ಪುಟ:ಕಂಬನಿ-ಗೌರಮ್ಮ.pdf/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹೇಗೆ ಕಳೆದ ಎಂದು ಹೇಳಬೇಕಾದರೆ ಹುಚ್ಚಿಲ್ಲದವರಿಗೂ ಹುಚ್ಚು ಹಿಡಿದೀತು. ಅಂತೂ ಕಳೆದ-ಅವಳ ಹತ್ತಿರ ಹೋಗುವುದೇ ಜೀವನದ ಹಂಬಲವಾದರೂ ಹೋಗಲು ದಾರಿ ತೋರದೆ, ಹುಚ್ಚರ ಮಧ್ಯದಲ್ಲಿ ಹುಚ್ಚರಿಗಿಂತಲೂ ಹುಚ್ಚನಾಗಿ ಕಳೆದ ೩೦ ವರ್ಷಗಳ ತರುವಾಯು ಒಂದು ದಿನ ಅವನ ಬಿಡುಗಡೆಯಾಯಿತು. 'ಬಿಡುಗಡೆಯಾಯಿತು; ಇನ್ನೇನು ಹೋಗಬಹುದಲ್ಲ' ಎಂದು ನೀವು ಕೇಳಬಹುದು. ಹೌದು ಹೋಗಬಹುದು. ಇದೋ ಹೊರಟೆ-ಹೋಗುತ್ತೇನೆ....'

ಇದೇನು! ಕತೆ ಹೇಳುತ್ತ ಹೇಳುತ್ತ ಇವನಿಗೆ ಹುಚ್ಚು ಹಿಡಿಯಿತೇ ಎಂದು ನಾವು ಒಬ್ಬರ ಮುಖವನ್ನೊಬ್ಬರು ನೋಡಿಕೊಂಡೆವು. ಮತ್ತೆ ಅವನ ಮುಖವನ್ನು ನೋಡುವುದರೊಳಗೆ, ಅವನು ವಿಂಚಿನ ವೇಗದಿಂದ ಹೋಗುತ್ತಿದ್ದ ಆ ರೈಲ ಕಿಟಕಿಯಿಂದ ಕೆಳಗೆ ಹಾರಿಬಿಟ್ಟಿದ್ದ.

ದಿಙ್ಮೂಢರಾದ ನಾವು ಸರಪಳಿಯನ್ನೆಳೆದು ರೈಲನ್ನು ನಿಲ್ಲಿಸಿದೆವು.

ಆದರೆ ಈ ಸಾರಿ ೩೦ ವರ್ಷಗಳಿಂದ ದಾರಿ ಕಾಯುತ್ತಿದ್ದ ಲತೀಫಾಳೆಡೆಗೆ ಅವನು ಹೋಗಿಯೇ ಬಿಟ್ಟಿದ್ದ.

ಸಪ್ಟಂಬರ ೧೯೩೮

೯೭
13