ಪುಟ:ಕಥಾಸಂಗ್ರಹ ಸಂಪುಟ ೧.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ_೧ನೆಯ ಭಾಗ 93 ಸಾತ್ವಿಕರಾಗಿ ಕಾಣುತ್ತೀರಿ. ಎಲ್ಲಿಂದ ಬಂದಿರಿ ? ನೀವು ಸಂಚಾರಮಾಡಿದ ಸ್ಥಳಗಳಲ್ಲಿ ವಿಶೇಷ ಸಮಾಚಾರವೇನು ? ಅಪ್ಪಣೆ ಕೊಡಬೇಕೆಂದು ಕೇಳಲು ದೇವದಾಸನುನನಗೆ ಒಂದು ಸಮಾಚಾರವೂ ತಿಳಿಯದು, ಆದರೆ ಜಗತ್ತಿನ ಜನರು ದೇವರನ್ನು ನಂಬದೆ ಸುಖವು ಒ೦ದಾಗ ಸಂತೋಷದಿಂದ ಉಬ್ಬಿ ತಮಗೆ ಯಾರೂ ಸರಿಯಿಲ್ಲ ವೆಂದು ಗರ್ವದಿಂದ ನಲಿಯುತ್ತಾ ದುಃಖ ಬಂದಾಗ ಕಂಗೆಟ್ಟು ಬೆಂದು ಬೆಂಡಾಗಿ ನರಳುತ್ತಾ ಇರುವುದೊಂದು ವಿಚಾರ ಮಾತ್ರ ನನಗೆ ಚೆನ್ನಾಗಿ ತಿಳಿಯುವುದು ಎಂದು ಹೇಳಿದನು. ಆಗ ರಾಜಮಂತ್ರಿಗಳೀರ್ವರೂ ಆ ದಂಪತಿಗಳನ್ನು ಕುರಿತು-ನೀವು ಮಹಾ ಪುರುಷರು, ದೇವಭಕ್ತರು ನೀವು ನಮ್ಮ ಮೇಲೆ ದಯವಿಟ್ಟು ನಮ್ಮಲ್ಲಿ ಇದ್ದುಕೊಂಡು ನಮಗೆ ಶ್ರೇಯಸ್ಸುಂಟಾಗುವಂತೆ ಮಾಡಬೇಕೆಂದು ಬಹಳ ನಿರ್ಬ೦ ಧಪಡಿಸಿದುದರಿಂದ ಅವರೂ ಅವರ ಸಂಗಡಲೇ ಹೊರಟು ಎಂದು ಸಿಂಹಳದೀಪವನ್ನು ಸೇರಿ ಸಿಂಹವಿಕ್ರಮನಿಂದ ಮಾಡಿಸಿ ಕೊಡಲ್ಪಟ್ಟ ಬಿಡಾರದಲ್ಲಿ ರಾಜಮಂತ್ರಿಗಳೊಡನೆ ಇದ್ದು ಕೊಂಡು ಇದ್ದರು. ಹೀಗಿರುವಲ್ಲಿ ಸಮಸ್ತ ದೇಶದ ಅರಸುಗಳೂ ಬಂದುದನ್ನು ತಿಳಿದು ಸಿಂಹವಿ ಕ್ರಮನು ಸ್ವಯಂವರಮಂಟಪವನ್ನು ರಚಿಸಿ ಅವರನ್ನೆಲ್ಲಾ ಉಚಿತಾಸನದಲ್ಲಿ ಕುಳ್ಳಿ ರಿಸಿ ತನ್ನ ಪುತ್ರಿಯಾದ ಆನಂದವಲ್ಲಿ ಯನ್ನು ಕರೆದು-ಅಮ್ಮಣ್ಣೀ ! ಸಕಲ ದೇಶದ ದೊರೆಗಳೂ ಬಂದು ಸ್ವಯಂವರಮಂಟಪದಲ್ಲಿ ಕುಳಿತಿದ್ದಾರೆ. ನೀನು ಬಂದು ನೋಡಿ ನಿನ್ನ ಮನಸ್ಸು ಬಂದವನಿಗೆ ಮಾಲಿಕೆಯನ್ನು ಹಾಕು ಎಂದು ಹೇಳಲು ಆಕೆಯು-ಒಳ್ಳೆಯದು ಎಂದು ಅಲಂಕಾರ ಮಾಡಿಕೊಳ್ಳುತ್ತಾ ಇದ್ದಳು. ಅಷ್ಟರಲ್ಲಿ ಆಡು ಗೂಳಜ್ಜಿಯ ಮನೆಯಲ್ಲಿರುವ ಚಂಡಪರಾಕ್ರಮಿಯ ಬುದ್ಧಭಿಮಾನಿಯಾದ ದೇವತೆಗೂ “ಕರ್ಮಾಭಿಮಾನಿಯಾದ ದೇವತೆಗೂ-ನಾನು ದೊಡ್ಡವಳು ತಾನು ದೊಡ್ಡವಳು ಎಂಬ ವಿಷಯದಲ್ಲಿ ಜಗಳ ಬಂದು ಅದರ ನಿಶ್ಚಯಕ್ಕಾಗಿ ದೇವರ ಬಳಿಗೆ ಹೋಗಿ ಕೇಳಬೇಕೆಂದು ಹೊರಟು ಬರುವ ಮಾರ್ಗದಲ್ಲಿ ಹರಿದತ್ತನನ್ನು ಕಂಡು-ನೀನು ಯಾರು ? ಮಹಾ ದೇವರ ಭಕ್ತನಾಗಿ ಕಾಣುತ್ತೀಯೆ ? ನಾವು ಚಂಡಪರಾಕ್ರಮಿ ಎಂಬ ರಾಜಕುಮಾರನ ಬುದ್ದಿ ಕರ್ಮಾಭಿಮಾನ ದೇವತೆಗಳು, ನವಿಾರ್ವರಲ್ಲಿ ಯಾರು ದೊಡ್ಡವರೆಂಬುವುದು ನಿನಗೆ ತಿಳಿದರೆ ಹೇಳಬಹುದೆಂದು ಕೇಳಿದರು. ಅದಕ್ಕೆ--ನಿಮಗೆ ಆಶ್ರಯಿಾಭೂತನಾದ ಚಂಡಪರಾಕ್ರಮಿಯನ್ನು ನನ್ನೆ ಡೆಗೆ ಕರತಂದರೆ ನಿಮ್ಮ ಜಗಳವನ್ನು ತೀರಿಸುವೆನೆಂದು ಹೇಳಿದನು. ಆಗ ಅಭಿಮಾನ ದೇವತೆಗಳಿಬ್ಬರೂ ಅಡಗೂಳಜ್ಜಿಯ ಮನೆಗೆ ಹೋಗಿ ಚಂಡಪರಾಕ್ರಮಿಯನ್ನು ಹೊತ್ತುಕೊಂಡು ಬಂದು ಹರಿದತ್ತನ ಮುಂದೆ ಇಳಿಸಿದರು, ಆಗ ಅವರೀರ್ವರೂ ಪರಸ್ಪರಾವಲೋಕನದಿಂದ ಸಂತೋಷಪಟ್ಟು ಕುಳಿತು ಕೊಂಡಿರುವಲ್ಲಿ ಹರಿದತ್ತನುನಮ್ಮ ಚಂಡಪರಾಕ್ರಮಿಗೆ ಕಡಿದಿರುವ ಕಾಲುಗಳನ್ನು ಉಂಟುಮಾಡಿ ಸಮುದ್ರದಲ್ಲಿ ಮುಳುಗಿಹೋದ ನಮ್ಮ ಬತುರಂಗಬಲದಲ್ಲಿ ಒಂದೂ ಉಳಿಯದಂತೆ ಜೀವಿಸಿ ಎದ್ದು ಸಿಂಹವಿಕ್ರಮನ ಪಟ್ಟಣಕ್ಕೆ ಪ್ರವೇಶಿಸಿ ಆತನನ್ನು ಕೈಸೆರೆ ಹಿಡಿದು ನಮ್ಮ ಬಳಿಗೆ ತಂದು