ಪುಟ:ಕಂಬನಿ-ಗೌರಮ್ಮ.pdf/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯೋಚಿಸಿದಷ್ಟು, ನನ್ನ ಲಿನ್ನಿಗೆ ರಾಮು ಖಂಡಿತವಾಗಿಯೂ ಯೋಗ್ಯನಾದ ವರನಂಬುಗು ದೃಢವಾಗುತ್ತಿತ್ತು. ತಂದೆ ತಾಯಿಯರ ಮಾತು ಮೀರಿ ತನ್ನನ್ನು ಪ್ರೀತಿಸುವ ಲಿನ್ನಿಯನ್ನು ರಾಮು ತಿರಸ್ಕರಿಸಿದರೂ ಲಿನ್ನಿ ಸಹಿಸಿಕೊಂಡಿರುವುದನ್ನು ನೋಡುವಾಗ ನನಗೆ ದೃಢವಾಯಿತು: ನಿಜ ಮಾಗಿಯ ' ಪ್ರೇಮ ಕುರುಡೆಂ'ದು.

ಲಿನ್ನಿಗೆ ಈಜುವುದೆಂದರೆ ಬಹಳ ಇಷ್ಟ. ಶಾಲೆಯಿಂದ ವನಭೋಜನ (Picnic) ಕ್ಕೆಂದು ಹೊಳೆಯ ತೀರಕ್ಕೆ ಹೋದಾಗಲೆಲ್ಲ ಅವಳನ್ನು ಹೊಳೆಯಿಂದ ಹೊರಕ್ಕೆ ಬರುವಂತೆ ಮಾಡಬೇಕಾದರೆ ಉಪಾಧ್ಯಾಯಿನಿಯರಿಗೆಲ್ಲ ಸಾಕಾಗಿ ಹೋಗುತ್ತಿತ್ತು. ಮನೆಯಿಂದ ಹೊರಡುವಾಗಿದ್ದ ಬೇಸರ ನನ್ನೆಲ್ಲ ಲಿನ್ನಿ ಹೊಳೆಯನ್ನು ನೋಡುವಾಗ ಮರೆಯುವಳೆಂದಿದ್ದೆ. ನಾನೆಣಿಸಿದಂತೆ ಹೊಳೆಗೆ ತಲುಪಿದ ಮೇಲೂ ಲಿನ್ನಿಗೆ ಯಾವಾಗಲಿನಂತೆ ಉತ್ಸಾಹ ಉಂಟಾಗಲಿಲ್ಲ. ನೀರನ್ನು ನೋಡಿದರೆ ಮೀನಿನಂತೆ ಈಜಾಡುತಿದ್ದವಳು ಐದೇ ನಿಮಿಷಗಳಲ್ಲಿ ಸ್ನಾನವನ್ನು ಪೂರೈಸಿ ದಡಕ್ಕೆ ಬಂದು ಬಿಟ್ಟಳು. ಆ ಕುಂಟನ ಆತ್ಮಾಭಿಮಾನಕ್ಕೆ ಲಿನ್ನಿ ಬಲಿಯಾಗುವುದನ್ನು ನೋಡಿ ನನಗೆ ಸಹಿಸಲಾಗಲಿಲ್ಲ. ಮನೆಗೆ ತಲುಪಿದೊಡನೆಯೆ ಅವನಿಗೆ ಚೆನ್ನಾಗಿ ಅಂದುಬಿಡಬೇಕೆಂದು ಖಂಡಿತಮಾಡಿಕೊಂಡೆ.

ಲಿನ್ನಿಗಾಗಿ, ಅವಳ ಸುಖಕ್ಕಾಗಿ, ಅವಳ ಮೇಲಿನ ನನ್ನ ಪ್ರೇಮಕ್ಕಾಗಿ ನಾನು ಮಾಡಿದ ನಿಶ್ಚಯದ ಪರಿಣಾಮವು ನನಗೆ ಮೊದಲೇ ತಿಳಿದಿದ್ದರೆ ನಾನೆಂದೂ ರಾಮುವನ್ನು ದೂಷಿಸುವ ಪ್ರಯತ್ನಕ್ಕೆ ಕೈಹಾಕುತಿರಲಿಲ್ಲ. ನನಗೇನು ಗೊತ್ತು, ನನ್ನ ಮಾತುಗಳ ಫಲಿತಾಂಶವಾಗಿ ರಾಮು ದೇಶಾಂತರಕ್ಕೆ ಹೊರಟು ಹೋಗುವನೆಂದು ಲಿನ್ನಿಯ ಒಳ್ಳೆಯದಕ್ಕಾಗಿ ಮಾಡಿದ ಯತ್ನದಿಂದ ಅವಳಿಗಿದ್ದ ಕೊಂಚ ಸುಖವೂ ಮಣ್ಣು ಪಾಲಾಗಬಹುದೆಂದು ನನಗೆ ಮೊದಲೇ ಗೊತ್ತಾಗಿದ್ದರೆ, ನಾನೆಂದೂ ರಾಮುವಿಗೆ ನಿಷ್ಠುರದ ನುಡಿಗಳನ್ನಾಡುತ್ತಿರಲಿಲ್ಲ. ಆದರೆ ಮುಂದಾಗುವ

೫೩