ಪುಟ:ಕಂಬನಿ-ಗೌರಮ್ಮ.pdf/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಊಟ ಮಾಡುತ್ತ ಕೂತಿರಿ ? ಎದ್ದು ನಾನೇ ಕದ ತೆರೆಯಲು ಹೋದೆ. ಪಾರ್ವತಿಯ ಕಣ್ಣುಗಳಲ್ಲಿ ನೀರು ತುಂಬಿತು. 'ನವರೇ ವಾಸಿ ಯಾಗಿತ್ತು-ಈ ಹಾಳೂರಿಗೆ ಬರಲಾಗಿ ಊಟಕ್ಕೂ ಸಮಯವಿಲ್ಲ' ಎಂದು ಕೊಂಡಳು. ಪಾರ್ವತಿಯ ಕಣ್ಣೀರು ತುಂಬಿದ ಮುಖವನ್ನು ನೋಡಿ ನನ್ನ ಮನಸ್ಸು ನೊಂದರೂ ಆಗ ಅವಳನ್ನು ಸಮಾಧಾನಪಡಿಸುವಂತಿರ ಇಲ್ಲ. ಹೋಗಿ ಕದ ತೆರೆದೆ.

ಕದ ತಟ್ಟಿದವನೊಬ್ಬ ಹುಡುಗ-ಸುಬ್ಬು-ಆ ಊರಿನ ಬಿಟ್ಟ ಬಸ ವಯ್ಯ 'ಏನೋ' ಎಂದು ಕೇಳಿದೆ. 'ರಾಜಮ್ಮಾವ್ರ ಮನೇಲಿ ಬಾಳ ಕಾಯ್ದೆ ಅಂತೆ. ಈಗ್ಗೆ ಬರೇಕಂತೆ' ಎಂದ. ರಾಜಮ್ಮ : ಅವಳ ಹೆಸರನ್ನು ಕೇಳಿದ ಕೂಡಲೇ ಕದ ತೆರೆಯುವಾಗಿದ್ದ ಸಹಾನುಭೂತಿ, ಕರುಣೆ ಎಲ್ಲೋ ಮಾಯವಾಯ್ತು. ಬೆಳಿಗ್ಗೆ ಬರುತ್ತೇನೆ. ನಡೆ' ಎಂದೆ. ಅವನು ಹೊರಟುಹೋದೆ. ಕದಮುಚ್ಚಿ ನಾನೂ ಒಳಗೆ ಹೋದೆ. ಪಾರ್ವತಿ ಊಹಿಸಿದ್ದಂತೆ ನಾನು ಹೊರಟುಹೋಗದೆ ಮರಳಿಬಂದುದ ಬಂದ ಅವಳಿಗೂ ಸಮಾಧಾನವಾಯು. ಊಟಕ್ಕೆ ಬಡಿಸುತ್ತಾ ಯಾರು ಬಂದವರು ?' ಎಂದು ಕೇಳಿದಳು. 'ಸುಟ್ಟು, ರಾಜಮ್ಮನ ಮನೆಗೆ ಕೂಡಲೇ ಬರಬೇಕೆಂದು ಕರೆಯುವದಕ್ಕೆ ' ಎಂದೆ. ರಾಜಮ್ಮನ ಹೆಸರು ಕೇಳಿ ಪಾರ್ವತಿ ' ಅವಳಿಗೇನೀಗ ಕೇಡು ! ಬೆಳಿಗ್ಗೆ ಹೋದರೆ ಸಾಲ ದೇನೋ? ಇಷ್ಟಕ ಸತ್ತುಹೋದರೆ ಭೂವಿಭಾಶವೇ ಕುಯಾಯ' ಎಂದಳು.

ರಾಜಮ್ಮ-ಪೆಸರನ್ನು ಕೇಳಿದ ಮಾತ್ರದಿಂದಲೇ ತಿರಸ್ಕರಿಸಲ್ಪಡು ತಿದ್ದ ರಾಜಮ್ಮು-ಸೂಳೆ, ನಾನವಳನ್ನು ಕಣ್ಣಾರೆ ನೋಡಿರಲಿಲ್ಲವಾದರೂ ಅವಳ ವಿಷಯವಾಗಿ ಜನರಾಡಿಕೊಳ್ಳುತ್ತಿದ್ದ ಮಾತುಗಳನ್ನು ಕೇಳಿಯೇ 'ಅವಳು ನಿಜವಾಗಿಯೂ ರಾಕ್ಷಸಿ' ಎಂದೆನಿಸಿಹೋಗಿತ್ತು ನನಗೆ 'ಅಂಥವಳ ಮನೆಗೆ ಈಗ ಯಾರು ಹೋಗುತ್ತಾರೆ? ಬೆಳಗಿನಿಂದಲೂ ಊಟ ಸಹ ಮಾಡಿಲ್ಲ-ನಾಳೆ ಬೆಳಿಗ್ಗೆ ಹೋದರಾಯಿತು' ಎಂದು ಸಮಾ! ಧಾನ ಮಾಡಿಕೊಂಡು ಮಲಗಿದೆ. ಅಷ್ಟರಲ್ಲಿ ಪುನಃ ಬಾಗಿಲನ್ನು ಬಡಬಡನೆಂಬ

೧೨೭