ಪುಟ:ಕಥಾಸಂಗ್ರಹ ಸಂಪುಟ ೨.djvu/೧೦೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


92 ಕಥಾಸಂಗ್ರಹ-೪ ನೆಯ ಭಾಗ ಮತ್ತು ನೀನು ಮಾಯಾಮೃಗವನ್ನು ಅಪೇಕ್ಷಿಸಿದಿಯಂತೆ. ಇದೆಲ್ಲಾ ನಿಶ್ಚಯವೋ ಸುಳ್ಳೋ ? ಎಂದು ಹೇಳಲು ಸೀತೆಯು ಫಳಫಳನೆ ಕಣ್ಣೀರನ್ನು ಸುರಿಸುತ್ತಹಾ 'ರಾಮಾ! ಹೃದಯರಾಮಾ ! ಎಂದು ಬಿದ್ದು ಹೊರಳಿದವಳಾಗಿ--ಎಲೈ ಹನುಮಂತನೇ ! ನೀನು ಇದುವರೆಗೂ ಹೇಳಿದ ಗುರುತುಗಳೆಲ್ಲಾ ಯಥಾರ್ಥವಾದುವುಗಳೇ, ನನಗೆ ದುಃಖ ಬರುತ್ತದೆ. ಇನ್ನು ಹೇಳಬೇಡ ಎನಲು ಆಂಜನೇಯನು ಆಕೆಯ ಕೈಕಾಲುಮೊಗ ಗಳಲ್ಲಿರುವ ಗುರುತುಗಳನ್ನು ಹೇಳಿ ಅನಂತರ ರಾಮನಾಮಮುದ್ರಿತವಾದ ಉಂಗುರ ವನ್ನು ಕೊಟ್ಟು ಕೈಮುಗಿದು ನಿಂತು ಕೊಳ್ಳಲು ಆಗ ಸೀತೆಯು ಸಂಶಯವನ್ನು ಬಿಟ್ಟು ಆ ಮುದ್ರೆಯುಂಗರವನ್ನು ರಾಮನೆಂದೇ ಭಾವಿಸಿ ಸಂತೋಷಸಮುದ್ರದಲ್ಲಿ ಮುಣುಗಿ -ಎಲೈ ತಂದೆಯೇ ! ಹನುಮಂತನೇ ! ನೀನು ಹೇಳಿದ ಮಾತುಗಳೆಲ್ಲಾ ಸತ್ಯವಾದವು ಗಳೇ, ಶ್ರೀರಾಮಲಕ್ಷ್ಮಣರು ಕುಶಲದಲ್ಲಿದ್ದಾರೆಯೇ ? ರಾಘವನು ನನ್ನ ವಿಷಯದಲ್ಲಿ ಬೇಸರಿಕೆಯುಳ್ಳವನಾಗಿದ್ದಾನೆಯೇ ? ಹೇಳಯಾ ಎಂದು ಕೇಳಲು ಆಂಜನೇಯನು ಎಲೈ ತಾಯಿಯೇ ! ರಾಮನೂ ಲಕ್ಷ್ಮಣನೂ ಕುಶಲಿಗಳಾಗಿದ್ದಾರೆ. ರಘುವೀರನು ಯಾವಾಗಲೂ ನಿನ್ನ ಚಿಂತೆಯಲ್ಲೇ ಇದ್ದಾನೆ. ನೀನು ಚಿಂತೆಯನ್ನು ಬಿಡು. ನಿನ್ನ ರಸ ನಾದ ಶ್ರೀರಾಮನನ್ನು ಇನ್ನೊಂದು ತಿಂಗಳಲ್ಲಿಯೇ ಇಲ್ಲಿಗೆ ಕರೆದುಕೊಂಡು ಬಂದು ಪಾಪಿಷ ನಾದ ಈ ದಶಕಂಧರನನ್ನು ಕೊಲ್ಲಿಸಿ ನಿನ್ನ ನ್ನು ಬಿಡಿಸುವೆನು. ಈ ಭಾಗದಲ್ಲಿ ಸಂಶಯವನ್ನು ಬಿಡು. ಧೈರ್ಯವುಳ್ಳವಳಾಗಿರು. ಶ್ರೀರಾಮನಿಗೆ ನಿನ್ನ ಕುರುಹನ್ನು ಕೊಡು ಎಂದು ಹೇಳಲು ಜಾನಕಿಯು ಸಂತುಷ್ಟಾ೦ತರ೦ಗಳಾಗಿ ತನ್ನ ಮಲಿನಾ೦ಬ ರಾಂಚಲದಲ್ಲಿ ಕಟ್ಟಿ ಕೊಂಡಿದ್ದ ನಿರುಪಮಚಡಾರತ್ನ ವನ್ನು ಬಿಚ್ಚಿ ಎಲೈ ಗುಣನಿ ಧಿಯೇ ! ನೀನು ಇದನ್ನು ತೆಗೆದು ಕೊಂಡು ಹೋಗಿ ದುಷ್ಟಶಿಕ್ಷಾ ಧ್ಯಕ್ಷನಾದ ರಾಮ ನಿಗೆ ಕೊಡು. ಮಗನೇ ! ರಾಕ್ಷಸರು ಮಹಾ ಮಾಯಾವಿಗಳು ಮತ್ತು ಮನುಷ್ಯ ಭಕ ಕರು, ನೀನು ಇನ್ನಿರಬೇಡ. ಬೇಗ ಹೋಗೆಂದು ಹೇಳಿ ಅವನನ್ನು ಅಗಲಲಾರದೆ ಬಾರಿಬಾರಿಗೂ ಉಪಚರಿಸಿ ಅಪ್ಪಣೆಯನ್ನು ಕೊಟ್ಟಳು. ಆಗ ಆಂಜನೇಯನು ಈ ದಶ ಶಿರಸ್ಕನಾದ ರಾಕ್ಷಸನಿಗೆ ತನ್ನ ಪರಾಕ್ರಮವನ್ನು ತೋರ್ಪಡಿಸದಿದ್ದರೆ ತನ್ನ ವೀರತ್ವಕ್ಕೆ ಕುಂದು ಬರುತ್ತದೆಂದು ಯೋಚಿಸಿ-ತಾಯಿಯೇ ! ನಾನು ಹೊರಟಂದಿನಿಂದ ಇಂದಿನ ವರೆಗೂ ಅಶನವಿಲ್ಲದವನಾಗಿದ್ದೇನೆ. ಅದು ಕಾರಣ ಈ ವನದಲ್ಲಿ ಹಣ್ಣುಗಳನ್ನು ತಿನ್ನ ಬೇಕೆಂದು ಆಶಿಸುತ್ತೇನೆ. ನನಗೆ ಅಪ್ಪಣೆಯನ್ನು ಕೊಡೆಂದು ಕೇಳಲು ಸೀತೆಯು ಎಲೈ ಬಾಲಕನೇ ! ಬಹುಜನರಾಕ್ಷಸರು ಈ ವನವನ್ನು ಕಾದು ಕೊಂಡಿದ್ದಾರೆ. ಅವರು ಅರಿಯದಂತೆ ಭಕ್ಷಿಸಿಕೊಳ್ಳುವವನಾಗೆಂದು ಹೇಳಿ ಕಳುಹಿಸಿದಳು. ಆಗ ಮಹಾ ಪರಾ ಕ್ರಮಿಯಾದ ಹನುಮಂತನು ಪ್ರಳಯ ಕಾಲದ ಕುಲಿಶಕೋಟಿಯ ರಭಸದಂತೆಯೂ ಕಾಲಭೈರವನ ಆಟೋಪದಂತೆಯ ಸಕಲ ರಾಕ್ಷಸಜನರ ಹೃದಯಗಳು ತಲ್ಲಣಿಸು ವಂತೆಯ ಆರ್ಭಟಿಸಿ ಕಂಡ ಕಂಡ ಮರಗಳನ್ನು ಕಿತ್ತುರುಳಿಸಿ ಪಾದಘಾತದಿಂದ ವನ ಭೂಮಿಯನ್ನೆಲ್ಲಾ ವ್ಯತ್ಯಸ್ತವುಳ್ಳುದನ್ನಾಗಿ ಮಾಡಿ ಸರಸ್ಸುಗಳ ಪಾವಟಿಗೆಗಳನ್ನೆಲ್ಲಾ ಕಿತ್ತಿಟ್ಟು ಚಿತ್ರಮಂಟಪಗಳಿಗೆ ಹಾರಿ ತೆನೆಗಳನ್ನೂ ಕಲಶಗಳನ್ನೂ ಕಂಬಗಳನ್ನೂ