ಪುಟ:ಕಂಬನಿ-ಗೌರಮ್ಮ.pdf/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬-೭-೨೮

ಎರಡು ದಿನಗಳೆಷ್ಟು ಬೇಗ ಕಳೆದುಹೋದುವು? ಭಾರವಾದ ಸಮಯವು, ಹೊರಲಾರದ ಸಮಯವು ಅವನಿದ್ದ ಎರಡು ದಿನ ಎಷ್ಟು ಬೇಗಹಾರಿಹೋಯಿತು? ಆ ಎರಡು ದಿನಗಳು ಮುಗಿಯದೆ ಇರಬಾರದಿತ್ತೇ..ಕಳೆದ ಆ ಸುಖಮಯವಾದ ದಿನಗಳು ಇನ್ನು ಮುಂದೆ ಬರುವವೇ?.. ಬರದಿದ್ದರೇನು!..ಆ ನೆನಪು, ಆ ಸವಿಸ್ಮೃತಿಯು ಸದಾ ನನ್ನ ಹೃದಯದಲ್ಲಿ ಜಾಗೃತವಾಗಿಯೇ ಇರುವುದು....

ನಿನ್ನೆ ದಿನವನ್ನು ನೆನೆಸಿಕೊಂಡರೆ ನನ್ನ ಮನಸ್ಸಿನಲ್ಲಾಗುವ ಭಾವನೆಗಳನ್ನು ಬರೆಯಲಾರೆ..ಹೇಗೆ ತಾನೆಬರೆಯಲಿ ? ಬರೆದು ಪೂರೈಸುವುದಾದರೂ ಹೇಗೆ ? ಬರೆದಂತೆ ಹೆಚ್ಚುವುದು-ದೇವಾ ! ಅಂತಹ ದಿನಗಳು ಇನ್ನೂ ಬರುವವೇ ?

ನಾನು ಆ ದಿನ ಐದು ಗಂಟೆ ಹೊಡೆಯುವ ಮೊದಲೇ ಹಾಸಿಗೆಯನ್ನು ಬಿಟ್ಟು ಎದ್ದಿದ್ದೆ; ಬೆಳಕು ಇನ್ನೂ ಸರಿಯಾಗಿ ಹರಿದಿರಲಿಲ್ಲ. ಎದ್ದು ಮುಖ ತೊಳೆದುಕೊಂಡು ಬರುವಾಗ ನಾನು ನೆಟ್ಟು, ಪ್ರೀತಿಯಿಂದ ಬೆಳೆಸಿದ ಮಲ್ಲಿಗೆಯ ಗಿಡದಿಂದ ಹೂ ಕುಯಿದು ಬೊಗಸೆಯಲ್ಲಿ ತರುತ್ತದ್ದೆ. ಬರುವಾಗ ಇದಿರಾತ. ಅವನೂ ಎದ್ದು ಮುಖ ತೊಳೆಯುವುದಕ್ಕೆ ಬರುತ್ತಿದ್ದ. ನೋಡಿದೊಡನೆ ನನ್ನ ಮನಸ್ಸಿನಲ್ಲೇನಾಯಿತೋ ಹೇಳಲಾರೆ... ಹೇಳಲು ಪ್ರಯತ್ನಿಸಿದಷ್ಟೂ ಹೇಳುವುದು ಅತಿಕಷ್ಟವಾಗಿ ತೋರುತ್ತದೆ .. ನನ್ನ ಆಗಿನ ಮನಸ್ಸಿನ ಭಾವವು ಬರೆವಣಿಗೆಗೆ ನಿಲುಕುವಂತಹುದಲ್ಲ. ಯಾವಾಗಲೂ ನನಗೆ ಅವನನ್ನು ನೋಡಿದಾಗ ಹಾಗಾಗುವದು. ಎಷ್ಟೆಷ್ಟು ಮುಚ್ಚಿಡಲು ಪ್ರಯತ್ನಿಸಿದರೂ ನನ್ನ ಕಣ್ಣುಗಳು ಹೃದಯಾಂತರಾಳದಿಂದ ಆ ಭಾವನೆಗಳನ್ನು ಹೊರಗೆಡವಿ ಬಿಡುವವು. . ನನ್ನನ್ನು ನೋಡಿ 'ಬೆಳಗಾಗುವ ಮೊದಲೇ ಏಕೆ ಎದ್ದೆ!' ಎಂದು

ಕೇಳಿದ-ನನ್ನ ಬಾಯಿಂದ ಮಾತುಗಳು ಹೊರಡಲಿಲ್ಲ. ಕೈಯಲ್ಲಿದ್ದ ಆಗ ತಾನೆ ಕುಯಿದ ಮಲ್ಲಿಗೆಯ ಮೊಗ್ಗೆಗಳನ್ನು ಅವನ ಮುಖಕ್ಕೆರಚಿ ಅಲ್ಲಿಂದ ಓಡಿ ಹೋಗಿಬಿಟ್ಟೆ. ನನ್ನ ವಿಚಿತ್ರ ವ್ಯವಹಾರವನ್ನು ನೋಡಿ ಅವನೇನು

೧೦೧