ಪುಟ:ಕಂಬನಿ-ಗೌರಮ್ಮ.pdf/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಇನ್ನು ನನ್ನ ಹೃದಯಕ್ಕೆ ಶಾಂತಿ ದೊರೆಯುವುದು ತಾನೇ ಹೇಗೆ ? ನನ್ನ ಬಾಳು.......

ಕ್ಷಮಿಸು-ನನ್ನ ಕಷ್ಟವನ್ನು ಹೇಳಿ ನಿನ್ನನ್ನು ನೋಯಿಸುವುದಕ್ಕೆ.

ರಾಜ

೨0-೫-೨೪

ರಾಜ,

ಈಗ ತಾನೇ ನಿನ್ನ ಕಾಗದ ಸಿಕ್ಕಿತು. ಓದಿ ಮನಸ್ಸು ಕೊರೆಯುತ್ತಿದೆ. ಹಿಂದಿನ ದಿನಗಳಲ್ಲಿ ನಮ್ಮೊಡನೆ ಆಡುತ್ತಿದ್ದ ನಗುಮುಖದ ಶಾಂತೆ ಈಗ..ಅಯ್ಯೋ ನಾವಿದ್ದು ಪ್ರಯೋಜನವೇನು ?

ರಾಜ, ಅವಳನ್ನು ಹುಡುಕುವುದು ನಮ್ಮ ಕರ್ತವ್ಯ. ಅವಳನ್ನು ಪತ್ತೆ ಮಾಡಿ, ಅವಳ ಮುಂದಿನ ಜೀವನವನ್ನು ಸುಖಮಯವಾಗಿ ಮಾಡುವುದು ನಮ್ಮ ಕೈಯಲ್ಲಿದೆ. ಬೇಸರದಿಂದ ಸುಮ್ಮನೆ ಕೂರದೆ ಅವಳನ್ನು ಹುಡುಕುವುದಕ್ಕೆ ಹೊರಡು. ನಾನೂ ಅದರ ಸಲುವಾಗಿ ಈ ರೈಲಿಗೇ ಹೊರಡುತ್ತೇನೆ. ನಮ್ಮ ಕರ್ತವ್ಯವಿದೆಂದು ನನಗೆ ತೋರುತ್ತದೆ.

ನಿನ್ನ,
ನಾನ

೧೨-೩೦ ಹಗಲು

ನಾನ,

ನಿನ್ನ ಕಾಗದ ಸಿಕ್ಕಿತು. ಅದರೊಡನೆಯೇ ನಿನ್ನಿನ ವರ್ತಮಾನ ಪತ್ರಿಕೆಯೂ ಬಂತು.

ಗಂಡಸರು ಹೆಂಗಸರಿಗಿಂತ ಧೈರ್ಯವಂತರಂತೆ; ಸಹನ ಶಕ್ತಿ ಇರುವವರಂತೆ; ನಿಜವೆಂದು ನಾನೂ ನಂಬಿದ್ದೆ. ಆದರೆ ಆ ಪತ್ರಿಕೆಯನ್ನು ಓದಿದ ಮೇಲೆ ಮಾತ್ರ ತಡೆಯಲಾರದೆ ಹೋದೆ..ಹಾಗೆಯೇ ಮೇಜಿನ ಮೇಲೆ

೩೭