ಪುಟ:ಕಂಬನಿ-ಗೌರಮ್ಮ.pdf/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೮೦

ಮೂರ್ತಿ ಯೂನಿವರ್ಸಿಟಿಯಲ್ಲಿ ಮೊದಲನೆಯವನಾಗಿ ಪಾಸಾದ. ಪಾಸಾದದೊಂದೇ ಅಲ್ಲ-ಐಶ್ವರ್ಯವಂತನಾದ ಜಮೀನ್ದಾರನೊಬ್ಬನಲ್ಲಿ ಪೈವೇಟ್ ಟ್ಯೂಟರ್ ಕೆಲಸವೂ ಸಿಕ್ಕಿತು. ಅವನ ಪ್ರೊಫೆಸರುಗಳ ಶಿಫಾರಸು ಹಾಗೂ ಅವನ ಯೋಗ್ಯತೆಯ ಫಲವಾಗಿ ಸಂಬಳವೂ ಕಡಿಮೆಯಾಗಿರಲಿಲ್ಲ. ಬಹಳ ದಿನಗಳ ಬಯಕೆ ಕೈಗೂಡಿ ಮೂರ್ತಿ ಸ್ವತಂತ್ರನಾದ. ತಾಯಿಯನ್ನು ತನ್ನೊಡನೆ ಇರಿಸಿಕೊಂಡ. ನಳಿನಿಯನ್ನು ಮದುವೆಯಾಗುವದೊಂದು ಬಾಕಿ.

ಆದರೆ ಎಲ್ಲಾ ಬಯಕೆಗಳೂ ಯಾರಿಗೂ ಪೂರ್ತಿಯಾಗುವಂತಿಲ್ಲ. ಆ ವರ್ಷ ಅವನ ತಾಯಿ ವಿಷಮಸೀತಜ್ವರದಿಂದ ಮಗನ ತೊಡೆಯ ಮೇಲೆ ತಲೆಯಿಟ್ಟುಕೊಂಡು ನಲಿನಿಯನ್ನು ಮದುವೆಯಾ ಸುಖವಾಗಿ ಬಾಳು ನನ್ನ ಕಂದಾ' ಎಂದಾಶೀರ್ವಾದ ಮಾಡಿ ಪರಲೋಕಯಾತ್ರೆ ಮಾಡಿದಳು.

ಮೂರ್ತಿಯ ಆಶೆಯು ಗೋಪುರ ಮುರಿದುಬಿತ್ತು. ಅವನ ಜೀವನದ ಧ್ರುವತಾರೆ ಅದೃಶ್ಯವಾಯಿತು. ಅವನ ಸುಖ-ದುಃಖ, ಆನಂದ ಉತ್ಸಾಹಗಳಲ್ಲಿ ಅಂದಿನ ವರೆಗೆ ಛಾಯಾಗಿದ್ದು ಅವನ ಮೇಲೆ ಪ್ರೇಮದ ಮಳೆಯನ್ನು ಸುರಿಸುತ್ತಿದ್ದ ತಾಯಿ ಇಲ್ಲವಾದಳು. ಜೀವನವ ಸುಖ ಸಂತೋಷಮಯವೆಂದಿದ್ದ ಮೂರ್ತಿಗೆ ಅದು ಸಾರರಹಿತವೆನಿಸಿತು.

ತಂದೆಯಂತೂ ನಳಿನಿಯ ವಿಷಯದಲ್ಲಿ ಮಗನಿಗಿದ್ದ ಭಾವನೆಯನ್ನು ತಿಳಿದಂದಿನಿಂದ ಅವನೊಡನೆ ಮಾತೇ ಆಡುತ್ತಿರಲಿಲ್ಲ. ಇನ್ನುಳಿದವರಾರು ! ನಲಿನಿ-ನಲಿನಿ-ನಲಿನಿ! ಅವಳಿಲ್ಲದೆ ಬದುಕುವುದು ಅಸಾಧ್ಯ.

ಒಂದು ವರ್ಷದ ತರುವಾಯ ತಂದೆಯ ಇಚ್ಛೆಗೆ ವಿರೋಧವಾಗಿ ಮೂರ್ತಿ ನಳಿನಿಯನ್ನು ಮದುವೆಯಾದ. ಧಾರೆಯಾದುದೆಂದೇ ತಡ. ಅವಳ ಎರಡು ಕೈಗಳನ್ನೂ ಹಿಡಿದುಕೊಂಡು ಅವಳ ಕಣ್ಣುಗಳನ್ನೇ ನೋಡಿ ನಗುನಗುತ್ತಾ ಮೂರ್ತಿ ಕೇಳಿದ: 'ನಲಿನಾ, ನನ್ನ ನಲಿನಾ,