ಪುಟ:ಕಂಬನಿ-ಗೌರಮ್ಮ.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೪

ವ್ಯಸನ. ಅದೇ ವರ್ಷ ಲಾ ಕಲಿಯುವುದಕ್ಕೆ ಮದರಾಸಿಗೂ ಹೊರಡಬೇಕಾಗಿತ್ತು. ಸೀತೆಯನ್ನು ತನ್ನವಳನ್ನಾಗಿ ಮಾಡಿಕೊಳ್ಳದೆ ರಾಜನಿಗೆ ಊರಿನಿಂದ ಹೊರಗೆ ಹೋಗುವುದಕ್ಕೆ ಮನಸ್ಸಿಲ್ಲ. ಮದುವೆಯಾದ ಮೇಲೆ ಅಜ್ಜಿ ಸಾಯಬಾರದಿತ್ತೇ ಎಂದುಕೊಳ್ಳುವನು ರಾಜ. ರತ್ನ ನೊಡನೆ ಮಾತನಾಡುವ ನೆವನದಿಂದ ದಿನಕ್ಕೆ ಹತ್ತುಸಾರೆಯಾದರೂ ಸೀತಾದರ್ಶನಕ್ಕೆ ರಾಜ ಹೋಗದ ದಿನವಿರಲಿಲ್ಲ. ರತ್ನನಿಗೆ ರಾಜನ ಈ ತರದ ವ್ಯವಹಾರದಿಂದ ತಡೆಯಲಾರದಷ್ಟು ನಗು ಬರುತ್ತಿತ್ತು. ರತ್ನ ನಕ್ಕಾಗಲೆಲ್ಲಾ ರಾಜ 'ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ' ಎನ್ನುತ್ತಿದ್ದ. ಆಗ ರತ್ನ 'ಸೊಸೆ'ಗೆ ಕಾಲ ಬಂದಾಗ ಹೇಳಂತೆ ಎನ್ನುತ್ತಿದ್ದ. 'ಬಂದೇ ಬರುತ್ತೆ, ಬಾರದೆ ಹೋದ್ರೆ ಹೇಳ್ಮತ್ತೆ' ಎಂದು ರಾಜ ರತ್ನನ ಬೆರಳಿನಲ್ಲಿದ್ದ ಉಂಗುರವನ್ನು ನೋಡಿ ನಗುತ್ತ ಹೇಳುತ್ತಿದ್ದ.

ರಜೆ ಕಳೆದು ಹೋಯಿತು. ಜೊತೆಯಾಗಿಯೇ ಇಬ್ಬರೂ ಮದರಾಸಿಗೆ ಹೊರಟರು. ಸೀತೆಯನ್ನು ಬಿಟ್ಟು ಹೊರಡುವಾಗ ರಾಜನಿಗೆ ತಡೆಯಲಾರದಷ್ಟು ದುಃಖ; ರತ್ನನಿಗೆ ಹಿಡಿಸಲಾಗದಷ್ಟು ನಗು ರಾಜನ ಅವಸ್ಥೆ ನೋಡಿ. ಅಂತೂ ಇಂತೂ ರೈಲು ಹೊರಟುಬಿಟ್ಟಿತು. ಮದರಾಸಿಗೂ ತಪಿದರು.

ಒಂದು ದಿನ ಸಾಯಂಕಾಲ ರಾಜ ಮತ್ತು ರತ್ನ ಸಮುದ್ರತೀರದಲ್ಲಿ ತಿರುಗಾಡುತ್ತಿದ್ದರು. ಆ ದಿನವೇ ಸೀತೆಯ ಕಾಗದ ರತ್ನನಿಗೆ ಬಂದಿದ್ದಿತು. ಅವಳ ಕಾಗದ ಬಂದಾಗಲೆಲ್ಲಾ ತಾನು ಓದಿದ ಮೇಲೆ ರಾಜನಿಗೆ ಕೊಡುವುದು ರತ್ನನ ಪದ್ದತಿ. ಆ ದಿನ ಮಾತ್ರ ರಾಜನನ್ನು ತಮಾಷೆನಾಡಬೇಕೆಂದು ಕಾಗದವನ್ನು ಕೊಟ್ಟಿರಲಿಲ್ಲ. ಏನೇನು ಬರೆದಿದೆ ಆ ಕಾಗದದಲ್ಲಿ ಎಂದು ತಿಳಿದುಕೊಳ್ಳಲು ರಾಜನಿಗೆ ಆತುರ. ಕೇಳಿದರೆ ರತ್ನ ಚೇಷ್ಟೆ ಮಾಡುತ್ತಾನೆಂದು ಭಯ. ತಾನಾಗಿ ಕೇಳದೆ ರಾಜನಿಗೆ ಕಾಗದ ಕೊಡಬಾರದೆಂದು ರತ್ನನಿಗೆ ಹಟ. ಕೊನೆಗೆ ರತ್ನನ ಹಟವೇ ಗೆದ್ದಿತು. ರಾಜ ತಾನೇ ಕೇಳಿದ-'ರತ್ನ, ಊರಿಂದ ಕಾಗ್ಧ ಬಂತೇನೋ?' 'ಹೂ' 'ಏನಂತೆ ?' ' ಏನೂ ಹೆಚ್ಚಿಗೆ ವಿಶೇಷವಿಲ್ಲ.' ರಾಜನಿಗೆ ಸೀತೆಯ ಸುದ್ದಿ