ಪುಟ:ಕಂಬನಿ-ಗೌರಮ್ಮ.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦

ಕಂಬನಿ

ಭಂಗಿಯಲ್ಲಿ ನಿಂತ, ಆಡಿದ, ಓದುತ್ತಿರುವಾಗಿನ ಭಾವಚಿತ್ರಗಳು. ಅಲ್ಲಿ ಗೌರಮ್ಮ ಕೂಡುವುದು ಕಡಿಮೆ. ಅದನ್ನು ದಾಟಿ ಮೊಗಸಾಲೆ; ಮುಂದೆ ಹೂದೋಟ. ತರತರದ ಹೂಗಿಡಗಳು-ಎಲೆಬಳ್ಳಿ: ಅರ್ಧಪರಿಘದಂತೆ ಒಂದು ಕಿತ್ತಳೆಯ ಸಾಲು ಹೂದೋಟವನ್ನಾಕ್ರಮಿಸಿದೆ. ಗೊಂಚಲು ಗೊಂಚಲಾಗಿ ಕಿತ್ತಳೆಗಳು ಗಿಡಗಳನ್ನು ಬಾಗಿಸಿವೆ. ಅಲ್ಲಿ ಒಂದು ದೊಡ್ಡ ಮೇಜು. ಅದರ ಮೇಲೆ ಲೇಖನ ಸಾಹಿತ್ಯ-ಗೌರಮ್ಮನವರ ಸಾಹಿತ್ಯ-ಇಂಗ್ಲೀಷು ಕನ್ನಡ ಪುಸ್ತಕ-ಪತ್ರಿಕೆಗಳು ಹರಡಿವೆ. ಅಲ್ಲಿ ನಾಲ್ಕು ಖುರ್ಚಿಗಳು ಮೇಜನ್ನು ಸುತ್ತುವರಿದಿವೆ; ಒಂದು ಮುರುಕು ಖುರ್ಚಿ ಒಂದು ಮೂಲೆಗಿದೆ. ಅದರ ಬೆತ್ತದ ಚಾಳಿಗೆ ಹರಿದಿದೆ. ಅದರ ಬುಡದಲ್ಲೊಂದು ಸ್ಟೂಲನ್ನು ಸರಿಸಲಾಗಿದೆ. ನನಗೆ ಅದನ್ನು ನೋಡಿ ಆಶ್ಚರ್ಯವಾಯಿತು. ಅದರ ಹತ್ತಿರ ಹಾಯ್ದೆ; "ಹಾ ! ಅದು ನನ್ನ ಸ್ಫೂರ್ತಿದಾಯಕ ಖುರ್ಚಿ, ನೀವು ಓದಿದ ಕತೆಗಳು ಅದರ ವರಗಳು. ನೀವು ಇತ್ತ ಬರಬೇಡಿ. ನನ್ನ ಸ್ಫೂರ್ತಿ ನಿಮ್ಮದಾದೀತು” ಎಂದು ಒಂದೇ ಉಸುರಿನಲ್ಲಿ ಹೇಳಿದರು. ನಾನು ಹಟದಿಂದ ಅದರ ಕಡೆಗೆ ಹೋದೆ. ಬುಡದ ಸ್ಟೂಲನ್ನು ಎಳೆದರು-ಚಾಳಿಗೆ ಜೊಳ್ಳು ಬಿತ್ತು. ನಾವಿಬ್ಬರೂ ಮೇಜಿನ ಹತ್ತಿರಬಂದೆವು. ಒಂದೊಂದು ಆಸನವನ್ನು ಆಕ್ರಮಿಸಿದೆವು. "ಈ ಎಲ್ಲ ಸುದ್ದಿ ಹೇಳಿ" ಎಂದರು. “ ನ್ನ ಕಾಗದಗಳಿವೆಯೇ?” ಎಂದೆ. "ಅದಿರಲಿ-ಮೊದಲು ಸುದ್ದಿ ಹೇಳಿ” ಎಂದರು. ನಾನು ಕೈಯಲ್ಲಿದ್ದ ವೃತ್ತ ಪತ್ರ ಚಾಚಿದೆ. ಅದನ್ನಿಸಿದುಕೊಂಡು ಮೇಜಿನ ಮೇಲೆಸೆದು “ಎಂಥ ಜನ ನೀವು !" ಎಂದರು. "ನನಗೆ ಅದು ಬರಲಿಕ್ಕೆ ಆಗಲಿಲ್ಲ” ಎಂದೆ. "ಅದು ನನಗೆ ಗೊತ್ತು-ಯಾಕೆ ಆಗಲಿಲ್ಲ ಹೇಳಿ!..ಅಯ್ಯೊ, ನಿಮ್ಮನ್ನು ಹಾಗೇ ಕೂರಿಸಿದೆನಲ್ಲಾ! ಸರಸ್ವತೀ, ಕಾಫಿ! ರುಕ್ಮಾ, ಹಣ್ಣು!” ಎಂದು ಕೂಗಿಕೊಂಡು ತಾವು ಹೋಗಿ ನನ್ನ ಕಾಗದಗಳನ್ನು ತಂದುಕೊಟ್ಟರು. ನಾನು ಅವಗಳನ್ನು ಓದಲು ಆತುರನಾಗಿದ್ದೆನಾದರೂ ಅವರೊಡನೆ ಮಾತನಾಡಲು ಅದಕ್ಕೂ ಹೆಚ್ಚು ಆತುರನಾಗಿದ್ದೆ. "ಮೊದಲು ಕಾಫಿ ಕುಡಿಯಿರಿ, ಕಾಗದ ಆಮೇಲೆ ಓದಿದರಾಗದೇ ? ಅಯ್ಯೊ ಇವರೆಲ್ಲಿ? ಮನೆಗೆ ಜನ ಬಂದಾಗ ಇವರಿರುವುದೇ ಇಲ್ಲ” ಎಂದು ಒಂದೆಡೆಗೆ ಓಡಿದರು. ಎರಡು ನಿಮಿಷಗಳಲ್ಲಿ