ಪುಟ:ಕಂಬನಿ-ಗೌರಮ್ಮ.pdf/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಹೋಗಿಯೇ ಬಿಟ್ಟಿದ್ದ!

ಮ್ಮೊಮ್ಮೆ ಕಲ್ಪನೆಗಿಂತಲೂ ನಿಜವೂ ಆಶ್ಚರ್ಯಕರವಾಗಿರುತ್ತದೆ. ಕೆಲವು ವೇಳೆ ಕಟ್ಟುಕತೆಯೋ ಎನ್ನುವಷ್ಟು ಆಸ್ವಾಭಾವಿಕವೂ ಆಗಿರುತ್ತದೆ. ಈಗ ನಾನು ಹೇಳುವ ವಿಷಯವೂ ಆ ಜಾತಿಗೆ ಸೇರಿದ್ದು. ಕೇಳಿದವರು ಇದು ಖಂಡಿತ ನನ್ನ ಕಲ್ಪನೆಯ ಪರಿಣಾಮವೆಂದು ಹೇಳದಿರಲಾರರು. ಅದಕ್ಕೋಸ್ಕರವಾಗಿಯೇ ಈ ವಿಷಯಕ್ಕೆ ಸಂಬಂಧಪಟ್ಟ ಪತ್ರಿಕೆಗಳನ್ನೆಲ್ಲ ನಾನು ಜೋಪಾನವಾಗಿಟ್ಟಿರುವುದು. ಯಾರಿಗೆ ಸಂಶಯವಿದೆಯೋ ಅವರು ಬಂದು ಇವುಗಳನ್ನು ಪರೀಕ್ಷಿಸಬಹುದು. ಆಗ ನಿಜವಾಗಿಯೂ 'ಸತ್ಯವು ಕಲ್ಪನೆಯನ್ನು ಮೀರಿಸುವುದು' ಎಂಬುದರ ಮನವರಿಕೆಯಾಗದಿರಲಾರದು.

ಕಾಲೇಜಿನಲ್ಲಿ ಓದುತ್ತಿದ್ದ ಒಂದೇ ಊರಿನ ನಾವೈದು ಜನ ಮಿತ್ರರು ಯಾವುದೋ ಒಂದು ರಜೆಯಲ್ಲಿ ಊರಿಗೆ ಹಿಂದಿರುಗುತ್ತಿದ್ದೆವು. ನಾವು ಕುಳಿತ ಡಬ್ಬಿಯಲ್ಲಿ ನಾವೈವರಲ್ಲದೆ ಬೇರೊಬ್ಬ ಮುದುಕನೂ ಇದ್ದನು. ಆ ಮುದುಕನಿಗೆ ಅದೇಕೆ ನನಗೆ ಆ ಕತೆ ಹೇಳಬೇಕೆಂದು ತೋರಿತೋ

ತಿಳಿಯದು. ಕೆಲವು ದಿನಗಳ ಹಿಂದೆ ನಡೆದೊಂದು ಕೊಲೆಯ ವಿಷಯ ನಾವು ಮಾತಾಡುತ್ತಿದ್ದೆವು. ಅಷ್ಟು ಹೊತ್ತೂ ಸುಮ್ಮನಿದ್ದ ಆ ಮುದುಕ ತಾನಾಗಿಯೇ 'ನಾನೊಂದು ಕತೆ ಹೇಳಲೆ?' ಎಂದು ಕೇಳಿದ ಮುದುಕ ಯೋಗ್ಯನಂತೆ ಬೇರೆ ತೋರುತ್ತಾನೆ. ನಿಷ್ಠುರವಾಗಿ 'ನಿನ್ನ ಕತೆ ಕೇಳುವ ಇಚ್ಛೆ ನಮಗಿಲ್ಲ' ಎಂದುಬಿಡುವುದು ಹೇಗೆ ? ಇಷ್ಟವಿಲ್ಲದಿದ್ದರೂ ಸಮ್ಮತಿ ಸೂಚಿಸಿದೆವು.

12