ಪುಟ:ಕಂಬನಿ-ಗೌರಮ್ಮ.pdf/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೧೨೪

ಪಾಪಗೊಡನೆ ಆ ಹಾಡು ಹಾಡಬೇಕಾಗಿ ಕೇಳಿಕೊಂಡರು. 'ಆಗದು' Tಎನ್ನುವಂತಿರಲಿಲ್ಲ. ಅಂದಿನ ಸಭೆಯಲ್ಲವಳು 'ವಂದೇ ಮಾತರಂ' ಹಾಡು ವಾಗ ಸಭೆಗೆಸಭೆಯೇ ಸ್ವಲ್ಪವಾಗಿ ಹೋಗಿತ್ತು. ಅವಳ ಕಂಠ ಅಷ್ಟೊಂದು ಮಧುರ, ಹೇಳುವ ರೀತಿ ಅಷ್ಟೊಂದು ಮೋಹಕ-ಮತ್ತೆ ಹಾಡಿದ ಹಾಡು ವಂದೇ ಮಾತರಮ್

“ವಸಂತ, ಅಂದಿನ 'ವಂದೇ ಮಾತರ ' ನನ್ನ ತಂಗಿಯ ಜೀವನ ವನ್ನು ಸಂಪೂರ್ಣವಾಗಿ ಮಾರ್ಪಡಿಸಿಬಿಟ್ಟಿತು. ಎರಡು ಮೂರು ವರ್ಷಗಳ ಕೆಳಗವಳು ಪತಿಯಿಂದ ಪರಿತ್ಯಕ್ಕೆಯಾದ ಪಾಪನಾಗಿದ್ದಳು. ಈಗ ! ಈಗ ವಳು ಸುಪ್ರಸಿದ್ಧ ಸಿನಿಮಾ ನಟಿ ಮಿಸ್. ಅರುಣಾ ದೇವಿ! ಇಡೀ ಭಾರತದ ಮೂಲೆ ಮೂಲೆಗಳಲ್ಲಿ ಸಹ ಅವಳ ಸ್ವಗಿಂದು ಸಂಗೀತ ಕೇಳದೆ, ಅವಳ ಆ ಅಪೂರ್ವ ನಟನೆಯನ್ನು ನೋಡದೆ ಜನರಿಲ್ಲ. ಜಗತ್ತಿನ ದೃಷ್ಟಿಯಿಂದ ಅವಳೆಷ್ಟು ಸುಖಿ! ವಸಂತ, ಅವಳಿಗೆ ಸುಖವಾಗಲೀ, ಶಾಂತಿಯಾಗಲೀ ಇಲ್ಲವೆಂದು ತಿಳಿದ ಪ್ರಾಣಿ ನಾನೊಬ್ಬ, ಅವಳಿಗೀಗ ಸುಬವೆಂದರೆ ನನ್ನ ಶಿಕ್ಷಣ, ನನಗವಳ ಹಣದಿಂದ ಓದುವ ಇಚ್ಛೆ ಇಲ್ಲದಿದ್ದರೂ ಅವಳ ಹಠದ ಮುಂದೆ ನನ್ನದೇನೂ ನಡೆಯುವಂತಿಲ್ಲ.

"ವಸಂತ, ಜನರ ದೃಷ್ಟಿಯಲ್ಲಿ ಮೊದಲೇ ಪತಿಯಿಂದ ಪರಿತ್ಯಕ್ಕೆ ದೂಾಗಿದ್ದ ಪಾಷ, ಈಗ ಸಿನಿಮಾ ನಟ-' ಸಿನಿಮಾ ನಟ !! ನಮ್ಮವರಿಗೆ ಪತಿತರು, ಚರಿತ್ರಹೀನರು ಎನ್ನುವುದಕ್ಕೆ ಇದಕ್ಕಿಂತಲೂ ಹೆಚ್ಚಿಗಿನ್ನೆನು ಬೇಕು ವಸಂತ ?

"ವಸಂತ, ನೀನು ನನ್ನೊಡನೆ ನೋಡಿದ ಆ ಹುಡುಗಿ ನನ್ನ ತಂಗಿ ಪಾಪ, ಅವಳ ಅಥವಾ ನನ್ನ ವಿಷಯ ಜನರೇನಾದರೂ ಅಂದುಕೊಳ್ಳಲಿ ವಸಂತ, ಅದರಿಂದ ನಮಗೆ ಬಾಧಕವಿಲ್ಲ. ಆದರೆ ನೀನು-ನೀನು ಮಾತ್ರ ಜನರ ಕಣ್ಣುಗಳ ಮೂಲಕ ನಮ್ಮನ್ನು ನೋಡದಿದ್ದರೆ ಸರಿ, ಅದಕ್ಕಿಂತ ಹೆಚ್ಚು ಇನ್ನೆನೂ ನಿನ್ನಿಂದ ಬಯಸುವುದಿಲ್ಲ ವಸಂತ, ಪಾಸನ ವಿನಹ ನೀನಲ್ಲದೆ ಈ ಜಗತ್ತಿನಲ್ಲಿ ನನ್ನವರೆನ್ನಲು ನನಗಿನ್ನು ಯಾರೂ ಇಲ್ಲ. ನೀನು