ಪುಟ:ಕಂಬನಿ-ಗೌರಮ್ಮ.pdf/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೦

ಲಿನ್ನಿ ಅವನ ಕಣ್ಣು ಬಿಟ್ಟು 'ನಾನೆಂದು ಹೇಗೆ ತಿಳಿಯಿತು ರಾಮು?' ಎಂದಳು.

'ಪಾಪ, ನಿನ್ನ ಕೈಗಳ ಪರಿಚಯವೇ ನನಗೆ ಇಲ್ಲ ಅಲ್ಲವೇ ?' ಎಂದವನು ನಕ್ಕ 'ಇದೇನು ವಸಂತ, ನಾಳೆ ಬರುವುದೆಂದು ಸುಳ್ಳೇಕೆ ಬರೆದೆ?' ಎಂದು ಕೇಳಿದ.

'ನೋಡಿದೊಡನೆಯೇ ಸುರುಮಾಡಿದೆಯಲ್ಲ ಸುಳ್ಳು ಹೇಳುವವಳು ಎಂದು ಬಗಳಕ್ಕೆ? ನಾವೂ ಊಹಿಸಿದುದಕ್ಕಿಂತಲೂ ಒಂದು ದಿನ ಮುಂದಾಗಿ ರಜ ಸಿಕ್ಕಿತು. ಇನ್ನೊಂದು ದಿನ ತಡೆದಿದ್ದರೆ ನಿನ್ನನ್ನು ಈಗ ನೋಡಲಾಗುತ್ತೇ?......'

ಲಿನ್ನಿ ಮಾತಿನ ಸಂಭ್ರಮದಲ್ಲಿ ನನ್ನನ್ನು ಮರೆತಿದ್ದಳು. ಅವರಿಬ್ಬರು ಮಾತನಾಡುವಾಗ ಮಧ್ಯ ಹೋಗುವುದು ನನಗೂ ಸರಿಯಾಗಿ ತೋರಲಿಲ್ಲ. ಅವರ ಕಡೆ ಬೆನ್ನು ಹಾಕಿ ನಿಂತು ಬಹು ದೂರದವರೆಗೂ ಮರಗಳ ಸಂದಿನೊಳಗಿಂದ ಹರಿದುಹೋಗುತ್ತಿದ್ದಂತೆ ಕಾಣಿಸುತ್ತಿದ್ದ ರಸ್ತೆಯನ್ನು ನೋಡತೊಡಗಿದೆ. ಕಣ್ಣುಗಳು ರಸ್ತೆಯನ್ನು ನೋಡುತ್ತಿದ್ದರೂ ಮನಸ್ಸು ಕೇಳುತ್ತಿತ್ತು: 'ಈ ರಾಮು ಯಾರು ! ಲಿನ್ನಿ ನನಗಿವನ ಸುದ್ದಿಯನ್ನು ಇಂದಿನವರೆಗೂ ಹೇಳಲಿಲ್ಲವೇಕೆ?' ಎಂದು ಮುಂತಾಗಿ, ಎಷ್ಟು ಹೊತ್ತು ಹೇಗೆ ನಿಂತಿದ್ದೆನೋ ತಿಳಿಯದು. ನಾಯಿಯೊಂದು ಬೊಗಳುತ್ತಾ ನನ್ನ ಕಡೆ ಓಡಿಬರುವುದನ್ನು ನೋಡಿ ಭಯದಿಂದ 'ಲಿನ್ನೀ' ಎಂದು ಕಿರುಚಿಕೊಂಡೆ. ಲಿನ್ನಿ ಒಬ್ಬಳೇ ಎಂದಿದ್ದ ರಾಮು ನನ್ನ ಕೂಗು ಕೇಳಿ ತಿರುಗಿ ನೋಡಿದ. ಮಾತಿನಲ್ಲಿ ಮುಳುಗಿದ್ದ ಲಿನ್ನಿಗೂ ನಾನು ಇದ್ದೇನೆಂಬ ಸ್ಮೃತಿಯುಂಟಾಯಿತು. 'ಟೆಡ್ಡಿ-ಟೆಡ್ಡಿ' ಎಂದು ನಾಯಿಯನ್ನು ಹತ್ತಿರ ಕರೆದು ತಲೆ ಸವರುತ್ತಾ 'ರಾಮು, ನನ್ನ ಸ್ನೇಹಿತೆ ಸೀತೆ ಇವಳು' ಎಂದು ನನ್ನ ಕಡೆ ತಿರುಗಿ 'ಸೀತಾ, ರಾಮು ನಿನ್ನಂತೆಯೇ 'ಉಮರ್ ಖಯ್ಯಾಮ್ ' ಮತ್ತು 'ಕೌಸಲ್ಯಾನಂದನ' ನ ಕತೆಗಳನ್ನೋದುವ ಹುಚ್ಚರಲ್ಲೊಬ್ಬ' ಎಂದಳು. 'ಕೌಸಲ್ಯಾನಂದನ' ನಕತೆಗಳೂ ಉಮರ್‌ ಖಯ್ಯಾಮ್ನ ಪದ್ಯಗಳೂ ನನ್ನ ಮೆಚ್ಚೆಕೆಯವು. ರಾಮುವೂ ಅವನ್ನು ಮೆಚ್ಚಿದವನೆಂದು ತಿಳಿದು ನನಗೂ