ಪುಟ:ಕಂಬನಿ-ಗೌರಮ್ಮ.pdf/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸುಳ್ಳು ಸ್ವಪ್ನ

೨೬-೫-೨೮

ಕಾಲ ಕಳೆಯುವುದೊಂದು ದೊಡ್ಡ ಭಾರ. ಅದನ್ನು ಹೊರುವ ಕಷ್ಟವನ್ನು ಬರೆಯಲಾರೆ. ಮಾತಾಡಲು ಯಾರೂ ಇಲ್ಲ. ಓದಲು ನನಗೆ ಬೇಕಾದ ಪುಸ್ತಕವಿಲ್ಲ. ಇದ್ದರೂ ಹೇಗೆ ತಾನೆ ಓದಲಿ? 'ಅವನ' ಮನೆಯಿಂದ ಬರುವಾಗ ನನ್ನ ಪುಸ್ತಕವನ್ನು ಮರೆತು ಬಂದಿರುವೆನು. ಪುಸ್ತಕವು ಮರೆತು ಹೋಯ್ತು-ಹೋಗಲಿ, ಆದರೆ ಅದಕ್ಕೂ ಹೆಚ್ಚಿನದನ್ನು ಇರಲಾರದೆ ಬಂದಿರುವೆಸು.

ಶಾಂತ ಕಾಗದ ಬಂದಿದೆ. ಬೇಕಾದ ಹಾಗೆ ಬರೆವಿರುವಳು. ಆದರದು ನನ್ನ ಉರಿಯುವ ಹೃದಯವನ್ನು ತಂಪುಮಾಡಬಲ್ಲುದೇ ? ಮನಸ್ಸಿಗೆ ಸುಖಕೊಡಬಲ್ಲುದೇ ? ಯಾರೊಡನೆ ಹೇಳಲಿ....ಹೇಳುವಂತಹ ಮಾತುಗಳಲ್ಲ..ಏನು ಮಾಡಲಿ......

ಜ್ಞಾಪಕಶಕ್ತಿಯನ್ನು ದೇವರು ಮನುಷ್ಯನಿಗೆ ಕೊಡಬಾರದಿತ್ತೆಂದು ತೋರುವುದು. ಎಷ್ಟು ಕ್ರೂರ! ಎಂತಹ ಹಟಮಾರಿ ! ತಪ್ಪಿಸಿಕೊಳ್ಳಲು ನನ್ನ ಪ್ರಯತ್ನವೆಲ್ಲವೂ ನಿಷ್ಪಲ. ಯಾವ ರೀತಿಯಿಂದ ಜ್ಞಾಪಕವು ಬಂಧಿಸಿರುವ ಬಲೆಯಿಂದ ಬಿಡಿಸಿಕೊಳ್ಳಲಾಗುವುದಿಲ್ಲ. ನಮ್ಮ ಮನೆಯ ಸುತ್ತುಮುತ್ತ ಸೃಷ್ಟಿ ತನ್ನ ಸೌಂದರ್ಯದ ಬೀಡನ್ನು ಕಟ್ಟಿದೆ. ಅದರ ವೈಭವಪೂರ್ಣವಾದ ಸೌಂದರ್ಯವನ್ನು ನೋಡಹೊರಟರೆ ತಾನೆ ಜ್ಞಾಪಕದ ಕ್ರೂರತ್ವವು ತಪ್ಪುವುದೇ ? ಇಲ್ಲ-ಸಾಧ್ಯವಿಲ್ಲ. ಇನ್ನಾವದನ್ನು