ಪುಟ:ಕಂಬನಿ-ಗೌರಮ್ಮ.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨

ಕಂಬನಿ

ಶ್ರೀ ಗೋಪಾಲಯ್ಯನವರು ಓದುವ ಪಂಪಭಾರತ, ಜೈಮಿನಿ ಭಾರತ ಇರುತ್ತಿದ್ದ ವ್ಯ, ಇವರ ಒಬ್ಬ ಗೆಳತಿಯ ತಾಯಿ ಮಕ್ಕಳ ಕಾಟ 'ದಿಂದ thದಾಗ 'ಯಾಕೋ ಕಾಣೆ' ಎನ್ನುತ್ತಿದ್ದರಂತೆ. ಹಿಂದಿನಿಂದ ಗೌರಮ್ಮನವರ 'ರುದ್ರ ವೀಣೆ ಮಿಡಿಯುತಿರುವುದು' ಎಂದು ಗೆಳ ತಿಯ ಕಿವಿಯಲ್ಲಿ ನುಡಿಯುತ್ತಿದ್ದರಂತೆ.

ಇವರಿಗೆ ಇಂಗ್ಲಿಷ್ ಕತೆಗಳನ್ನೊದುವುದು ಬಹಳ ಮೆಚ್ಚುಗೆ. ಒಮ್ಮೆ ಒಂದು ಕಾಗದದಲ್ಲಿ ಈ "ಮೊನ್ನೆ ಮೊನ್ನೆ 'Great Stories of the world' ಎಂಬ ಪುಸ್ತಕವನ್ನು ಓದಿದೆ. ಬಹಳ ಚೆನ್ನಾಗಿದ್ದ ಕತೆಗಳಿದ್ದವು. ಓದಿ ಎನಿಸಿತ:' ಅಯ್ಯೋ, ಈ ಕತೆಗಳ ಮುಂದೆ ನಮ್ಮ ಪ್ರಯತ್ನವೇ' ಎಂದ. ಮತ್ತೆ ಅವನ್ನು ಅನುವಾದಿಸಲೇ-ಎಂದುಕೊಂಡೆ. ಬೇಡ, ಇಷ್ಟೊಂದು ಸುಂದರವಾದವುಗಳನ್ನು ನನ್ನ ಬರೆಹದ ದಶರ ವಿರೂಪ ಗೊಳಿಸಬೇಕೆಂದು ಸುಮ್ಮನಾದೆ ಎಂದು ಬರೆದಿದ್ದರು.ಅನುವಾದಗಳು ಚೆನ್ನಾಗಿರದಿದ್ದರೆ ಅವರಿಗೆ ತುಂಬ ಬೇಸರವಾಗುತ್ತಿತ್ತು. ಒಮ್ಮೆ ನಾನು ಕಳಿಸಿದ ಒಂದು ಅನುವಾದಿತ ಪುಸ್ತಕ ಓದಿ 'ನಿನ್ನೆ ರಾತ್ರಿ '......' ಓದಿದೆ. ಚೆನ್ನಾಗಿಲ್ಲದ ಅನುವಾದಗಳನ್ನು ಓದುವದಕ್ಕಿಂತಲೂ ಓದದಿದ್ದರೆ ಒಳ್ಳೆಯದೆನಿಸುವುದು, ಮದ್ರಾಕ್ಷಸಗಳು ತಂತಿವೆ. ಸಾಲ ದುದಕ್ಕೆ ಅನುವಾದವೂ ಅಷ್ಟು ಚೆಂದ.!” ಎಂದು ಬರೆದರು.

ಅಲ್ಲಲ್ಲಿಯ ಸಾಹಿತ್ಯದ ಚಟುವಟಿಕೆಗಳನ್ನವರು ಬಹಳ ಕುತೂಹಲ ಬಂದ ನಿರೀಕ್ಷಿಸುತ್ತಿದ್ದರು. “ ಒಳ್ಳಾರಿ ಸಮ್ಮಿಲನಕ್ಕೆ ಬನ್ನಿ ” ಎಂದು ಒರಿದಿದ್ದೆ. ಅವರಿಗೆ ಬರಲಿಕ್ಕಾಗಲಿಲ್ಲ. ನಾನು ತಿರುಗಿ ಬಂದ ಕೂಡಲೆ ಉತ್ತರ ಬರೆಯಲಿಲ್ಲ. ಆಗ ಒಂದ ಗೌರಮ್ಮನವರ ಕಾಗದ ಹೀಗಿದೆ :

“ಸಾಹಿತ್ಯ ಸಮ್ಮೇಳನವಾಗಿ ಒಂದು ವಾರ ಕಳೆದರೂ ನಿಮ್ಮ ಪತ್ರವೇ ಇಲ್ಲ. ನನಗಂತೂ ನಿಮ್ಮ ಪತ್ರದ ಹಾದಿ ನೋಟನೋಡಿ ಕಣ್ಣುನೋವು ಬಂದುಹೋಗಿದೆ. ಸಾಹಿತ್ಯ ಸಮ್ಮೇಳನದ ವಿಷಯ ಪೇಪರ್‌ಗಳಲ್ಲಿ ಓದುವದಕ್ಕಿಂತಲೂ ನಿಮ್ಮ ಪತ್ರದಲ್ಲಿ ಓದಿದರೆ ಹೆಚ್ಚು ಚೆಂದವೆಂದು ನನ್ನ ಭಾವನೆ. ಆದರೆ ನೀವು ಎಲ್ಲವನ್ನೂ--