ಪುಟ:ಕಂಬನಿ-ಗೌರಮ್ಮ.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೮

ಮಲಗಿದೆ. ಮಧ್ಯಾನ್ಹದ ಊಟಕ್ಕೆ ನನ್ನ ಹೆಂಡತಿಯು ಕರೆಯುತ್ತಿದ್ದಾಳೆ. ಊಟವೆ! ಶಾಂತೆಯನ್ನು ಕೊಂದ ನನಗೆ ಊಟವೆ !......

ನಾನ, ಹಿಂದಿನ ದಿನಗಳ ಸ್ಮರಣೆಯನ್ನೇಕೆ ಮಾಡುವೆ? ಆಗಿನ ಆಟ, ಆಗಿನ ಸುಖ, ಆಗಿನ ಸಂತೋಷ, ಆಗಿನ ಒಂದೂ ಈಗಿಲ್ಲ-ಬಾಲ್ಯವಲ್ಲವೇ ಮನುಷ್ಯನ ಸುಖದ ಕಾಲ. ಅದರಲ್ಲ ನನ್ನ ಮತ್ತು ಶಾಂತೆಯ ಬಾಲ್ಯ......

ಪೇಪರಿನಲ್ಲಿ ಏನಿತ್ತೆಂದು ನೀನು ಯೋಚಿಸಬಹುದು. 'ಇಂದು ಇಲ್ಲಿಗೆ ನಾಲ್ಕು ಮೈಲು ದೂರದಲ್ಲಿರುವ ಕೆರೆಯಲ್ಲಿ ಒಂದು ಹೆಂಗಸಿನ ಶವವು ಸಿಕ್ಕಿತು. ಅವಳು ಗರ್ಭಿಣಿ. ಜನರಲ್ ಆಸ್ಪತ್ರೆಯಲ್ಲಿ ಅವಳ ಶವವನ್ನಿಟ್ಟಿದ್ದಾರೆ. ಅವಳು ಯಾರೆಂದು ಗೊತ್ತಿಲ್ಲ. ಯಾರಿಗಾದರೂ ಅವಳ ವಿಷಯ ತಿಳಿದಿದ್ದರೆ ದಯಮಾಡಿ ತಿಳಿಸಬೇಕೆಂದು ಕೋರುತ್ತೇವೆ.' ಜನರಲ್ ಆಸ್ಪತ್ರೆಗೆ ಹೋದೆ. ನಾನ, ಶವವನ್ನು ನೋಡಿದೆ..ಶಾಂತೆ !..

ಬೆಳ್ಳಗಾದ ಮುಖ. ಬಿಳೀ ಹಣೆಯಲ್ಲಿ ದಯಾಮಯಿಯಾದ ನರ್ಸ್ ಒಬ್ಬಳು ಇಟ್ಟ ಕೆಂಪು-ಕುಂಕುಮ ಬೊಟ್ಟು.... ಇನ್ನು ಬರೆಯಲಾರೆ-

ರಾಜ
ಅಕ್ಟೋಬರ ೧೯೩೩