ಪುಟ:ಕಂಬನಿ-ಗೌರಮ್ಮ.pdf/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

— ೨ —

ಶ್ರೀಮತಿ ಗೌರಮ್ಮನವರು ಜೀವಿಸಿದ್ದೇ ೨೭ವರ್ಷ, ಈ ಸಂಗ್ರಹದೊಳಗಿನ ೧೨ ಕತೆಗಳು ಅವರ ಆಯುಷ್ಯದ ಕೊನೆಯ ೭ ವರ್ಷಗಳಲ್ಲಿ ಬರೆದವುಗಳು. ಅವರ ಲೇಖನಾಭ್ಯಾಸವು ಆ ಮೊದಲು ೩-೪ ವರ್ಷಗಳಿಂದಲೂ ನಡೆದಿರಬೇಕೆಂದು ಅವರ ಕಾಗದ ಪತ್ರಗಳಿಂದ ಕಂಡುಬರುವದು. ಈ ಹನ್ನೆರಡೂ ಕತೆಗಳು ಒಂದಿಲ್ಲೊಂದು ವಿಧದಿಂದ ಹೆಣ್ಣುಗಂಡಿನ ಜೀವನದ, ಅದರ ಭಾಗ್ಯ-ದುರ್ಭಾಗ್ಯದ, ಅದರ ಪ್ರಣಯದ ಆಖ್ಯಾನಗಳಾಗಿವೆ. ಗಂಡಸಿನ ದೌರ್ಜನ್ಯ, ದಾರಿದ್ರಕುರೂಪತೆಗಳ ದೌರ್ಭಾಗ್ಯ, ಹೆಂಗಸಿನ ಯುಗಯುಗದ ದುರ್ವಿಧಿವಿಳಾಸ, ಸಮಾಜದ ವಿಪರೀತ ದುರ್ಬುದ್ದಿ, ಶಿಷ್ಟಾಚಾರಗಳ ಅಂಧವಿರೋಧ ಇವೇ ಮೊದಲಾದ ಕಾರಣಗಳಿಂದ ಸ್ತ್ರೀಯರಿಗಾಗುವ ದುಃಖಕ್ಕಾಗಿ ಗೌರಮ್ಮನವರ ಕರುಳಿನ ತಂತಿಯಿಂದ ಮಿಡಿದು ಬಂದ ಮಕ ಶೋಕವು ಹೃದಯ ಭೇದಕವಾಗಿಯ ಹೃದಯ ಬೋಧಕವಾಗಿಯೂ ಆಗಿರುವದು.

ಎಲ್ಲ ಕತೆಗಳೂ ವಿಶೇಷವಾಗಿ ಹೆಣ್ಣಿನ ಹೃದಯವನ್ನೆ ಆವಿಷ್ಕರಿಸುದ್ದರೂ 'ಸನ್ಯಾಸಿ ರತ್ನ' 'ಹೋಗಿಯೇ ಬಿಟ್ಟಿದ್ದ' 'ಪಾಯಶ್ಚಿತ್ತ' ಈ ಕತೆಗಳಲ್ಲಿ ಗಂಡಿನ ಮುಖವಾಗಿ ಪ್ರಣಯವನ್ನು ಪ್ರದರ್ಶಿಸಿದ್ದಾಗಿದೆ. ಮೊದಲಿನೆರಡು ಕತೆಗಳಲ್ಲಿ ಕತೆಗಾರಿಕೆಯಲ್ಲಿಯ ಕಟ್ಟಿನಲ್ಲಿ ಒಂದು ಚಮತ್ಕಾರವಿದೆ. ಮೂರನೆಯ ಕತೆಯಲ್ಲಿ ಗಂಡಿನಷ್ಮೆ, ಹೆಣ್ಣು ಜೀವಾಳವಾಗಿದೆ. ದಿನಚರಿ, ಕಾಗದ ಮೊದಲಾದ ಕಥಾಕಾರಗಳನ್ನು ಅವರು ಕೈಯಾಡಿಸಿ ನೋಡಿದ್ದಾರೆ. ಎಲ್ಲದರಲ್ಲಿ ಅವರ ಕೈ ತಡೆಯಿಲ್ಲದೆ ಸಾಗುವದು. ಆದರೆ ಈ ಎಲ್ಲ ಕತೆಗಳ ನಿಜವಾದ ವೈಲಕ್ಷಣವೆಂದರೆ ಮಾನಸ ವ್ಯಾಪಾರಗಳ ಹೇಳಿಕೆ. 'ಕೌಸಲ್ಯಾನಂದನ', 'ಸುಳ್ಳು ಸ್ಪಷ್ಟ ' 'ವಾಣಿಯಸಮಸ್ಯೆ' 'ಮನುವಿನ ರಾಣಿ' '..ಯಾರು' ಮೊದಲಾದವುಗಳಲ್ಲಿ ಗೌರಮ್ಮನವರ ಸಹಾನುಭವವು ನಮ್ಮನ್ನು ಮೆಚ್ಚಿಸುವದು, ೧೯೩೩ರ ಅಕ್ಟೋಬರದಲ್ಲಿ ಬರೆದ ಅವರ 'ಒಂದು ಪುಟ್ಟ ಚಿತ್ರ 'ಕ್ಕೂ ೧೯೩೯ರ ಫೆಬ್ರವರಿಯಲ್ಲಿ ಬರೆಯಲಾದ 'ಅವಳ ಭಾಗ್ಯ' ಕ್ಕೂ ಆರು ವರ್ಷದ ಅಂತರವಿರುವಂತೆಯೇ ಕಿರಿದರಲ್ಲಿ ಹಿರಿದು ಭಾವ ತುಂಬುವ ಅವರ