ಪುಟ:ಕಂಬನಿ-ಗೌರಮ್ಮ.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಾನು ಕಂಡ ಗೌರಮ್ಮನವರು

ಅಂತೂ ಅಲ್ಲಿಂದ ಹೊರಟು ಸಂದರವಾದ ಕಾಫಿತೋಟಗಳನ್ನು ನೋಡುತ್ತ, ಸೀಳಿದ ದಾರಿಗುಂಟ ಸಾಗಿದೆವು. ದಾರಿಯಲ್ಲಿಯ ಗಿಡಗಳು ದಾರಿಕಾರರನ್ನು ಸ್ವಾಗತಿಸಲು ನಿಂತಿವೆ. ಚವರಿ ಗಿಡಗಳ ಚವರಿ ಬೀಸಿದವು. ದಟ್ಟವಾದ ನೆಳಲು. ಆಗಾಗ ರಿಟಾಯರ್ ಆಗಲು ಒಂದ ಸೂರ್ಯನ ಹೊಂಗಿರಣಗಳು ತೂರಿ ಬರುತ್ತಿದ್ದವು. ಎಂತಹ ಸೊಗಸಿನ ನಾಡಿದು! ಆದುದರಿಂದಲೆ ಗೌರಮ್ಮನವರು ಅಷ್ಟು ರಸಿಕರು; ಅಂತಹ ಸೌಂದರ್ಯೋ ಪಾಸಕರು !

ಒಂದು ಬಯಲಿಗೆ ಬಂದೆವು. ಅಲ್ಲಿಯೇ ಗೌರಮ್ಮನವರ ಪತಿದೈವ ಮ್ಯಾನೆಜರರಾಗಿದ್ದ ಎಸ್ಟೇಟಿನ ಒಡೆಯರ ಮನೆ. ಒಂದೆತೆಗೆ ಎತ್ತರವಾಗಿ ದೂರದವರೆಗೆ ಹಬ್ಬಿದ ಬೆಟ್ಟವು ಮಂಜಿನ ಕಿರೀಟ ಧರಿಸಿ ನಿಂತಿದೆ. ಇನ್ನೊಂಡೆಗೆ ದೂರದವರೆಗೆ ಬಯಲು ಹಸಿರು ಹಾಸಿ ಹೊದ್ದಿದೆ. ಅಂತಹ ರಮಣೀಯ ಸ್ಥಳದಲ್ಲಿ ಶ್ರೀ. ಮಂಜುನಾಥಯ್ಯನವರ ಬಂಗ್ಲೆ. ಅಲ್ಲಿಂದ ಎರಡು ಫರ್ಲಾಂಗು ದೂರ ಗೌರಮ್ಮನವರ ಬಂಗ್ಲೆ. ಅದಕ್ಕೂ ಒಂದು ಕಾಫಿಯ ತೋಟದಲ್ಲಿ ಸೇರಿ ಹೋಗಬೇಕು. ಹೋಗುತ್ತಲೆ ಸ್ವಲ್ಪ ಎತ್ತರದಲ್ಲಿ ಒಂದು ಬಂಗ್ಲೆ. ಅದರ ಸುತ್ತು ಮತ್ತು ಹಿಂದು ಮುಂದು ಹೂದೋಟ. ನಾನು ಹೋದಾಗ ಗೌರಮ್ಮನವರೇ 'ಪೂಗಿಡಗಳ್ಗೆ ನೀರೆರೆ'ಯುತ್ತಿದ್ದರು. ಒಂದು ನಾಯಿ ' ವೊವ್' ಎಂದಿತು. ಗೌರಮ್ಮನವರು 'ಓ' ಎಂದು ಓಡಿಬಂದರು. ಅಂದಿನ ಇದೇ ನಗೆ, ಆದೆ ನಿಲುವು, ಅದೇ ಬಟ್ಟೆ, ಅದೇ ವೇಷ-ಭೂಷಣ! 'ನಮಸ್ಕಾರ ಮಹಾಶಯರೇ, ಅಂತೂ ಒಮ್ಮೆ ಬಂದಿರಾ?' ಎಂದರು. ಉಕ್ಕಿ ಬರುವ ನಗೆಗೆ ಸ್ವಾತಂತ್ರ್ಯ ಕೊಟ್ಟುಬಿಟ್ಟೆ. ಸ್ವಲ್ಪ ನಿಲ್ಲಿ, ನಿನ್ನನ್ನು ಬೈಯಬೇಕಾಗಿದೆ; ಇಲ್ಲ, ಒಳಗೆ ಬನ್ನಿ; ಅಲ್ಲಿಯೇ ಬಯ್ಯುತ್ತೇನೆ!” ಎಂದು ಒಳಗೆ ಕರೆದೊಯ್ದರು.

ಒಂದು ಕೋಚು, ನಾಲ್ಕು ಖರ್ಚಿ. ನಡುನಡುವೆ ಹೂಪಾತ್ರೆಗಳನ್ನು ಹೊತ್ತ ಚಿಕ್ಕಮೇಜುಗಳು. ಒಂದಣಿಗೆ ಚಾಪೆ ಹಾಸಿದೆ. ನಾಲ್ಕು ಮೂಲೆಗೆ ನಾಲ್ಕು ಸಣ್ಣ ಮೇಜುಗಳು ಖಾದಿಯ ಬಟ್ಟೆ ಹೊದ್ದು ಹೂಪಾತ್ರೆಗಳಿಂದಲಂಕೃತವಾಗಿವೆ. ಸಾಲದುದಕ್ಕೆ ಬೇಬಿಯ ನಾನಾ