ಪುಟ:ಕಂಬನಿ-ಗೌರಮ್ಮ.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಾನು ಕಂಡ ಗೌರಮ್ಮನವರು

ಇದಿರಾಗಿ ಆಡುತ್ತಿದ್ದವರು ನಿಮ್ಮನ್ನು ಬಹಳ ಬಹಳ ಹೊಗಳಿದರು; ನಿಮ್ಮ ಕಾಗದದಿಂದಾಗಿ ಕೆಲವು ತನಗಾಯಿತಲ್ಲಾ-ಎಂದು. ನಾನು ನಿಮ್ಮ ಕಾಗದ ಸ್ವಲ್ಪ ದೂರಿದೆನೆಂದರೆ ನಿಮಗೆ ಕೋಪ ಬರುವುದೇನೋ, ಅಂತೂ ನಾವಿಬ್ಬರೂ ಜೊತೆಯಾಗಿಯೆ ಓದಿದೆವು. ಓದಿ, ಸೋತ ಬೇಸರ ಮರೆಯಿತು; ಅಷ್ಟೊಂದು ಚೆನ್ನಾಗಿದೆ ನಿಮ್ಮ 'ಕುಳಿತ ಕನ್ನೆ'.

'ನನಗೆ ಎಲ್ಲ ಕಡೆಯಿಂದಲೂ ಪತ್ರ ಬರುತ್ತಿರಬೇಕು-ಎಂದರೆ ಬಹಳ ಇಷ್ಟ. ಆದರೆ ನಾನು ಸೋಮಾರಿ, ಸಮಯಕ್ಕೆ ಉತ್ತರ ಬರೆಯದೆ ಎಷ್ಟೋ ಜನರನ್ನು ಬೇಸರುಪಡಿಸಿದ್ದೇನೆ ಎಂದು ಹೇಳುತ್ತಿದರು.

ಗೌರಮ್ಮನವರು ಕತೆ ಬರೆದ ಮೇಲೆ ಅದಕ್ಕೊಂದು ಹೆಸರಿಡುವುದಕ್ಕೆ ತುಂಬ ಪೇಚಾಡುತ್ತಿದ್ದರು. ಎಲ್ಲರನ್ನೂ ಕೇಳುತ್ತಿದ್ದರು. 'ನಾನು ಶೇಕ್ಸ್ ಪಿಯರ್ ಆಗಿದ್ದರೆ 'As you like it' ಎಂದು ಬಿಡುತ್ತಿದ್ದೆ' ಎನ್ನುತ್ತಿದ್ದರು. ಯಾರಾದರೂ ತಮಗೆ ಒಪ್ಪಿಗೆಯಾಗಬಹುದಾದ ಹೆಸರನ್ನು ಸೂಚಿಸಿದರೆ ಅವರಿಗೆ ಬಹಳ ಆನಂದವಾಗುತ್ತಿತ್ತು. ನಾನೊಮ್ಮೆ ಅವರಿಗೆ ತಡಮಾಡಿ ಬರೆದೆ; ಅವರದೊಂದು ಕತೆ ಬಂದಿತ್ತು.' ಅದಕ್ಕೊಂದು ಚೆಂದವಾದ ಹೆಸರಿಟ್ಟು ನಿಮ್ಮ ನಿಜವಾದ ಅಭಿಪ್ರಾಯ ತಿಳಿಸಿರಿ' ಎಂದು ಬರೆದಿದ್ದರು. ಕತೆಗೆ ಹೆಸರಿಡುವ ವಿಚಾರದಲ್ಲಿ ನನಗೆ ಬೇಗನೆ ಬರೆಯುವುದಾಗಲಿಲ್ಲ. ಅವರು ಬೇಸತ್ತು ಬರೆದರು: 'ಏನು ನೀವೆಲ್ಲಾ ನನ್ನ ಉದಾಸೀನಕ್ಕೆ ಪ್ರತಿ ಉದಾಸೀನ ಮಾಡಿ ಸತ್ಯಾಗ್ರಹ ಮಾಡುವಂತೆ ತೋರುತ್ತೆ! ನೀವು ರಾಮದುರ್ಗದವರು ತಾನೆ? ಮಾಡಿ ಸತ್ಯಾಗ್ರಹ!' ಎಂದು.

ಗೌರಮ್ಮನವರಲ್ಲಿ ಇದ್ದ ಮಾತನ್ನು ಎತ್ತಿ ಹಿಡಿಯುವ ದಿಟ್ಟತನವಿತ್ತು. ಅವರ ದೃಷ್ಟಿಯಲ್ಲಿ ಒಂದು ವಿಮರ್ಶಕ ಶಕ್ತಿಯಿತ್ತು. ಯಾರಿಗೂಸೊಪ್ಪುಹಾಕದೆ ತಮಗೆ ತೋರಿದ ಮಾತುಗಳನ್ನು ಗಂಭೀರವಾಗಿ ಹೇಳುತ್ತಿದ್ದರು. ತಮಗೆ ಸೇರದ ಮಾತನ್ನು ಅಷ್ಟೇ ಸ್ಪಷ್ಟವಾಗಿ ಖಂಡಿಸುತ್ತಿದ್ದರು. ಹೆಣ್ಣು ಮಕ್ಕಳು ಬರೆಯುವ ಸಾಹಿತ್ಯ ಒಳ್ಳೆಯದಾಗಬೇಕು...ಅದೊಂದು ಮಟ್ಟಕ್ಕೆ ಬರಬೇಕು... ಎಂಬ ಆಶೆ ಬಹಳವಾಗಿತ್ತವರಿಗೆ.