ಪುಟ:ಕಂಬನಿ-ಗೌರಮ್ಮ.pdf/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೧೨೨

ತೊಳೆಯುತ್ತಾ 'ಹೆಂಡತಿಯಾಗಿ ನಾನು ನಿಮಗೆ ಬೇಡವಾಗಿದ್ದರೂ ಸೇವಕಿ ಯಂತೆ ಇರಲಾರರೂ ಒಂದಿಷ್ಟು ಸ್ಥಳ ಕೊಡಿ' ಎಂದು ಪ್ರಾರ್ಥಿಸಿದಳು. ಅವಳ ಪ್ರಾರ್ಥನೆಗಾದರೂ ಅವನ ಕಲ್ಲುಹೃದಯ ಕರಗುತ್ತಿತ್ತೇನೋ ! ಆದರೆ ಆಗಲೇ ನವೀನ ಉಡಿಗೆತೊಡಿಗೆಗಳಿಂದ ಅಲಂಕೃತಳಾದ ರಮಣಿ ಯೊಬ್ಬಳು ಕೈಯ್ಯಲ್ಲೊಂದು ಟೆನ್ನಿಸ್ ರಾಕೆಟ್ ಹಿಡಿದು ಸಹಜವಾದ ಸಲಿಗೆಯಿಂದ ಒಳಗೆ ಬಂದಳು. ಹೊರಗಿನ ಬಿಸಿಲಿನಿಂದ ಬಂದುದರಿಂದ ಒಳಗಿದ್ದ ನಮ್ಮಿಬ್ಬರನ್ನು ಅವಳು ನೋಡಿದಂತೆ ತೋರಲಿಲ್ಲ. ಬಿದ್ದು ಕೊಂಡಿದ್ದ ಅವನು ಅವಳನ್ನು ನೋಡಿ ಕಾಲು ಕೊಸರಿಕೊಂಡು ಎದ್ದು ನಿಂತ-ಪಾಪನೂ ಎದ್ದು ನಿಂತಳು. ಆಗ ಅವಳು ನನ್ನನ್ನೂ ಪಾವನನ್ನೂ ನೋಡಿದಳು. ಆಶ್ಚರ್ಯದಿಂದ ಅವನ ಮುಖವನ್ನು ನೋಡಿದ ಅವಳ ನೋಟವು - 'ಯಾರಿವರು ?' ಎಂದು ಪ್ರಶ್ನಿಸುವಂತಿತ್ತು. ನನ್ನ ತಂಗಿ ಇನ್ನು ಅವಮಾನಿಸಿದ ಆವನು ನನ್ನ ಕಡೆ ತಿರುಗಿ, ಆ ಬಂದವಳ ಕೈ ಹಿಡಿದು 'ಮಹೇಶ, ಇವಳು ನನ್ನ ಹೆಂಡತಿ ಮಾತಿ' ಎಂದ. ಅವಳು ಒಳಗೆ ಒಂದಂದಿನಿಂದ ಭಾಂತಳಂತೆ ನಿಂತಿದ್ದ ಪಾಪ ಅವನ ಮಾತು ಕೇಳಿ, ಹಿಂದಿ ರುಗಿ ಸಹ ನೋಡದೆ ಹೊರಗೆ ನಡೆದುಬಿಟ್ಟಳು. ನಾನೂ ಮರುಮಾತಾ ಪದೆ ಮಂತ್ರಮುಗ್ಧನಂತೆ ಅವಳನ್ನು ಹಿಂಬಾಲಿಸಿದೆ.

"ಇದೆಲ್ಲಾ ನಡೆದೀಗ ಎರಡು ಮೂರು ವರ್ಷಗಳಾಗಿ ಹೋದುವು. ಮೊದಮೊದಲು ನಾವೆಲ್ಲಾ ಪಾಪನ ಆಸೆಯನ್ನು ಬಿಟ್ಟುಬಿಟ್ಟಿದ್ದೆವು. ವಸಂತ, ಡಾಕ್ಟರು ಸಹ ಅವಳು ಬದುಕಲಾರಳು ಎಂದಂದಿದ್ದರು. ಆದರೂ ಕೊನೆಗವಳು ಬದುಕಿಬಿಟ್ಟಳು. ಅವಳ ಆರೋಗ್ಯವೂ ಸುಧಾರಿಸಿತು. ಆದರೆ ಅವಳ ಮುಖದಲ್ಲಿ ಸದಾ ವಿಂಚುತಿದ್ದ ನಗುವಾತ್ರ ' ಎಂದೆಂದಿಗೂ ಹಿಂದಿ ರುಗೆ ' ನೆಂದು ಹೊರಟೇ ಹೋಯ್ತು. ನನ್ನ ತಂಗಿ ಸುಂದರಿಯಲ್ಲ ವಸಂತ, ಎನೋ ಎಲ್ಲರಂತಿದ್ದಾಳೆ ಅಷ್ಟೆ. ಆದರೆ ಬುದ್ಧಿ, ಗುಣ, ನಡತೆಗಳಲ್ಲಿ ಅವ ಳನ್ನು ಸರಿಗಟ್ಟುವವರು ಅಪರೂಪ. ತನ್ನಿಂದಾಗಿ ನಾವೆಲ್ಲಾ ನೊಂದು ಕೊಳ್ಳಬಾರದೆಂದು ಅವಳು ತನ್ನ ದುಃಖವನ್ನು ನುಂತುಕೊಂಡು ಮನೆ ಯಲ್ಲಿ ಓಡಾಡುತ್ತಿದ್ದಳು. ಆ ದಿನದ ತರುವಾಯ ಎಂದೂ ಅವಳತ್ತುದನ್ನು