ಪುಟ:ಕಂಬನಿ-ಗೌರಮ್ಮ.pdf/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೬

ನನ್ನ ಹೆಂಡತಿ ಶಾಂತೆಯನ್ನು ಚೆನ್ನಾಗಿ ನಡೆಸಿಕೊಳ್ಳುತ್ತಿರಲಿಲ್ಲ. ಮೊದಲ ನನಗದು ತಿಳಿಯಲಿಲ್ಲ. ಈಗ ತಿಳಿಯಿತು. ಅಯ್ಯೋ-

ಆರು ತಿಂಗಳ ಹಿಂದೆ ನನ್ನ ಹೆಂಡತಿಯ ಅಣ್ಣ ಬಂದಿದ್ದ. ಅವನು ದುಷ್ಟನೆಂದ. ನನಗೆ ಗೊತ್ತಿದ್ದರೂ ನನಗವನಿಂದ ಕೆಡುಕಾಗಲಾರದೆಂದೆಣಿಸಿದ್ದೆ. ನಾನಾಗಲೀ ನನ್ನ ಹೆಂಡತಿಯಾಗಲೀ ಶಾಂತೆಗೆ ಸ್ವಲ್ಪ ದಯೆಯನ್ನು ತೋರಿಸಿದ್ದರೆ ಅವಳಿಂದು ಬೀದಿಯ ಭಿಕಾರಿಣಿಯಾಗುತ್ತಿರಲಿಲ್ಲ. ರಘು (ನನ್ನ ಹೆಂಡತಿಯ ಅಣ್ಣ) ಅವಳನ್ನು ನರಕದ ದಾರಿಯಲ್ಲಿ ಕರೆದೊಯ್ಯುವುದನ್ನು ನೋಡಿದರೂ ನನ್ನ ಹೆಂಡತಿ ಸುಮ್ಮನಿದ್ದಳು. ಅರಿಯದ ಶಾಂತೆಯನ್ನು ತಿಳಿಯದ ನಾನೂ ತಿಳಿದ ನನ್ನ ಹೆಂಡತಿಯ ಈ ನರಕಕ್ಕೆ ನೂಕಿಬಿಟ್ಟೆವು. ಅಷ್ಟು ಹೊತ್ತಿಗೆ ಸರಿದೂ ಅವಳನ್ನು ಕೈಹಿಡಿದ, ವಂಚನೆಯ ಮಾತುಗಳಿಂದ ಮರುಳುಮಾಡಿ ಕರೆದುಕೊಂಡು ಹೋಗಲು ರಘು ಬಂದಿದ್ದ. ಬ್ರಹ್ಮ ಸಮಾಜಕ್ಕೆ ಸೇರಿ ಅವಳನ್ನು ಮದುವೆಯಾಗುತ್ತೇನೆಂದು ಮಾತು ಕೊಟ್ಟಿದ್ದನಂತೆ. ಶಾಂತೆಯನ್ನು ಬಿಟ್ಟು ಹೋದಮೇಲೆ ಅವನ ಮನಸ್ಸಿನಿಂದ ಆ ಮಾತುಗಳೂ ಮಾರುವಾದಂತೆ ತೋರುತ್ತದೆ. ಅವನು ಹೊರಟುಹೋಗಿ ಸುಮಾರು ಎರಡು ತಿಂಗಳಗಳಾದ ಮೇಲೆ ಒಂದು ದಿನ ಬೆಳಗಿನ ಹೊತ್ತಿನಲ್ಲಿ ನೋಡುವಾಗ ಶಾಂತೆ ಇರಲಿಲ್ಲ. ಒಂದು ಕಾಗದವನ್ನು ನನ್ನ ಮೇಜಿನ ಮೇಲಿಟ್ಟು ಅವಳು ಹೊರಟುಹೋಗಿದ್ದಳು. ಅವಳ ಕಾಗದದಲ್ಲಿ ಹೀಗಿತ್ತು. "ಅಣ್ಣ ಕೆಟ್ಟ ಹೆಸರನ್ನು ಪಡೆಯದ ನಮ್ಮ ಮನೆತನಕ್ಕೆ ನಾನು ಕಲಂಕ ತಂದಿದ್ದೇನೆ. ಆದರದು ಇತರರಿಗೆ ತಿಳಿಯುವ ಮೊದಲೇ ನಾನದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತೇನೆ. ನಿನಗಾಗಲೀ ಅತ್ತಿಗೆಗಾಗಲೀ ನನ್ನ ಸ್ಥಿತಿಯನ್ನು ಹೇಳುವ ಧೈರ್ಯ ನನಗಿಲ್ಲ. ನಿನ್ನ ವ್ಯಸನವನ್ನೂ ಅತ್ತಿಗೆಯ ತಿರಸ್ಕಾರವನ್ನು ಸಹಿಸುವ ಶಕ್ತಿ ನನಗಿಲ್ಲ. ಹೇಳದೆ ಹೊರಟುಹೋಗುವುದಕ್ಕಾಗಿ ಕ್ಷಮಿಸು - ಶಾಂತೆ ”

ನಾನ, ನಾನವಳನ್ನು ಪ್ರೀತಿಯಿಂದ ನೋಡಿಕೊಂಡಿದ್ದರೆ ಅವಳು ಪರದೇಶಿಯಾಗುತ್ತಿರಲಿಲ್ಲ. ಶಾಂತೆಯನ್ನು ನಮ್ಮ ಮನೆಯಿಂದ ನೂಕಿದೆ.