ಪುಟ:ಕಂಬನಿ-ಗೌರಮ್ಮ.pdf/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಆದರೂ ಅವಳ ದನಿಯಿಂದ ತಿಳಿದುಕೊಂಡೆ ಬಹಳ ಅತ್ತಿರುವಳೆಂದು, ಅದೇ ಅವಳ ಹತ್ತಿರ ಕೂತು ಕೈ ಹಿಡಿದು ' ಸುಮ್ಮನೆ ಅತ್ತರೇನು ಬಂದಂತಾಯಿತು ಪಾಪ ? ನಿನ್ನ ಆರೋಗ್ಯ ಹಾಳು ಮಾಡಿಕೊಳ್ಳುತ್ತಿ, ಅಷ್ಟೆ, ನಿನ್ನ ಕಣ್ಣೀರಿನ ಒಂದು ಹನಿಯಷ್ಟು ಯೋಗ್ಯತೆ ಸಹ ಪ್ರಾಣಿಗೆ ' ಎಂದಏನೇನೋ ಹೇಳಿ ಸಮಾಧಾನ ಪಡಿಸಲೆತ್ನಿಸಿದೆ. ಸಮಾ ಧಾನ ಹೊಂದುವುದರ ಬದಲು ಅವಳ ಅಳು ಇನ್ನಷ್ಟು ಜೋರಾಯ್ತು. ಆಳಳುತ್ತಲೇ 5ಣ್ಣ, ನೀನೇ ಕರೆದುಕೊಂಡು ಹೋಗಿ ಅಲ್ಲಿ ಬಿಟ್ಟುಬಿಡು ನನ್ನ' ಎಂದಳು.

“ಪಾಪನ್ನ ಒತ್ತಾಯದಿಂದ ಅವನೆಡೆಗೆ ಸೂಕುವುದೇ! ಅವನಿಗವಳು ಬೇಡವಾಗಿದ್ದರೂ ನಮಗೆ ಹೆಚ್ಚಾಗಿರಲಿಲ್ಲ. ಅವಳ ಮಾತುಗಳನ್ನು ಕೇಳಿ ನನಗೇನೋ ಊಹಿಸಲಾರದಷ್ಟು ಆಶ್ಚರ್ಯ, ಜೊತೆಯಲ್ಲೇ ಕೋಪ. ಎಲ್ಲಾದರೂ ಬೇಕುಬೇಕೆಂತಲೇ ನರಕಕ್ಕೆ ನೂಕುವುದಿದೆ. ನಮ್ಮ ಪಾಪ! ಆದರೆ ಪಾಪ ನನ್ನ ಯಾವ ಮಾತನ್ನೂ ಹೇಳಲಿಲ್ಲ. ಕಳು ಓಸಿಯೇ ಬಿಡಬೇಕೆಂದು ಹಠಹಿಡಿದಳು. ತಂದೆ, ನಾನು ಅಲ್ಲದೆ ಚಿಕ್ಕಮ್ಮ ಸಹ ಇದನ್ನು ವಿರೋಧಿಸಿದರೂ ಕೊನೆಗೆ ಪಾಪನ ಹಠವೇ ಗೆದ್ದಿತು. ಅವಳನ್ನ ವನ ಮನೆಗೆ ಕರೆದುಕೊಂಡು ಹೋಗಿ ಬಿಡುವ ಭಾರವೂ ನನ್ನ ಮೇಲೆ ಬಿತ್ತು.

“ವಸಂತ, ಗಂಡ ಒಳ್ಳೆಯವನಾಗಿ, ಹೆಂಡತಿ ಅವನ ಪ್ರೇಮಕ್ಕೆ ರಾಣಿಯಾಗಿರುವಾಗ ಸಹ ಹೆಣ್ಣುಮಕ್ಕಳನ್ನು ಅತ್ತೆಯ ಮನೆಗೆ ಕಳು ಸಲು ಹೆತ್ತವರು ನೊಂದುಕೊಳ್ಳುವರು. ಇನ್ನು ನಮ್ಮ ಪಾಪನನ್ನು, 'ನಮ್ಮ ಮನೆ ಬೆಳಕನ್ನು' ಬೇಡವಾದ ಆ ಗಂಡನ ಮನೆಗೆ ಬಲಾತ್ಕಾರ ದಿಂದ ಕಳುಹಳು ನಮಗೆಲ್ಲಾ ದುಃಖವಾಯಿತೆಂದು ಬೇರೆ ಹೇಳಬೇಕೆ? ಸಾವನ್ನು ಹಿಂಬಾಲಿಸುವ ದುಃಖಿಗಳಂತೆ ಸ್ಟೇಶನ್ ತನಕ ಮನೆಯವ

ರೆಲ್ಲಾ ನಮ್ಮೊಡನೆ ಬಂದರು. ಆ ದಿನವನ್ನು ಹೇಗೆ ಮರೆಯಲಿ ವಸಂತ ?ಕಣ್ಣೀರು ತುಂಬಿ ಸುರಿಯುತ್ತಿದ್ದ ಕಣ್ಣುಗಳಿಂದ ನನ್ನ ಪುಟ್ಟ ತಂಗಿ

೧೧೯