ಪುಟ:ಕಂಬನಿ-ಗೌರಮ್ಮ.pdf/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೧೧೮

ನೋಡು ! ಹೋಗಲೇಬೇಕು ಎಂದಿದ್ದರೆ ಅವಳೇನೂ ಅಷ್ಟು ನೊಂದು ನಿ ಶಿಕೊಳ್ಳುತ್ತಿರಲಿಲ್ಲ. ಆದರೆ ಅವನು ಹೇಳಿದ ಮಾತುಗಳು..! 'ಇಂಗ್ಲೆಂಡಿಗೆ ಹೋಗುವ ಸಲುವಾಗಿಯೇ ನಿನ್ನನ್ನು ಮದುವೆ ಆದೆ-ಇಲ್ಲದಿದ್ದರೆ ಯಾರು ಮದುವೆ ಆಗುತ್ತಿದ್ದರು ನಿನ್ನ .....' ಪಾವನ ಆನಂದವನ್ನು ಕೊಂದ ಮಾತುಗಳನ್ನು, ಎರಡು ವರ್ಷಗಳಿಂದ ಅವಳನ್ನು ಕೊರಗಿಸಿ ಕರಗಿಸಿದ ಮಾತುಗಳವು. ಆ ಮಾತುಗಳನ್ನವಳು ಮೊದಲೇ ಹೇಳಿದ್ದರೆ..ಅವಳು ಹೇಳಲಿಲ್ಲ. ಹಾಗೆಲ್ಲಾ ಹೇಳುವಂತಹ ಹುಡುಗಿಯ ಅಲ್ಲ ಅವಳು. ಆ ಮಾತುಗಳನ್ನು ನೆನೆದು ಕಳೆದ ಎರಡು ವರ್ಷಗಳಿಂದ ಪಾಪಮಾತ್ರ ಕೊರಗು ತಿದ್ದಳು. ಈಗ ನಮ್ಮನೆಯವರಿಗೆಲ್ಲಾ ಕೊರಗು, ಸ್ವಲ್ಪ ಒರಟು ಸ್ವಭಾವದವರಾದರಣ ಚಿಕ್ಕಮ್ಮನಿಗೆ ಪಾಷ ಎಂದರೆ ಬಲು ಪ್ರೇಮ, ಅವರಂತೂ ಅವಳ ಗಂಡನ ವರ್ತನೆಯಿಂದ ಬಹಳ ಸಿಟ್ಟುಗೊಂಡಿದ್ದರು.

“ಪಾಪನ ಗಂಡ ಊರಿಗೆ ಬಂದುದೂ, ಅವನಿಗೆ ಕೆಲಸವಾದುದೂ ಊರಿಗೆಲ್ಲಾ ತಿಳಿದ ವಿಷಯ. ಇನ್ನೂ ಪಾಪ ಗಂಡನ ಮನೆಗೆ ಹೋf\ ಸಂಸ್ಕಾರ ಮಾಡುತ್ತಿಲ್ಲವೇಕೆಂದು ನಮ್ಮ ನೆರೆಕರೆಯವರಿಗೆಲ್ಲಾ ಬಹಳ ಕುತೂಹಲ, ದಿನದಿನವೂ ಚಿಕ್ಕಮ್ಮನೊಡನೆ ಇದೇ ಸಶ್ನೆ. ಕೇಳಿ ಚಿಕ್ಕಮ್ಮ ಉರಿದುಬೀಳುತ್ತಿದ್ದರು. ಪಾಪನ ಗೆಳತಿಯರೂ ಅವಳೊಡನೆ ಕೇಳುತ್ತಿದ್ದ ರಂದು ತೋರುತ್ತೆ. ಅವಳು ಗೆಳತಿಯರು ಬಂದರೆಂದರೆ ಕಾಣಿಸಿಕೊಳ್ಳಲು ಹಿಂಜರಿಯುತ್ತಿದ್ದಳು. ಕಾರಣವಿರಲಿ ಇಲ್ಲದಿರಲಿ-ನಮ್ಮ ಸಮಾಜದಲ್ಲಿ ಪತಿಯಿಂದ ತಿರಸ್ಕೃತೆಯಾದ ಪತ್ನಿ ಎಂದರೆ ಎಲ್ಲರಿಗೂ ಸಂಶಯ-ಸಮಾ ಬದ ಕರ ನಾಲಿಗೆ ಪಾಪನನ್ನೂ ಟೀಕಿಸದಿರಲಿಲ್ಲ.

"ಅವನಿಗೆ ಕೆಲಸವಾಗಿ ಏಳೆಂಟು ತಿಂಗಳಗಳಾಗಿತ್ತು. ಒಂದು ದಿನ ಸಾಯಂಕಾಲ ನಾನು ಮನೆಗೆ ಬರುವಾಗ ಪಾಪ ನನ್ನ ರೂಮಿನಲ್ಲಿ ಕೂತಿ <ಳು, ಸಾಯಂಕಾಲದ ಹೊತ್ತಿನಲ್ಲಿ ನನ್ನ ರವಿಗವಳು ಬರುವದು ಆಸರಇಸ್ಮ, ಇಂದೇನು ಹೊಸತು ಎಂದು 'ಏನು ಪಾಪ ?' ಎಂದೆ. ಆಗ ರೂಮಿನಲ್ಲಿ ದಿನವಿನ್ನೂ ಹತ್ತಿಸಿರಲಿಲ್ಲ. ಸಂಪೂರ್ಣ ಕತ್ತಲೆಯಾಗದಿದ್ದರೂ ಆನಸಕು ಬೆಳಕಿನಲ್ಲವಳ ಮುಖವೂ ಸರಿಯಾಗಿ ಕಾಣಿಸುತ್ತಿರಲಿಲ್ಲ.