ಪುಟ:ಕಂಬನಿ-ಗೌರಮ್ಮ.pdf/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೧೪

“ವಸಂತ, ಇದು ನಾಲ್ಕು ವರ್ಷದ ಹಿಂದಿನ ಮಾತು. ಆಗ ಪಾಪ ಏನೂ ತಿಳಿಯದ ಹುಡುಗಿ, ತಾಯಿಯ ಸ್ನೇಹ ಮಮತೆಗಳನ್ನರಿಯದೆ ಹುಡುಗನಾದ ನನ್ನೊಡನೆ ಹುಡುಗತನದಲ್ಲಿ ಬೆಳೆದ ತುಂಟ ಹುಡುಗಿ. ಮಾಡಬೇಡ ಎಂಬುದನ್ನು ಮಾಡಿಯೇ ತೀರುವೆನೆಂದು ಹೇಳುವ ಹಠವಾದಿ, ಅಂದಿಗೂ ಇಂದಿಗೂ ಕೇವಲ ನಾಲೈದು ವರ್ಷಗಳ ಅಂತರ ವಸಂತ; ಆದರೂ ಈ ನಾಲೈದು ವರ್ಷಗಳಲ್ಲಿ ಎಷ್ಟೊಂದು ನಡೆದು ಹೋಗಿದೆ! ಬಾಲ್ಯದಿಂದಲೂ ನನ್ನೊಡನೆ ಬೆಳೆದ ಪಾಪ ಈಗಿಲ್ಲ-ಅವಳ ಗಂಡ ವಿಲಾಯತಿಗೆ ಹೋಗುವಾಗಲೇ ಅವಳನ್ನು ಕೊಂದು ಹಾಕಿ,

ಅವನು ಹೋಗಿ ಒಂದೆರಡು ತಿಂಗಳಾಗುವ ತನಕ ಪಾಪ ಇಂದಲ್ಲದಿದ್ದರೆ ನಾಳೆ ಸಮಾಧಾನ ಹೊಂದುವಳೆಂದಿದ್ದೆ. ಆದರೆ ನನ್ನೆಣಿಕೆ ತಪ್ಪಾಯ್ತು. ದಿನ ಕಳೆದಂತೆ ಪಾಪ, ನನ್ನ ತಾಯಿಲ್ಲದ ತಂಗಿ, ಪಾಪ ಒತ್ತಿ ಹೋದಳು. ತಂದೆ ಅವಳ ಸ್ಥಿತಿಯನ್ನು ನೋಡಿ : ಏನೋ ಕಾಯಿಲೆ; ಔಷಧಿ ಮಾಡಿಸಬೇಕು' ಎಂದರು. ಚಿಕ್ಕಮ್ಮ 'ಸುಮ್ಮನೆ ಕೂತಲ್ಲೇ ಕೂತು ಸದಾ ಓದುತ್ತಿದ್ದರೆ ಕಾಯಿಲೆ ಬರದೆ ಏನಾದೀತು ?' ಎಂದು ಗೊಣಗಿದರು. ನನಗೆ ಮಾತ್ರ ಪಾಕಶನಿಗೆ ಶಾರೀರಿಕ ಕಾಯಿಲೆ ಏನೂ ಇಲ್ಲವೆಂದು ಗೊತ್ತು. ಆದರೆ ಗಂಡ ಉಚ್ಚ ಶಿಕ್ಷಣಕ್ಕಾಗಿ ವಿಲಾಯತಿಗೆ ಹೋದರೆ ಇನ್ನೊಂದು ಕೊರಗುವದೇಕೆ ಎಂಬುದು ನನಗೊಂದು ದೊಡ್ಡ ಸಮಸ್ಯೆಯಾಗಿತ್ತು, ಅವಳನ್ನೇ ಆ ವಿಷಯದಲ್ಲಿ ಕೇಳಲೂ ನನಗೆ ಇಷ್ಟವಿರಲಿಲ್ಲ. ಏನಿದ್ದರೂ ನನ್ನೊಡನೆ ಮುಚ್ಚು ಮರೆ ಇಲ್ಲದೆ ಹೇಳುವುದು ಅವಳ ಸ್ವಭಾವ. ಅಂತವಳು ಇಷ್ಟೊಂದು ಕೊರಗುತ್ತಿದ್ದರೂ ನನ್ನೊಡನೆ ಹೇಳದಿರುವಾಗ ನಾನೇ ಹೇಳೆಂದು ಹೇಗೆ ಕೇಳಲಿ ಎಂದೆನಿಸುತಿತ್ತು ನನಗೆ. ಅವಳಾಗಿಯೇ ಹೇಳುವ ತನಕ ಕೇಳಲಾರೆ ಎಂದುಕೊಂಡೆ. ದಿನದಿನಕ್ಕೆ ನನ್ನ ಕಣ್ಣಿದಿರು ಅವಳು ಕುಗ್ಗುವುದನ್ನು ನೋಡುತ್ತಿದ್ದರೂ ನನ್ನ ನಿಶ್ಚಯವ ಬದಲಾಗಲಿಲ್ಲ.

“ಈ ಮಧ್ಯೆ ಪಾಪ ಅವನಿಗೆ ಒಂದೆರಡು ಕಾಗದ ಬರೆದಳು. ಒಂದಕ್ಕೂ ಪ್ರತ್ಯುತ್ತರವಿಲ್ಲ. ಅವನ ಈ ಔದಾಸೀನ್ಯವನ್ನು ನೋಡಿದ ಮೇಲಂತೂ