ಪುಟ:ಕಂಬನಿ-ಗೌರಮ್ಮ.pdf/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಹ ಗೊತ್ತಿಲ್ಲ. ಸೀತಾ, ನನ್ನ ಈಗಿನ ವ್ಯವಹಾರದಿಂದ ನಿನಗೆ ಬೇಸರವಾಗಲು ಕಾರಣವಿದೆ. ಆದರೂ ನಿನೀಗ ಮೊದಲಿಗಿಂತಲೂ ನನಗೆ ಹತ್ತಿರವಾಗಿರುವ ಸೀತಾ ಸೀತಾ, ಸೀತಾ.....?

ಲಿನ್ನಿ ಬಿಕ್ಕಿ ಬಿಕ್ಕಿ ಅಳತೊಡಗಿದಳು. ಸಮಾಧಾನಪಡಿಸುವುದು ಹೇಗೆಂದು ತಿಳಿಯಲಿಲ್ಲ. ಅವಳನ್ನು ತಬ್ಬಿಕೊಂಡು ಹೆಗಲ ಮೇಲೆ ತಲೆಯಿರಿಸಿ ಮೌನವಾಗಿ ಕಣ್ಣೀರು ಸುರಿಸತೊಡಗಿದೆ.

ಒಂದು ವರ್ಷ ಕಳೆದುಹೋಯಿತು. ನಮ್ಮ ಹೈಸ್ಕೂಲ್ ವಿದ್ಯಾಭ್ಯಾಸವೂ ಪೂರೈಸಿತ್ತು. ನನ್ನ ತಂದೆ ಸ್ತ್ರಿವಿದ್ಯಾಭ್ಯಾಸಕ್ಕೆ ಉತ್ತೇಜನ ಕೊಡುವವರಾದುದರಿಂದ ಕಾಲೇಜು ಶಿಕ್ಷಣಕ್ಕೆ ನನ್ನನ್ನು ಕಳುಹಿಸಬೇಕೆಂದು ನಿಶ್ಚಯಿಸಿದ್ದರು. ಲಿನ್ನಿಯೂ ಓದಲಿಚ್ಛಿಸಿದ್ದರೆ ಅವಳ ತಾಯಿ ತಂದೆಯರು ಅಡ್ಡಿಯಾಗ್ತುತ್ತಿರಲಿಲ್ಲ. ಆದರವಳು ಮನೆಯಲ್ಲೇ ಇರಲು ಬಯಸಿದಳು. ಒಂಬತ್ತು ವರ್ಷಗಳಿಂದ ಜೊತೆಯಾಗಿದ್ದ ನನಗೆ ಒಬ್ಬರನ್ನೊಬ್ಬರು ಅಗಲುವ ಸಮಯದಲ್ಲಿ ಬಹಳ ಕಷ್ಟವಾಯಿತು. ನನಗಂತೂ ಹೊರಡುವಾಗ ಅವಳ ಮುಂದಿನ ಜೀವನವನ್ನು ನೆನೆಸಿ ತಡೆಯಲಾರದಷ್ಟು ಸಂಕಟವಾಯಿತು. ಆದರೂ ರಾಮ ಮನೆಯಿಂದ ಹೊರಡಲು ಕಾರಣ ಹೇಳಲು ಮಾತ್ರ ಧೈರ್ಯವಾಗಲಿಲ್ಲ. ಮದರಾಸಿಗೆ ಹೋದ ಮೇಲೆ ಬರೆದು ಕ್ಷಮೆ ಬೇಡುವೆನೆಂದು ನಿಶ್ಚಯಿಸಿ ಕೊನೆಗೆ ಹೇಳದೆ ಹೊರಟು ಬಿಟ್ಟೆ. ನಾನು ಮದರಾಸಿಗೆ ಹೋದ ವರ್ಷವೇ ಅಣ್ಣನಿಗೂ ಅಲ್ಲಿಗೇ ವರ್ಗವಾದುದರಿಂದ ಹಾಸ್ಟೆಲ್ ವಾಸ ತಪ್ಪಿ ಹೋಯ್ತು. ಮನೆಯಿಂದಲೇ ಕಾಲೇಜಿಗೆ ಹೋಗುತ್ತಿದ್ದೆ. ನಮ್ಮ ಮನೆ ಮದರಾಸಿನಲ್ಲಾದ ಮೇಲೆ ಲಿನ್ನಿಗೆ ನಮ್ಮಲ್ಲಿಗೆ ಬಂದು ಕೆಲವು ದಿನ ಐ.ದು ಹೋಗಬೇಕೆಂದು ಅನೇಕ ಕಾಗದಗಳನ್ನು ಬರೆದೆ. ಏನೇನೋ ನೆವನಗಳನ್ನು ಹೇಳಿ ಬರಲಾಗುವುದಿಲ್ಲವೆಂದು ಬರೆದಳು. ಅವಳೇ ಬಂದಾಗ ಎಲ್ಲವನ್ನೂ ಹೇಳುವೆನು ಎಂದು, ಇನ್ನೂ ರಾಮುವು ದೇಶಾಂತರವಾಸಿಯಾದುದರ ಕಾರಣವನ್ನು ಲಿನ್ನಿಗೆ