ಪುಟ:ಕಂಬನಿ-ಗೌರಮ್ಮ.pdf/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೪

ಕೊಡಲೊಪ್ಪಿದ. ಈ ಸಂಬಂಧದಲ್ಲಿ ಲತೀಫಾಳ ಇಷ್ಟಾನಿಷ್ಟಗಳನ್ನು ಕೇಳುವಂತಿರಲಿಲ್ಲ. ಅವಳಿಗೂ ಅದು ಚೆನ್ನಾಗಿ ಗೊತ್ತಿತ್ತು. ಅವನ ಹತ್ತಿರmಹೋಗಿ ಹೇಳುವುದೊಂದೇ ಅವಳಿಗೆ ತೋರಿದ ಉಪಾಯ. ಆದರೆ ಅವಳುmಮನೆಬಿಟ್ಟು ಹೊರಗೆ ಹೋಗದಂತೆ ಎಚ್ಚರವಾಗಿದ್ದ ಅವಳ ಚಿಕ್ಕಪ್ಪ.

"ಆ ದಿನ ಅವನು ಎಂದಿನಂತೆ ಅವಳನ್ನು ಕಾದ. ಗಂಟೆ ಏಳಾದರೂ ಅವಳ ಸುಳಿವಿಲ್ಲ. ಅವಳನ್ನು ನೋಡದೆ ಅವನಿಗೆ ಸಮಾಧಾನವಿಲ್ಲದಿದ್ದರೂ, ಕತ್ತಲಾಗುತ್ತ ಬಂದುದರಿಂದ ಯಜಮಾನನ ಮನೆಗೆ ಹೋಗಿ ದೀಪ ಹತ್ತಿಸದೆ ಉಪಾಯವಿರಲಿಲ್ಲ. ಮನಸ್ಸನ್ನು ಆವಳೆಡೆಗೆ ಕಳುಹಿಸಿ ಅವರು ಮನೆಗೆ ಬಂದ.

"ಮರುದಿನ ಎಂದಿಗಿಂತಲೂ ಒಂದು ಗಂಟೆ ಮೊದಲೇ ಎದ್ದ. ಬೆಳಗಿನ ಕೆಲಸಗಳನ್ನೆಲ್ಲಾ ಬೇಗ ಬೇಗ ತೀರಿಸಿ, ಎಲ್ಲರೂ ಕಾಫಿ ಕುಡಿಯುತ್ತಿರುವ ಸಮಯ ನೋಡಿ ಅವಳ ಮನೆಗೆ ಹೊರಟ. ಅವಳು ಹಟ್ಟಿಯಲ್ಲಿ ಹಾಲು ಕರೆಯುತ್ತಿದ್ದವಳು, ಇವನು ದೂರದಲ್ಲಿ ಬರುವುತ್ತಿರುವುದನ್ನು ನೋಡಿ, ಹಾಲಿನ ತಂಬಿಗೆಯನ್ನು ಅಲ್ಲೇ ಇಟ್ಟು ಅವನೆಡೆಗೆ ಓಡುತ್ತ ಹೋದಳು.

“ಅವಳು ತನ್ನ ದುಃಖವನ್ನೆಲ್ಲಾ ತೋಡಿಕೊಳ್ಳುತ್ತಿರುವಾಗ ಅವನು ದಿಕ್ಕು ತೋರದೆ ನಿಶ್ಚಲವಾಗಿ ನಿಂತಿದ್ದ. ಅವಳಂತೂ ಒಂದೇಸವನೆ 'ನಿನ್ನನ್ನು ಬಿಟ್ಟು ನಾನು ಇರಲಾರೆ; ನಿನ್ನ ಕೈಯಿಂದಲೇ ನನ್ನನ್ನು ಕೊಂದುಬಿಡು' ಎಂದು ಅಳುತ್ತಿದ್ದಳು. ಆಗವನಿಗೆ ಬುದ್ದಿ ಇತ್ತೋ ಇಲ್ಲವೋ ಎಂದು ನಾನೀಗ ಹೇಳಲಾರೆ. ಆದರೆ ಅವನಂತೆ ನಾನವಳನ್ನು ಪ್ರೀತಿಸಿ, ಅವಳನ್ನು ಇನ್ನೊಬ್ಬನ ಪಾಲಿಗೆ ಒಪ್ಪಿಸುವ ಪ್ರಸಂಗ ಬಂದಿದ್ದರೆ ನಾನು ಅವನು ಮಾಡಿದಂತೆಯೇ ಮಾಡುತ್ತಿದ್ದೆನೇನೋ ನಿಜ. ಆಗವನಿಗೆ ಹಿತಾಹಿತಗಳನ್ನು ವಿವೇಚಿಸುವ ಶಕ್ತಿಯಿರಲಿಲ್ಲ. ಅವಳನ್ನು ಕರೆದುಕೊಂಡು ಎಲ್ಲಾದರೂ ಹೊರಟುಹೋಗಬಹುದಿತ್ತು. ಆದರೆ ಆತರದ ಯೋಚನೆಗೆ ಎಡೆಕೊಡತಕ್ಕ ಮನುಷ್ಯನಾಗಿರಲಿಲ್ಲ ಅವನು. ಅವಳನ್ನು ಮದುವೆಯಾಗದೆ ಕಳ್ಳನಂತೆ ಕರೆದುಕೊಂಡು ಹೋಗುವುದು