ಪುಟ:ಕಂಬನಿ-ಗೌರಮ್ಮ.pdf/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಸನ ಮನೋವ್ಯಥೆಗೆ ಅವನೇ ಕಾರಣನೆಂದು ನನಗೆ ನಂಬಿಕೆಯಾಗಿ ಹೋಯ್ತು. ಇಷ್ಟೆಲ್ಲಾ ಆದರೂ ಪಾಪ ಮಾತ್ರ ಏನೂ ಹೇಳುತ್ತಿರಲಿಲ್ಲ, ಯಾವಾಗಲೂ ಇಡೀ ಮನೆಯನ್ನು ಬೆಳಗುತ್ತಿದ್ದ ಅವಳ ನಗುವು ಎತ್ತಲೋ ಮಾಯವಾಗಿತ್ತು. ಅವಳ ರೂಮಾಯ್ತು-ಅವಳಾಯ್ತು, ಆ ದಿನಗಳಲ್ಲಿ ನನ್ನ ಎಳೆತನದ ಗೆಳತಿ, ನನ್ನ ಮುದ್ದಿನ ತಂಗಿ ಇದ್ದೂ ಇಲ್ಲದಂತಿತ್ತು, ನಗು, ಆನಂದ, ಉತ್ಸಾಹಗಳಿಂದ ತುಂಬಿತುಳುಕುತ್ತಿದ್ದ ಆ ನಮ್ಮ ಮೊದಲಿನ ಜೀವನ ಹೋರಟೆಹೋಯ್ತು.

"ಹೇಗೋ ಎರಡು ವರ್ಷಗಳು ಕಳೆದ ಹೆಮವ ವಸಂತ, ನನ್ನ ಪಾಲಿಗೆ ಆ ಎರಡು ವರ್ಷಗಳು ಎರಡು ಯುಗಗಳಿಂತ ಧಿರ್ಘವಾಗಿದ್ದವು, ಅಂತ ಎರಡು ವರ್ಷ ಮುಗಿಯುವಾಗ ಪಾಪಸ ಗಂಡ ಉಚ್ಚ ಶ್ರೇಣಿಯಲ್ಲಿ ಉತ್ತೀರ್ಣನಾಗಿ ಸ್ವದೇಶಕ್ಕೆ ಮರಳಿದೆ ಆ ದಿನ ನಮ್ಮಗೆ ಇವರಿಗೆಲ್ಲಾ ಬಲು ಆನಂದದ-ಉತ್ಸಾಹದ ದಿನ ಸಾಪನ ಬತ್ತಿದ ಮುಖ ದಲ್ಲ ಎಳೆನಗು ಮೂಡಿತ್ತು. ಅಂದು ಬೆಳಗಿನ ರೈಲಿಗೇ ಅವನು ಬರುವುದೆಂದು ಗೊತ್ತಾಗಿತ್ತು, ನಾನು ನಮ್ಮ ತಂದೆ ಅವನು ದಿ: ಗೊಳ್ಳಲು ಸ್ಟೇಶನ್ನಿಗೆ ಹೋಗಿದ್ದೆ, ಆದರೆ ಆ ದಿನ ಅವನು ಬರಲಿಲ್ಲ. ನಿರಾಶರಾಗಿ ನಾವು ಹಿಂದಿರುಗುವಾಗ ಪಾಪ ಬಾಗಿಲಲ್ಲಿ ನಿಂತು ರಸ್ತೆಯನ್ನೇ ದಿಟ್ಟಿಸುತ್ತಿದ್ದ.. ನಾವಿಬ್ಬರೇ ಹಿಂತಿರುಗಿದುದನ್ನು ನೋಡಿ ಅವಳ ಬಾಡಿದ್ದ ಮುಖ ಇನ್ನಷ್ಟು ಬಾಡಿತು. ಮಳೆಗಾಲದ ಬಿಸಿಲಿನಂತೆ ಮಾಡಿದ್ದ ಅವಳ ನಗುವೂ ಮಾಯವಾಯ, ನಾನದನ್ನು ನೋಡಿ ದರೂ ನೋಡದವನು'ಒಹುಶಃ ಟ್ರೇನ್ ಮಿಸ್ ಆಗಿರಬಹುದು; ನಾಳೆ ಬರುತ್ತಾನೆ' ಎಂದವಳನ್ನು ಸಂತೈಸಿದೆ. ನಾಳೆ ಬಂತು; ಎಷ್ಟೋ ನಾಳೆ ನಾಳೆಗಳಾಗಿ ಒಂದೆರಡು ವಾರಗಳೂ ಆದವು. ಅವನ ಬರಲಿಲ್ಲ-ಅವನ ಕಾಗದ ಇಲ್ಲ.

"ಒಂದೆರಡು ವಾರಗಳ ತರುವಾಯ ಒಂದು ದಿನ ಸೇಪರ್ ತೆರೆದುವಾಗ ಅವನ ಚಿತ್ರ ! ಆದರ ಕೆಳಗಡೆ 'ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಎರಡು ವರ್ಷಗಳಿಂದ ಅಭ್ಯಾಸ ಮಾಡುತ್ತಿದ್ದು, ಉಚ್ಚಶ್ರೇಣಿಯಲ್ಲಿ

೧೧೫