ಪುಟ:ಕಂಬನಿ-ಗೌರಮ್ಮ.pdf/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೧೬

ಉತ್ತೀರ್ಣರಾಗಿ ಇದೀಗ ಭಾರತಕ್ಕೆ ಮರಳಿದ ಶ್ರೀ ರಾಮರಾಯರು .. ..ವಿಶ್ವವಿದ್ಯಾಲಯದ ಪ್ರೊಫೆಸರಾಗಿ ನಿಯೋಜಿತರಾಗಿದ್ದಾರೆ. ಇವರಿಗೆ ನನ್ನ ಅಭಿನಂದಸಿ..' ಇನ್ನೂ ಏನೇನೋ ಅವನ ಯಶೋಗಾನು. ನನ್ನ ತಂಗಿಯ ಗುಡಸಿಗೆ ಉತ್ತಮವಾದ ಕೆಲಸ ದೊರೆಯಿತಲ್ಲಾ ಎಂದು ಆ ಚಿತ್ರವನ್ನು ನೋಡಿ ನಾನು ಆನಂದಪಡಬೇಕಾಗಿದ್ದುದು ಸಹಜ. ಆದರೆ ವಸಂತ, ಚಿತ್ರದಲ್ಲಿ ಚಿತ್ರಿತವಾದ ಅವನ ಮುಖವನ್ನು ನೋಡಿ ನನಗೇಕೋ ತಡೆಯಲಾರದಷ್ಟು ಕೋಪ ಬಂತು. ಅವನ ಯಶಸ್ಸಿಗೆ ಕಾರಣ ನಮ್ಮ ತಂದೆ. ಹಣಕೊಟ್ಟು ಓದಿಸಿ ಅವನನ್ನು ಮುಂದಕ್ಕೆ ತಂದವರು ಅವರು. ಇಷ್ಟೆಲ್ಲಾ ಮಾಡಿದ್ದರೂ ಸ್ವದೇಶಕ್ಕೆ ಮರಳಿದ ಮೇಲೆ ನನಗೊಂದು ಕಾಗದ ಸಹ ಇಲ್ಲ! ಪಾಪನಿಗಾದರೂ ಒಂದು ಗೆಸಿ ಒರೆಯಬಹುದಿತ್ತು. ನಾಳೆ ನಾಳೆ ಎಂದು ಅವನ ಬರವನ್ನು ಇದಿರು ನೋಡುತ್ತಿರುವ ಪಾಪನನ್ನು ನೋಡುವಾಗಲೆಲ್ಲಾ ನನಗವನ ಮೇಲೆ ಬಲು ಕೋಪ ಬರುತ್ತಿತ್ತು. ನಮ್ಮ ತಂದೆ ಒಳಗೊಳಗೇ ನೊಂದು ಕೊಂಡರೂ ಪಾನನಿದಿರಿನಲ್ಲಿ 'ಕೆಲಸದ ಗಲಾಟೆ ಬಹಳ ಇರಬಹುದು. ಅದೇ ಬರಲೂ ಬರೆಯಲೂ ಸಮಯವಾಗಿರಲಾರದು. ಇನ್ನೆನು-ಬಂದೇ ಬರುತ್ತಾನೆ' ಎನ್ನುತ್ತಿದ್ದರು. ಹೀಗೆ ಇದಿರು ನೋಡುವುದರಲ್ಲೇ ಎರಡು ಮೂರು ತಿಂಗಳುಗಳು ಕಳೆದುಹೋದುವು. ಕೊನೆಗೆ ನಮ್ಮ ತಂದೆ ಅವನಿಗೊಂದು ಕಾಗದ ಬರೆದರು- 'ಇಷ್ಟು ದಿನ ನಿನ್ನ ಓದಿತ್ತು. ಈಗ ಅದೆಲ್ಲಾ ತೀರಿ ಕೆಲಸ ಸಂಪಾದಿಸಿರುವೆ. ಇನ್ನಾದರೂ ಆದಷ್ಟು ಬೇಗ ಬಂದು ಪಾಪನನ್ನು ಕರೆದುಕೊಂಡು ಹೋಗು' ಎಂದು.

"ಒಂದೆರಡು ವಾರಗಳ ತರುವಾಯ ಅವನಿಂದ ಪ್ರತ್ಯುತ್ತರ ಬಂತು- 'ಈಗ ಬರಲು ನನಗೆ ಸವರುವಿಲ್ಲ. ಮುಂದಿನ ರಜೆಯಲ್ಲಿ ಬರಲು ಯತ್ನಿಸುತ್ತೇನೆ.' ಕೇವಲ ಇಷ್ಟೇ. ತಂದೆ ಕಾಗದ ಓದಿ ನನಗೆ ಕೊಟ್ಟರು. ನಾನೂ ಓದಿದೆ. ಅದಕ್ಕಿಂತಲೂ ಹೆಚ್ಚೇನು ನಾನವನಿಂದ ಎಣಿಸಿರಲಿಲ್ಲ. ಆದರೆ ನಮ್ಮ ತಂದೆ-ಅವರ ಮೇಲೆ ಎಲೆಟ್ರಿಕ್ ಶಾಕ್‌ನ ಕೆಲಸವನ್ನು ಆ ಕಾಗದ ಮಾಡಿತ್ತು. ನಮ್ಮ ತಾಯಿ ಸತ್ತಾಗ ಸಹ ಅವರ ಮುಖ