ಪುಟ:ಕಂಬನಿ-ಗೌರಮ್ಮ.pdf/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮರದ ಕೆಳಗೆ ನಿಂತು ಪುಟ್ಟ ಕೈಗಳನ್ನು ಮೇಲೆ ಚಾಚಿ ಹೂ ಬೇಡುತ್ತಿದ್ದಳು. ಅವಳಿಗೆ ಮೂರ್ತಿ ಮೇಲಿಂದ ಒಂದು ಹೂ ಎಸೆದ. ಅದನ್ನು ಆಯ್ದುಕೊಂಡು 'ನಲಿನಿಗೆ' ಎಂದಳು ಪ್ರಭೆ. 'ಅವಳೇ ಕೇಳಿದರೆ ಕೊಡುತ್ತೇನೆ' ಎಂದ ಮೂರ್ತಿ. ಮೂರ್ತಿ ಅವಳನ್ನು ಆರು ದಿನಗಳಿಂದ ನೋಡುತ್ತಿದ್ದರೂ ಅವಳನ್ನು ನೋಡಿದ್ದು ಆ ದಿನ. ಅವನೊಡನೆ ಮಾತಾಡದೆ ನಾಲ್ಕೈದು ವರ್ಷಗಳಾಗಿವೆ. ಹಿಂದೆ ಅವಳೊಡನೆ ಆಡುತ್ತಿದ್ದ ಮೂರ್ತಿ ಈಗ ದೊಡ್ಡವನಾಗಿದ್ದಾನೆ. ಕಾಲೇಜಿನಲ್ಲಿ ಬಿ.ಎ. ಓದುತ್ತಿದ್ದಾನೆ. ಬಹಳ ನಾಚಿಕೆಯಾಯಿತು ನಲಿನಿಗೆ ಮೂರ್ತಿಯ ಮತು ಕೇಳಿ. ಹೂಗಳ ಮೇಲೆ ಅವಳಿಗೆ ಬಲು ಪ್ರೀತಿಯಾದ 'ಮೂರ್ತಿಯೊಡನೆ ಕೇಳಲಾರೆ' ಎಂದುಕೊಂಡಳು. ಆದರೆ ಅವನ ತಾಯಿ 'ಅದೇಕೆ ನಲಿನಾ, ಕೇಳಬಾರದೇ ಮೂರ್ತಿಯೊಡನೆಯೂ ಸಂಕೋಚವೇ' ಎಂದಳು. ಮೂರ್ತಿಯು ಮಾತು ಕೇಳಿ ನಾಚಿಕೆಯಿಂದ ಬಗ್ಗಿದ್ದ ಮುಖವನ್ನು ಮತ್ತಷ್ಟು ಬಗ್ಗಿಸಿಕೊಂಡು 'ಮೂರ್ತಿ, ನನಗೊಂದು ಹೂ' ಎಂದಳು. ಅವಳು ಹೇಳಿದ್ದು ಒಂದು ಹೂ, ಆದರೆ ಮೂರ್ತಿ ಕೆಳಗಿಳಿದು ಬಂದು ಬುಟ್ಟಿಯಲ್ಲಿದ್ದ ಎಲ್ಲಾ ಹೂಗಳೂ ಸುರಿದುಬಿಟ್ಟ ಅವಳ ತಲೆಯ ಮೇಲೆ. ನಾಚಿಕೆಯಿಂದ ನೆಲವನ್ನು ನೋಡುತ್ತಿದ್ದ ನಲಿನಿಯ ಕಣ್ಣುಗಳು ಕೃತಜ್ಞತೆಯ ಪುಟ್ಟ ನಗುವೊಂದರೊಡನೆ ವರ್ತಿಯ ಮುಖವನ್ನು ಮೆಲ್ಲನೊಂದು ಸಾರಿ ನೋಡಿ ರೆಪ್ಪೆಗಳ ಮರೆಯಲ್ಲಿ ಅಡಗಿಬಿಟ್ಟ. ಮೂರ್ತಿಯ ತಾಯಿ 'ನೋಡು; ಬಾಚಿದ ತಲೆ ಎಲ್ಲಾ ಹುಡುಗಾಟ ಮಾಡಿ ಕೆದರಿಬಿಟ್ಟೆ' ಎಂದು ನಕ್ಕರು ಚಿಕ್ಕ ಪ್ರಭೆ 'ನನಗೆ ಮಾತ್ರ ಒಂದೇ ಹೂ-ನಲಿನಿಗೆ ತಂಬ' ಎಂದು ಜಗಳವಾಡತೊಡಗಿದಳು.

ಮೂರ್ತಿಗೆ ಯಾರ ಮಾತುಗಳೂ ಕೇಳಿಸಲಿಲ್ಲ ನಲಿನಿಯು ನಗುವಿನೊಡನೆ ನೋಡಿದ ನೋಟವ ಮಾತ್ರ ಅವನ ಕಣ್ಣಿದಿರಿನಲ್ಲಿ ನಲಿದಾಡುತ್ತಿತ್ತು.

ಮೂರ್ತಿಯ ರಜ ತೀರಿಹೋಯಿತು. ಮರುದಿನ ಬೆಳಗಿನ ಎಂಟು ಗಂಟೆಯ ಬಸ್ಸಿನಲ್ಲಿ ಹೊರಬೇಕಾಗಿತ್ತು. ಹೊರಡುವ ಸನ್ನಾಹಗಳೆಲ್ಲವೂ

೭೫