ಪುಟ:ಕಥಾಸಂಗ್ರಹ ಸಂಪುಟ ೨.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

90 | - ಕಥಾಸಂಗ್ರಹ-೪ ನೆಯ ಭಾಗ ಹಾಕುವುದು. ಈ ಮಾತಿನಲ್ಲಿ ಏನೂ ಸಂದೇಹವಿಲ್ಲ. ಹೀಗೆ ನಿಶ್ಚಿತವಾದ ಮನಸ್ಸುಳ್ಳ ನನ್ನೆದುರಿಗೆ ಇಂಥ ಕೆಟ್ಟ ಮಾತುಗಳನ್ನು ಬೊಗಳುತ್ತಿರುವ ನಿನ್ನನ್ನು ನನ್ನ ಪಾತಿವ್ರ ತ್ಯಾಗ್ನಿ ಜ್ವಾಲೆಯಿಂದ ಈಗಲೇ ಸುಟ್ಟು ಬೂದಿಮಾಡಿಬಿಡಬಲ್ಲೆನು. ಆದರೆ ನನ್ನ ಪತಿಯು ಬಂದು ನಿನ್ನನ್ನು ಕೊಂದುಹಾಕಲೆಂಬದಾಗಿ ಸುಮ್ಮನಿದ್ದೇನೆ ಎಂದು ಹೇಳಿ ರಾವ ಣನಿಗೆ ವಿಮುಖಳಾಗಿ ಕೂತು ಕೊಳ್ಳಲು ಆಗ ರಾವಣನು ಕೋಪಾಕ್ರಾಂತನಾಗಿ ಇಂಥಾ ಬಾಯಬಡಿಕ ಹೆಂಗಸನ್ನು ಈಗಲೇ ಸಂಹರಿಸಿಬಿಡುತ್ತೇನೆಂದು ಕತ್ತಿಯನ್ನು ಎತ್ತಲು ಮಂಡೋದರಿಯು-ಹಾ ಹಾ ರಾಕ್ಷಸಚಕ್ರವರ್ತಿಯೇ ! ನಿಲ್ಲು ನಿಲ್ಲು. ನಿನ್ನ ಅವಿಚಾರಕ್ಕೆ ಏನು ಹೇಳಬೇಕು ? ಹೆಂಗೊಲೆಯನ್ನು ಮಾಡುವವರುಂಟೇ ? ಅಯ್ಯೋ ಅನ್ಯಾಯವಾಗಿ ಮಹಾಪಾಪಕ್ಕೆ ಒಳಗಾಗುತ್ತಿರುವೆಯಲ್ಲಾ ? ಮರುಳು ತನವನ್ನು ಬಿಡು. ಸೌಂದರ್ಯವತಿಯಾದ ನನ್ನ ಮುಂದೆ ಈ ಸೀತೆಯೇ ಎಂದು ಹೇಳಿ ಸಮಾಧಾನಪಡಿಸಿ ಅವನನ್ನು ಎಳೆದು ಕರೆದು ಕೊಂಡು ಮನೆಗೆ ಹೋದಳು. ಅನಂತರದಲ್ಲಿ ರಾವಣನು ದುಮ್ಮಾನದಿಂದ ಕೂಡಿ ಹೊರಟುಹೋಗಲು ಸೀತಾ ದೇವಿಯು ತನ್ನ ಪತಿಯನ್ನು ನೆನಸಿಕೊಂಡು ದುಃಖಿಸುತ್ತ-ಎಲೈ ಭೂದೇವಿಯೇ ! ಬಾಯ್ದೆರೆದು ನನ್ನನ್ನು ಒಳಗೊಳ್ಳಲೊಲ್ಲೆಯಾ ? ಈ ಖಳನ ಬಾಧೆಯನ್ನು ತಾಳಿ ಕೊಂಡು ಹೇಗೆ ಜೀವಿಸಲಿ ಎಂದು ಬಾಯಿಬಿಟ್ಟು ರೋದಿಸುತ್ತಾ ರಾಮನನ್ನು ಸಂಭೋ ಧಿಸಿ-ಎಲೈ ಪ್ರಾಣನಾಥನೇ ! ಜಗತ್ಪತಿಯೇ ! ದೀನದಯಾಳುವೇ ! ನಿನ್ನನ್ನು ನಂಬಿದ ನನ್ನನ್ನು ಬಿಟ್ಟು ಎಲ್ಲಿರುವೆ ? ಈ ನನ್ನ ಮಹಾವ್ಯಥೆಯನ್ನು ಯಾರೊಡನೆ ಹೇಳಲಿ ? ಎಲ್ಲಿಗೆ ಹೋಗಲಿ? ಪೂರ್ವದಲ್ಲಿ ಯಾರ ಪತ್ನಿ ಯರನ್ನು ನೋಯಿಸಿದ್ದೆನೋ ? ಯಾವ ದೇವರ ಭಕ್ತಿಯಲ್ಲಿ ಕುಂದು ಒಡೆದಿದ್ದೆನೋ ? ಯಾವ ಗುರು ಜನರನ್ನು ನೋಯಿಸಿ ದೈನೋ ? ಯಾರ ಪತಿಗಳನ್ನು ಅಗಲಿಸಿದ್ದೆನೋ ? ಆ ದುಷ್ಕರ್ಮಫಲವು ಈಗ ನನಗೆ ಅನುಭವಕ್ಕೆ ಬಂದಿತು. ಹಾ ಮರಣವು ಬಾರದಲ್ಲಾ! ರಾಮನು ಏನಾಗಿರುವನೋ ? ಆ ನರನಾಥನ ಸುದ್ದಿಯನ್ನು ತಿಳಿಯಪಡಿಸುವವರಿಲ್ಲವಲ್ಲಾ ! ಹಾ ರಾಮನೇ ! ಎಂದು ಹಮ್ಮೆ ಸಿ ಬಿದ್ದಳು. ಆ ಮೇಲೆ ಸೀತೆಯು ಮರ್ಧೆ ತಿಳಿದೆದ್ದು ಮೆಲ್ಲನೆ ಬಂದು ಪ್ರಾಣಗಳನ್ನಾ ದರೂ ತೊರೆದುಕೊಳ್ಳಬೇಕೆಂದು ಕೈಗೆ ಕತ್ತಿಯನ್ನು ತೆಗೆದು ಕೊಳ್ಳಲು ಆಗ ತ್ರಿಜ ಟೆಯು ಧಿಗ್ಗನೆದ್ದು ಬಂದು--ಏನಮ್ಮಾ ಸೀತೆಯೇ ! ಇದೇನು ? ಇಂಥ ಹುಚ್ಚ ಕೆಲಸವನ್ನು ಮಾಡುತ್ತಿರುವಿಯಲ್ಲಾ ? ಎಂದು ಹೇಳಿ ಅವಳ ಹಸ್ತದಲ್ಲಿದ್ದ ಖಡ್ಗವನ್ನು ಕಿತ್ತು ಕೊಂಡು-ಎಲೆ ಜಾನಕಿಯೇ ! ನೀನು ಇನ್ನು ಮೇಲೆ ಸ್ವಲ್ಪವಾದರೂ ಯೋಚಿಸಬೇಡ. ಶ್ರೀರಾಮನು ನಿನ್ನ ಬಳಿಗೆ ಶೀಘ್ರದಲ್ಲಿಯೇ ಬರುವನು ಕೇಳು. ನಾನು ಸ್ವಪ್ನದಲ್ಲಿ ಶ್ರೀರಾಮನು ಲಕ್ಷ್ಮಣಸಮೇತನಾಗಿ ಇಲ್ಲಿಗೆ ಬಂದು ರಾವಣಕುಂಭಕರ್ಣಾದ್ಯರನ್ನು ಕೊಂದು ನಿನ್ನನ್ನು ಕರೆದು ಕೊಂಡು ಅಯೋಧ್ಯೆಗೆ ಹೋಗಿ ಪಟ್ಟಾಭಿಷಿಕ್ತನಾದುದನ್ನು ಕಂಡೆನು. ಅದು ಕಾರಣ ನೀನು ಯೋಚನೆಯನ್ನು ಬಿಟ್ಟು ಸಂತೋಷಚಿತ್ತಳಾಗಿರು ಎಂದು ಹೇಳಲು ಸೀತೆಯು ರಾಮನನ್ನು ನೆನಸಿಕೊಂಡು ಹಲುಬುತ್ಯ ಇರಲು ಆಗ M