ವಿಷಯಕ್ಕೆ ಹೋಗು

ಪುಟ:ಕಂಬನಿ-ಗೌರಮ್ಮ.pdf/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನೋಡುತ್ತಿರುವಳಲ್ಲ. ಅವನ ಆದೇ ಆ ವಿಶಾಲವಾದ ಕಣಗಳು-ಅದೇ ಮೂಗು-ಅದೇ ಕೆಂಪು ತುಟಿಗಳು-ಅವನೇ ಮಗುವಿನ ನಿರ್ಮಲ ಕಣ್ಣುಗಳಿಂದ ನೋಡುತ್ತಿರುವನೇನು? ಅವನ ಹೆಂಡತಿ ಅವಳು ಅವನಿಗೆ ಅನುರೂಪಳಾದ ಪತ್ನಿ.. ಅವಳ ನಗುಮುಖ.. ಹೌದು, ಅವಳನಿಗೆ ಅನುರೂಪಳಾದ ಪತ್ನಿ. ಅವನ ಮುಖದಲ್ಲಿ ಸುಖ ಸಂತೋಷ ನಲಿದಾಡುತ್ತಿದೆ. ಅವನು ಈಗ ಸುಖಿ. ದೇವರನನನ್ನು ಸದಾ ಹಾಗಿಟ್ಟಿರಲಿ..ಅವನ ಹೆಂಡತಿಯನ್ನೂ ಮಗುವನ್ನೂ ಪರಮಾತ್ಮನು ಕಾಪಾಡು.. ಇದೇ ನನ್ನ ಪ್ರಾರ್ಥನೆ..

ನಾನು! ದುಃಖಮಯವಾದ ಪ್ರಪಂಚದಲ್ಲಿ ನಾನೇಕೆ ಸುಖವನ್ನು ಬಯಸಬೇಕು? ಸುಖ ಪಡೆಯಲು ನನಗಾವ ಅಧಿಕಾರವೂ ಇಲ್ಲ.. ಆದರೆ ದೇವಾ! ನನಗೆ ಜ್ಞಾಪಕವನ್ನು ಮಾತ್ರ ಕೊಡಬೇಡ. ನೆನಪು ಬೀಸಿರುವ ಬಲೆಯಿಂದ ನನ್ನನ್ನು ಬಿಡಿಸು. ಮರೆಯಲು ಪ್ರಯತ್ನಿಸಿದಷ್ಟೂ ಚಿಗುರುವ ಜ್ಞಾಪಕದ ಹಿಡಿತದಿಂದ ನನ್ನನ್ನು ಪಾರುಮಾಡು.. ನನಗೇಕೆ ಹುಚ್ಚು ಹಿಡಿಯುವದಿಲ್ಲ....

ಮೇ ೧೯೩೪
೧೦೭