ಪುಟ:ಕಂಬನಿ-ಗೌರಮ್ಮ.pdf/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೦

ಕೂತು ಬೇಸತ್ತಿದ್ದ ಕಿಟ್ಟಣ್ಣ ಅವಳ ಕರ್ಕಶ ಕಂಠದಿಂದ ಹೊರಟ ಕರ್ಣ ಕಠೋರ ಸೃರವನ್ನು ಹೇಗೆ ಸಹಿಸಿಕೊಂಡನೋ ತಿಳಿಯದು. ಹೇಗೂ ಅವಳ ಪಾಡು ಮುಗಿಯಿತು. ಇನ್ನೇನು ಬದುಕಿದೆ ಎಂದುಕೊಂಡ. ಆದರೆ ಒಂದೇ ಒಂದು ಹಾಡು ಹೇಳಿ ಅರಸಿನೆಣ್ಣೆ ಮುಗಿಸುವದೇ ? ಛೆ, ಎಂದಿಗೂ ಇಲ್ಲ-ಕಮ್ಮಿ ಪಕ್ಷ ಹತ್ತಿಪ್ಪತ್ತಾದರೂ ಹೇಳಬೇಡವೇ ?

ಆಗಲಿ ಎಷ್ಟಾದರೂ ಹಾಡಿಕೊಳ್ಳಲಿ, ಆದರೆ ಬೇಗ ಬೇಗ ಹೇಳಿ ಮುಗಿಸಿಬಿಡಬಾರದೇ ? 'ಹೇಳೀಂದ್ರೆ-ನೀವೇ ಹೇಳೀಂದ್ರೆ - ನೀವ್ಹೇಳೀಂದ್ರೆ' ಎಂದು ಹತ್ತಾರು ಸಾರಿ ಹೇಳಿಸಿಕೊಂಡು ನನಗೆ ಗಂಟಲು ಸರಿಯಾಗಿಲ್ಲ-ಎಂದು ಬೇರೆ ವೈಯ್ಯಾರಮಾಡಿ ಆ ಮೇಲೆ ಹಾಡಲು (ಅರಚಲು) ಪ್ರಾರಂಭಿಸಿದರೆ ಗಂಟೆ ಒಂದಾದರೂ ಅದಕ್ಕೆ ಅಂತ್ಯವೇ ಇಲ್ಲ. ಕಿಟ್ಟಣ್ಣ 'ಗಂಟಲು ಸರಿಯಲ್ಲದೇನೇ ಇಷ್ಟೊಂದು ಹೊತ್ತು ಅರಚುವಾಗ ಸರಿಯಿದ್ದರೆ ದೇವರೇ ಗತಿ' ಎಂದುಕೊಂಡ. ಅಂತೂ ಕೊನೆಗೆ ಹೇಗಾದರೂ ಎಲ್ಲರ ಹಾಡುಗಾರಿಕೆಯೂ ಮುಗಿಯಿತು. ಇನ್ನು ಆರತಿಮಾಡಿ ಬಿಡುಗಡೆ ಮಾಡಬಹುದು ಎಂದ. ಕಿಟ್ಟಣ್ಣ ನೆಟ್ಟಗೆ ಕೂತ. ಆದರೆ ಅದು ಕೇವಲ ಒಂದೆರಡು ನಿಮಿಷದ ಆಸೆ ಅಷ್ಟೆ. ಮುತ್ತೈದೆಯರಿಬ್ಬರು ಆರತಿಯನ್ನು ಹಿಡಿದುಕೊಂಡು ಇದಿರು ಬಂದು ನಿಂತು ಪುನಃ ಪ್ರಾರಂಭಸಿದರು- 'ಆರತಿ ಎತ್ತಿದ ಹಾಡು ನೀವೇ ಹೇಳಿ, ನೀವೇ ಹೇಳಿ ' ಎಂದ ತಮ್ಮ ತಮ್ಮೊಳಗೇ ವಾದಕ್ಕೆ. ಅವರಿಬ್ಬರ ವಾದ ಕೆಮ್ಮಿ ಪಕ್ಷ ಒಂದು ಗಂಟೆಯತನಕವಾದರೂ ನಡೆಸುತ್ತಿತ್ತೆನೋ! ಆದರೆ ನೋಟ ಬೇಸತ್ತ ಕಿಟ್ಟಣ್ಣ, ನನ್ನ ಹತ್ತಿರ ಕೂತಿದ್ದ ಹುಡುಗಿಯೊಬ್ಬಳನ್ನು ನೋಡಿ 'ಹೋಗಲಿ-ಅವರಿಗೆ ಬರದಿದ್ದರೆ ಪರವಾ ಇಲ್ಲ-ಸೀನಾದರೂ ಒಂದು ಹೇಳಮ್ಮ'ಎಂದ. ಕಿಟ್ಟಣ್ಣ ಆ ಮಾತುಗಳಾಡಿದ್ದು, ಬೆಪ್ಪೇ ಮೂರ್ತಿ ಮಂತವಾಗಿದ್ದಂತೆ ಕುಳಿತಿದ್ದ ಆ ಹುಡುಗಿಯಾದರೂ ಕಿರುಚಿ ಇವರ ವಾದವನ್ನು ಕೊನೆಗೊಳಿಸಲಿ ಎಂದು. ನನಗೂ ಕಿಟ್ಟಣ್ಣನ ಮಾತು ಕೇಳಿ ನಗು ಬಂತು. ಆ ಹುಡುಗಿ ಹಾಡುವುದೇ! ಇಷ್ಟು ಹೊತ್ತ ಹಾಡಿ ದೇವರ ಪಾಡೇ ಹೀಗೆ-ಇವಳು.....