ಪುಟ:ಕಂಬನಿ-ಗೌರಮ್ಮ.pdf/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೮

'ಫ್ರೆಂಚ್ ಲೀವ್ ತಕೋಳೋದು-ಬಹಳ ಚೆನ್ನಾಗಿ ಹಾಡ್ತಾಳೋ ಕೇಳಿದರೆ ಕೇಳ್ಬೇಕು ವಾಣಿ ಸಂಗೀತ.'

'ಇದೇನೋ! ವಾಣಿ ಸಂಗೀತ ಎಡ್ವುರ್‌ಟೈಸ್ ಮಾಡೋಕ್ಕೆ ಒಪ್ಪಿದ್ದಿಯಾ? ಯಾವಾಗ ವಾಣಿನ ಹೊಗ್ಳೋಕ್ಕೆ ಹೊರಟಿದ್ದೀಯಲ್ಲ.'

'ನೀನೊಂದು ಸಾರಿ ಕೇಳು ಸಂಗೀತ. ಆ ಮೇಲೆ ಹೇಳ್ತಿ ನೋಡು ನಿಚ್ವಾಗ್ಲೂ ವಾಣೀಂತ.'

'ಆಗ್ಲಿ ಹಾಗಾದ್ರೆ-ನಾಳೆ ನಿನ್ನ ವಾಣೀನ ನೋಡೋಕ್ಕೆ ಬಂದೇ ಬರ್ತೀನಿ.'

'ಹೇಗಿದ್ಯೋ ಸಂಗೀತ?'

'ಪರವಾ ಇಲ್ಲ-ಚೆನ್ನಾಗಿ ಹಾಡ್ತಾಳೆ-ಆದ್ರೆ....

'ಏನು ಆದ್ರೆ?'

'ನೀನ್ಹೇಳೋಷ್ಟು ಮಟ್ಟಿಗೆ ಹಾಡೋಲ್ಲ. ನಿನ್ಮಾತು ಕೇಳಿ ಹೇಗಿದ್ದಾಳೊ ಎಂತಿದ್ದೆ-ಈಗ.'

'ಈಗ?'

'ನಾಮ್ಮಾಗೇ ಇದ್ದಾಳೆ-ಹೆಚ್ಚೇನೂ ತೋರೋದಿಲ್ಲ...'

'ಅಯ್ಯೋ ಮಂಕೆ-ಕೋಣನ ಮುಂದೆ ಕಿನ್ರಿ ಬಾರಿಸ್ತಾಗೆ ನಿನ್ಮುಂದೆ ಅವಳ ಸಂಗೀತ-ಆ ರೂಪು ನೋಡು-ಕಂಠಸ್ವರ ಹೇಗಿದೆ ಕೇಳು.'

'ಇದೇನೋ ಸನ್ಯಾಸೀ-

ರಾಜನ ಮಾತು ಮುಗಿಯುವ ಮೊದಲೇ ಸಂಗೀತ ಮುಗಿಯಿತು. ಜನರು ಹೊರಗೆ ಹೊರಡತೊಡಗಿದರು. ರತ್ನ- 'ಸ್ವಲ್ಪ ತಡಿ ರಾಜ-ಈಗ್ಬಂದೆ' ಎಂದು ಹೇಳಿ ಹೊರಗೆ ಹೊರಟ. ಈಗ್ಬಂದೆ ಎಂದು ಹೇಳಿ ಹೋದ ರತ್ನ ಒಂದು ಗಂಟೆಯಾದರೂ ಬರಲಿಲ್ಲ. ಕೂತು ಕೂತು ರಾಜನಿಗೆ