ಪುಟ:ಕಂಬನಿ-ಗೌರಮ್ಮ.pdf/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮುನ್ನುಡಿ

ತಂಗಿ ಗೌರಮ್ಮನವರ ಕಥಾಸಂಗ್ರಹಕ್ಕೆ ಮುನ್ನುಡಿಯನ್ನು ಬರೆಯಲು ನಾನು ಒಪ್ಪಿಕೊಂಡಾಗ ಅವರು ಇಷ್ಟು ಅಕಸ್ಮಾತ್ತಾಗಿ ದಾರುಣವಾಗಿ ನಮ್ಮನ್ನಗಲಿ ಹೋಗುವರೆಂದು ನಾನು ಭಾವಿಸಿರಲಿಲ್ಲ. ಅವರ ಕಥಾಸಂಗ್ರಹಕ್ಕೆ ಕಂಬನಿ' ಯೆಂಬ ಹೆಸರನ್ನು ಸೂಚಿಸಿದಾಗ ಅವರನ್ನು ಕುರಿತೇ ಕಂಪಿಸಿಗಳುರುಳುವವೆಂದು ನಾನು ಎಣಿಸಿರಲಿಲ್ಲ. ಯಾವ ಕೆಲಸ ಸಂತೋಷ ಅಭಿವರಾನಗಳದೆಂದು ನಾನು ಬಗೆದಿದ್ದೆನೋ-ಅದರೊಳಗಿನ ಅಭಿಮಾನ ಉಳಿದಿದೆ; ಆದರೆ ಸಂತೋಷದ ಸ್ಥಳವನ್ನು ಸಂತಾಪವು ವ್ಯಾಪಿಸಿದೆ. ಆ ಸಂತೋಷದಂತೆಯೇ ಈ ಸಂತಾಪದಲ್ಲಿ ಒಂದು ವಿಧದ ಸವಿಯಿರುವದಾದರೂ ಅದೆಲ್ಲವೂ ಕಣ್ಣೀರು ಸವರಿದ ನಾಲಗೆಯಿಂದ ಪೆಪ್ಪರಂಟು ಚಪ್ಪರಿಸಿವಂತೆಯೆ ಸರಿ, ಗೌರಮ್ಮನವರ ಜೀವನದಲ್ಲಿ ಒಂದು ಬಗೆಯ ಸಮಾಧಾನವಿದ್ದರೂ ಅವರ ಜೀವನಸಹಾನುಭೂತಿಯಲ್ಲಿ ಪರಗತದುಃಖಾಸ್ವಾದನೆಯಿಂದ ಬಂದ ಮಧುರ ಏಷಾದಕ್ಕೆ ಅಪಾರವಾದ ಸ್ಥಳವಿತ್ತು. ಅಂತೆಯೇ, ಅವರ ಕಥಾಫಲಗಳಿಗೆ ಬೇವಿನ ಹಣ್ಣುಗಳ ಕಟುಮಧುರತೆಯಿದೆ, ಊತೋದಿತ ಪ್ರೀತಿಯು ಈ ಕತೆಗಾರ್ತಿಯು ಅಕಾಲಿಕ ಮರಣವ ಕಟು ಮಧುರ! ಅವರ ಸಹಾನುಭೂತಿಯ ಕಥಾ ವಸ್ತುಗಳು ಕಟುಮಧುರ! ಈ ಎರಡರಿಂದದುರುವ ಕಂಬನಿಗಳೂ ಕಟು ಮಧುರ! ಒಂದಕ್ಕೊಂದು ಹೊಂದಿಕೆಯಾಗಿಯೇ ಇದೆ!