ಪುಟ:ಕಂಬನಿ-ಗೌರಮ್ಮ.pdf/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೭೮

'ನಲಿನಾ ಕೈ ತೊಳ್ಕೊಕ್ಕೆ ಬತ್ತಾಳೆ. ಇಲ್ಲಿ ಅಡ್ಕೊತೀನಿ, ಮಾತಾಬೇಡ' ಎಂದು ಅಲ್ಲೇ ಕೂತುಬಿಟ್ಟಳು. ನನಿಯ ಹೆಸರು ಕೇಳಿದ ಕೂಡಲೆ ಮೂರ್ತಿ ತಾನೂ ಅಲ್ಲೇ ನಿಂತುಬಿಟ್ಟ, ನಾಲೈದು ನಿಮಿಷ- ಮೂರ್ತಿಗೆ ನಾಲ್ಕೈದು ಗಂಟೆಗಳ ತರುವಾಯ ನಲಿಸಿ ಚಂಬಿನಲ್ಲಿ ನೀರನ್ನು ತೆಗೆದು ಕೊಂಡು ಬಂದು “ ಪ್ರಭಾ' ಎಂದು ಕೂದಳು. ಪ್ರಭೆ ಮಾತಾಡಲಿಲ್ಲ. ಮೆಲ್ಲಮೆಲ್ಲನೆ ಹಿಂದಕ್ಕೆ ಸರಿದು ಅವಳಿಗೆ ಕಾಣದಂತೆಯೇ ವರ್ತಿಯ ಮನೆಯೊಳಗೆ ಸುಗ್ಗಿಬಿಟ್ಟಳು. ಪ್ರಭೆಯನ್ನು ಕಾಣದೆ ನಶಿಸಿ ಬೇಲಿಯ ಹತ್ತಿರ ಬಂದಳು. ನರ್ತಿ ನಿಂತಿದ್ದಾನೆ! ನೋಡಿ ನಾಚಿಕೆಯಿಂದವಳ ಮುಖವು ಕೆಂಪಾಗಿಹೋಯಿತು. ಹಿಂಗತೊಡಗಿದಳು, ನರ್ತಿ 'ನಲಿನಾ ಓಡೋದೇಕೆ; ನಾನೇನು ಹುಲಿಯೆ ?' ಎಂದ. ' ಪ್ರಭೆ ಕೈ ತೊಳಸ್ಬೇಕು. ಎಲ್ಲೋ ಅಡಗಿಕೊಂಡಿದ್ದಾಳೆ ' ಎಂದುಕೊಂಡು ಒಂದು ಹೆಜ್ಜೆ ಮುಂದಿಟ್ಟಳು. “ ಪ್ರಭೆ ನಮ್ಮನೇಲಿದ್ದಾಳೆ. ಒಂದು ನಿಮಿಷ ನಿಲ್ಲು ನಲಿನಾ' ಎಂದ ಮೂರ್ತಿ ಅತಿ ದೈನ್ಯವಾಗಿ, ನಲಿನಿ ಹಿಂತಿರುಗಿ ' ಕೆಲಸವಿದೆ ಏನು ?' ಎಂದಳು.

'ಏನು ನಲಿನಾ, ಇಷ್ಟೊಂದು ನಾಚಿಕೆ ನನ್ನೊಡನೆ ! ಗುರುತೇ ಇಲ್ಲವೇ ನನ್ನದು ? ನನ್ನೊಡನೆ ಜಗಳಾಡುತ್ತಿದ್ದುದೆಲ್ಲಾ ಮರೆತು ಪ್ರತಿ?' ಎಂದ ಮೂರ್ತಿ.

'ಆಗ ನಾವು ಚಿಕ್ಕರಾಗಿದ್ದೆವು; ಆಗಿನ ಮಾತೇಕೆ ಈಗ-' ಸರಿ ಉತ್ತರವಿತ್ತು ಹಿಂತಿರುಗಲನಾದ.

'ಸ್ವಲ್ಪ ತಡೆ ನಲಿನಾ-ಎಷ್ಟೊಂದು ಅವಸರ-ಆಗ ಚಿಕ್ಕವಳಾದ್ದೆ. ಹಳೆಯ ಸ್ನೇಹಿತನೊಡನೆ ಎರಡು ಮಾತೂ ಆಡಬಾರದಷ್ಟು ದೊಡ್ಡ ಮನುಷ್ಯಳಾಗಿ ಬಿಟ್ಟಿದ್ದೀಯಾ ಈಗ ?'

'ಹಾಗಲ್ಲ ಮೂರ್ತಿ, ನಾನುದು ಹಾಗಲ್ಲ.'

'ಮತ್ಹೇಗೆ ನಲಿನಾ?'

ಒಳಗಿನಿಂದ 'ನಲಿನಾ-ನಲಿನಾ-ನಲಿನಾ' ಎಂದ. ಅವಳ ಚಿಕ್ಕಮ್ಮ ಕೂಗಿದರು.