ಪುಟ:ಕಂಬನಿ-ಗೌರಮ್ಮ.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಾನು ಕಂಡ ಗೌರಮ್ಮನವರು

ಒಂದೆಡೆಗೆ ಕುಳಿತೆವು. ಆಗ ನಮ್ಮ ಮಾತಿಗೆ 'ರಂಗವಲ್ಲಿ' ಯೊಂದೇ ಆಹಾರವಾಗಿತ್ತು. ಭಿನ್ನಾಭಿಪ್ರಾಯಗಳ ವಾಗ್ಯುದ್ದದಿಂದ ನಮ್ಮ ಪರಿಚಯ ಬೆಳೆಯಹತ್ತಿತು. ಅವರು ಆಗಾಗ ವಿನಯಪೂರ್ವಕವಾಗಿ 'ಬೇಸರವಾಯಿತೇ?'ಎಂದು ಕೇಳುತ್ತ ತಮ್ಮ ಅಭಿಪ್ರಾಯವನ್ನು ತಿಳಿಸುತ್ತಿದ್ದರು. ಅವರ ಆ ಸವಿನಯವಾದ ಮಾತುಗಳೆ ಅವರ ಸರಳಜೀವನದ ಕುರುಹು. ಅವರು ಸಭೆಯಲ್ಲಿ ಎಂದೂ ಮಾತಾಡಿದವರಲ್ಲ. ಅಂದು ಕವಿಸಮ್ಮೇಲನದಲ್ಲಿ 'ಏನಾದರೂ ಓದಿ' ಎಂದು ನಾವು ಕೇಳಿದ್ದಕ್ಕೆ ಅವರು 'ದಮ್ಮಯ್ಯ ಬೇಡಿ' ಎಂದು ಕೇಳಿಕೊಂಡರು; ಕೊಡಗಿನ ಪರವಾಗಿ ಅಧ್ಯಕ್ಷರ ಆಯ್ಕೆಯನ್ನು ಸಮರ್ಥಿಸುವುದಕ್ಕಾಗಿ ಎದ್ದು ನಿಂತು ಹೇಳಿದ ಒಂದೇ ಮಾತಿಗೆ ಮೈಯೆಲ್ಲ ಬೆವತು ಕಾಲು ನಡುಗಿದವೆಂದು ಹೇಳಿದರು.

'ನೀವು ಹೊರಡುವಾಗ ನನಗೇಕೆ ತಿಳಿಸಲಿಲ್ಲ?' ಎಂದು ನಾನು ಕೇಳಿದ್ದಕ್ಕೆ 'ಏನೆಂದು ತಿಳಿಸುವದು? ಕೊಡಗಿನ ಚಕ್ರವರ್ತಿನಿ- ನಾನು ಬರುತ್ತೇನೆಂದೇ? ಅಲ್ಲದೆ ಮೊದಲು ನಿಮ್ಮನ್ನು ನೋಡಿ ನನಗೆ ಗೊತ್ತಿತ್ತೇ?' ಎಂದು ನಕ್ಕು ನುಡಿದರು. ಅವರು ಯಾರೊಡನೆಯೂ ದುಡುಕಿ ಪರಿಚಯ ಮಾಡಿಕೊಳ್ಳುತ್ತಿದ್ದಿಲ್ಲ. 'ನೀವಾರು ?-ಎಂದು ಅವರು ಕೇಳಿದರೆ ನಾನೇನೆಂದು ಹೇಳುವುದು?' ಎನ್ನುತ್ತಿದ್ದರು.

ಜಮಖಂಡಿಯಿಂದ ತಿರುಗಿ ಬರುವಾಗ ಧಾರವಾಡದಲ್ಲಿ-ನಮ್ಮಲ್ಲಿ ಒಂದು ದಿನ ಇಳಿಯಬೇಕೆಂದು ಕೇಳಿಕೊಂಡೆ. ಅವರು ಸಂತೋಷದಿಂದೊಪ್ಪಿಕೊಂಡರು. ಅಂದು ಧಾರವಾಡದ ಸಿಲ್ಯಾಣದಲ್ಲಿ ನಾವಿಳಿದಾಗ 'ಇಂದು ಎಂತಹ ಸಂತೋಷದ ದಿನ' ಎಂದು ನಾನೆಂದುದಕ್ಕೆ 'ಹೌದೋ?' ಎಂದು ಅವರು ನಗುತ್ತ ನುಡಿದರು.

ಗೌರಮ್ಮನವರು ಬಹಳ ವಿನೋದಿಗಳಾಗಿದ್ದರು. ಅವರ ಹೂವಿನಂತಹ ಮಾತುಗಳು ಯಾರ ಮನಸ್ಸನ್ನೂ ನೋಯಿಸದೆ ಅರಳಿಸುತ್ತಿತ್ತಿದ್ದವು. ಅವರನ್ನು ಕಳಿಸಲು ಹುಬ್ಬಳ್ಳಿಯವರೆಗೆ ನಾನು ಹೋಗಿದ್ದೆ. ಹುಬ್ಬಳ್ಳಿ ಸ್ಟೇಶನ್ನಿನಲ್ಲಿ 'ನೀವು ಈಗ ನನ್ನ ಅತಿಥಿಗಳು; ಧಾರವಾಡದಿಂದ