ಪುಟ:ಕಂಬನಿ-ಗೌರಮ್ಮ.pdf/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

-೩-

ಕತೆಗಾರಿಕೆಯ ಬೆಳವಣಿಗೆಯಲ್ಲಾದ ಅಂತರವನ್ನು ಕಂಡು ಅವರ ಜೀವನದ ಕತೆ ಇಷ್ಟಕ್ಕೇ ಮುಗಿಯಿತೇ ! ಎನಿಸುವದು.

ಕತೆಗಳಲ್ಲಿ ಕಟುತ್ವವಿದ್ದರೂ ರೊಚ್ಚಿಲ್ಲ; ಸೋದ್ದೇಶಲೇಖನದ ಸೂಚನೆಯಿದ್ದರೂ ಅವಾಸ್ಯನ ಆರ್ಭಟೆಯಿಲ್ಲ; ಕಲೆಯು ನೈಜವನ್ನು ಮರೆಮಾಚಿಲ್ಲ. —— ಎಲ್ಲೆಲ್ಲಿಯೂ ಹೆಣ್ಣಿನ ಹೃದಯದ ಸಾಕ್ಷಿಯನ್ನು ಸಾರುವ ಈ ಕಥಾಗುಚ್ಛವು ' ಶ್ರೀನಿವಾಸ' 'ಆನಂದ' ರ ಕತೆಗಳನ್ನು ಓದಿದ ವಾಚಕರಿಗೆ ನವಿಶ್ಲೇಷಣಾತ್ಮಕ ಕತೆಗಳ ಮಾದರಿಯಾಗಿ ಹೃದಯಂಗಮವಾಗುವದೆಂದು ನಾನು ನಂಬಿದ್ದೇನೆ.

ಸಾಧನಕೇರಿ
೨-೮-೩೯

ದ. ರಾ. ಬೇಂದ್ರೆ