಗೆಗಳು ತುಂ ಬಿರುವುದೇ, ಆಲ, ಹೂವರಳಿ ಮುಂತಾದ ವೃಕ್ಷ ಶಾಖೆಗಳಲ್ಲಿ ಮೊಗ್ಗೆಗಳು ಹೆಚ್ಚಾಗಿರುವುದರಿಂದ, ಇವುಗಳನ್ನು ಕತ್ತರಿಸಿ ಬೇರೆ ಕಡೆಗಳಲ್ಲಿ ನಡುವುದ ರಿಂದಲೇ, ಅಂತಹ ಬೇರೆಬೇರೆ ಗಿಡಗಳನ್ನು ಬೆಳೆಯಿಸಬಹುದು. ಕೊಂಬೆಗಳ ತುಂಡುಗಳನ್ನು ಮಣ್ಣಿನಲ್ಲಿ ನಾಟಿದಮೇತಿ, ಅವುಗಳಿಂದ ಬೇರುಗಳುಹೊರಡು ವುದರಿಂದ, ಅವು ಬೇರೇ ಮರಗಳಾಗುವುವು. ಎಲ್ಲಾ ಗಿಡಗಳನ್ನೂ ಹೀಗೆ ಬೆಳೆ ಯಿಸಲು ಸಾಧ್ಯವಲ್ಲ. ಕೆಲವು ಮರಗಳ ಕೊಂಬೆಗಳೆ ಹೀಗೆ ಬೆಳೆಯಿಸುವು ದಕ್ಕೆ ಒದಗುವುವು ಕೆಲವು ಮರಗಳ ಕೊಂಬೆಗಳನ್ನು, ಅವುಗಳಿಗೆ ಸಮೀಪ ಜಾತಿವ್ಯಕ ಗಳ ಕೊಂಬೆಗಳ ಸಂಗಡ ಸೇರಿಸಿ, ಅಂತಿಸಿಟ್ಟರೆ, ಅವು ಸಂಗಡಸೇರಿ ಬೆಳೆ ಯುವುವು. ಇದಕ್ಕೆ ನಿದರ್ಶನವಾಗಿ, ಕಸಿವಾಸಿನ ಗಿಡಗಳನ್ನು ಹೇಳಬಹುದು, ಕೀಳುಜಾತಿಯ ಮಾವಿನಸಸಿಯು ಕ೦ಬೆಯನು ಕಡಿದುಹಾಕಿ, ಅದರ ಅಡಿಯ ಮರದೊಡನೆ, ಉತ್ತನುಜಾತಿಯ ಮರದ ಕೊಂಬೆಯೊಂದನ್ನು ಅಂಟಿ ನಿಟ್ಟರೆ, ಎರಡೂ ಕಲೆತು ಹೋಗುವುವು.ಮೇಲೆ ಅಂಟಿಸಿಟ್ಟ ಕೊಂಬೆಯ ದೆ. ಸೆಯಿ೦ದ ಹೊಸಕವಲುಗಳು ಒಡೆಯುವುವು. ಈ ಮರವು ಉತ್ತಮಜಾ ತಿಯ ಕೊನೆಯುಗುಣವನ್ನು ಹೊಂದುವುದಲ್ಲದೆ, ಕೀಳುಜಾತಿಯ ಸಸಿಯ ಣವನ್ನು ಹೊಂದುವುದಿಲ್ಲ. ಹೀಗೆ ಕೊಂಬೆಗಳನ್ನು ದಂಡಿಸದೆ, ಸತ್ಯಕ ವಾಗಿ ಒಂದು ಮೊಗ್ಗೆಯನ್ನು ಮಾತು ಮತ್ತೊಂದು ಗಿಡದ ಕೊಂಬೆಯ ಸಂ ಗಡ ಕಟ್ಟಡುವುದೂ ಉಂಟು. ಗುಲಾಬಿಗಿಡಗಳನ್ನು ಹೀಗೆ ಬೆಳೆಯಿಸುವುದು ವಾಡಿಕೆಯಾಗಿದೆ.