ಪುಟ:ಕಥಾಸಂಗ್ರಹ ಸಂಪುಟ ೨.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

D. ಆಂಜನೆಯನು ಸೀತೆಯನ್ನು ಕಂಡು ಲಂಕಾಪಟ್ಟಣವನ್ನು ಸುಟ್ಟು ದು 93 ಬೋದಿಗೆಗಳನ್ನೂ ವೇದಿಕೆಗಳನ್ನೂ ಮುರಿದುಹಾಕುತ್ತಿದ್ದನು. ಆಗ ಆ ವನವು ಮಂಗಿ ಲ್ಲದ ಮೊಗದಂತೆಯ ಚಂದ್ರನಕ್ಷತ್ರಗಳಿಲ್ಲದ ಇರುಳಂತೆಯ ಸೂರ್ಯನಿಲ್ಲದ ಹಗ ಲಂತೆಯೂ ಅಮಂಗಲಕರವಾಗಿಯ ಅಸಹ್ಯಕರವಾಗಿಯೂ ಇದ್ದಿತು. ಆಗ ಆ ವನ ದಲ್ಲಿದ್ದ ಪಕ್ಷಿ ಗಳೂ ಮೃಗಗಳೂ ಹನುಮಂತನ ರಭಸಕ್ಕೆ ಬೆದರಿ ಕೂಗಿಕೊಳ್ಳುತ್ತಾ ಓಡಿ ಹೋದವು. ಆ ವನಪಾಲಕರಾದ ರಾಕ್ಷಸರು ಈ ಕಳವಳವನ್ನು ಕೇಳಿ ಎಚ್ಚೆತ್ತು ದಿಗೂ ಮೆಯನ್ನು ಹೊಂದಿ ಆ ಮೇಲೆ ಖಡ್ಗಾದ್ಯಾಯುಧಗಳನ್ನು ತೆಗೆದುಕೊಂಡು ಈ ಕೋಡಗವನ್ನು ಹಿಡಿ ಹಿಡಿ ಹೊಡಿ ಹೊಡಿ ಕಡಿ ಕಡಿ ತಿವಿ ತಿವಿ ಕವಿ ಕವಿ ಎಂದು ಆರ್ಭಟಿಸಿಕೊಂಡು ಬರುತ್ತಿರಲು ಆಂಜನೇಯನು ದೊಡ್ಡ ಮರಗಳನ್ನು ಕಿತ್ತೆತ್ತಿ ಬಡಿದು ಆ ರಾಕ್ಷಸರನ್ನೆಲ್ಲಾ ಕೊಂದು ನಿಮೇಷಮಾತ್ರದಲ್ಲಿ ಹೆಣಗಳನ್ನು ಬಣಬೆಗಳಂತೆ ಒಟ್ಟಿದನು. ಆ ಮೇಲೆ ಸುಮಾಲಿಯೆಂಬ ರಾಕ್ಷಸನನ್ನು ಕರೆದು ಎಲೋ ನೀನು ಹೆಣ್ಣಳ್ಳನಾದ ರಾಕ್ಷಸನ ಬಳಿಗೆ ಓಡಿ ಹೋಗಿ ರಾಮದೂತನು ಬಂದಿರುವನೆಂದು ತಿಳಿಸಿ ವೀರರಿದ್ದರೆ ಬರಹೇಳು, ಇದು ಉಪಚಾರದ ಮಾತಲ್ಲ. ಬಂದವರಿಗೆ ನಿಜವಾ ಗಿಯ ಕಾಲನ ಮನೆಯನ್ನು ತೋರಿಸುವೆನು ಎಂದು ಹೇಳಲು ಅವನು ಅಲ್ಲಿಂದ ಓಡಿಬಂದು ಒದ್ದೋಲಗದಲ್ಲಿ ಕುಳಿತಿರುವ ರಾವಣನಿಗೆ ಕೈ ಮುಗಿದು ಬುದ್ದಿ ! ಮೃತ್ಯುವೇ ಕಪಿರೂಪನ್ನು ಧರಿಸಿ ಬಂದು ರಾಕ್ಷಸರನ್ನೆಲ್ಲಾ ಕೊಂದುಹಾಕುತ್ತಿದೆ. ಆದರೆ ರೊಡನೆ ಕಾದುವುದಕ್ಕೆ ನಮ್ಮಿಂದಾಗುವುದಿಲ್ಲ. ಅದರ ಬಾಧೆಯನ್ನು ತಪ್ಪಿಸಿ ನಮ್ಮನ್ನು ಕಾಪಾಡು ಎಂದು ಬಿನ್ನ ವಿಸಲು ಎಲವೋ ! ಹರಿಹರಬ್ರಹ್ಮಾದಿಗಳು ನನಗೆ ಪಾಡಲ್ಲ. ಎಲೈ ಶ್ಯಾನವೇ ! ಬಗುಳ ಬೇಡ. ಕಪಿ ಬಂದು ವನವನ್ನು ಮುರಿದು ರಕ್ಕಸರನ್ನು ಕೊಂದಿ ತಂತೆ ! ಇಂಥ ಕಪಿಯನ್ನು ಹಿಡಿದು ದಂಡಿಸಲಾರದೆ ನನ್ನ ಹತ್ತಿರ ಬಂದು ಲಜ್ಜೆಯ ಲ್ಲದೆ ಬೊಗಳುತ್ತಿರುವಿ. ನಿನ್ನಂಥ ಬಡನಾಯಿಗಳನ್ನು ಸೀಳಿಸಿಬಿಡಬೇಕು ಎಂದು ದಶ ಕಂಠನು ಹೇಳಿ ಮುಗಿಸುವಷ್ಟರಲ್ಲಿ ಆಂಜನೇಯನಿಂದ ಹತಶೇಷರಾದ ರಾಕ್ಷಸರು ಓಡಿ ಬಂದು-ಸ್ವಾಮಿಾ ! ನನ್ನೊಡೆಯನಾದ ನೀನು ಆಶ್ರಿತರಾದ ನಮ್ಮನ್ನು ಅನ್ಯಾಯ ವಾಗಿ ಕಪಿಯಿಂದ ಕೊಲ್ಲಿಸಬೇಡ. ನೀನು ರಕ್ಷಿಸಲಾರದಿದ್ದರೆ ಈಗಲೇ ನಿನ್ನ ಕತ್ತಿಯಿಂದ ನಮ್ಮೆಲ್ಲರ ತಲೆಗಳನ್ನೂ ಕಡಿದು ಹಾಕು ಎಂದು ಮೊರೆಯಿಡಲು ಆಗ ಅಕ ಕುಮಾರ ನೆದ್ದು ಕಪಿಯನ್ನು ಕೊಂದುಹಾಕುವೆನೆಂದು ತನ್ನ ತಂದೆಯಿಂದ ವೀಳೆಯವನ್ನು ತೆಗೆದುಕೊಂಡು ವಿವಿಧಾಯುಧಧಾರಿಗಳಾದ ಏಳನೂರು ಜನ ಸಹೋದರರನು ಕರೆದುಕೊಂಡು ಖಡ್ಗ ವನ್ನು ಝಳಪಿಸುತ್ತ ಸುಳಿಯುತ್ತಿರುವ ಸಿಡಿಲಮರಿಯಂತೆ ಹೊರಟು ಬರುತ್ತಿರಲು ವೀರನಾದ ಆಂಜನೇಯನು ಗರ್ವಿತರಾಗಿಯ ಭಯಂಕರ ರಾಗಿಯ ಇರುವ ರಾವಣಪುತ್ರರನ್ನು ನೋಡಿ ಹಿಗ್ಗಿ ದವನಾಗಿ ಆರ್ಭಟಿಸಿ ವಿಕಾರ ರೂಪಿಗಳಾದ ಆ ರಾಕ್ಷಸರನ್ನು ನೋಡಿ ಹಲ್ಕಿರಿದು ಅಣಕಿಸುತ್ತಿರಲು ಆಗ ರಾಕ್ಷ ಸರೆಲ್ಲರೂ ನೋಡಿ ನಗುತ್ತ-ಬಾಯಿಯ ಮೇಲೆ ಹೊಡೆಯಿರಿ ಎಂದು ಸಾಣೆಹಿಡಿದ ಖಡ್ಡಗಳಿಂದಲೂ ಶೂಲಗಳಿಂದಲೂ ತಿವಿಯುವುದಕ್ಕೆ ಬರಲು ಆಗ ಹನುಮಂತನು ತಾನೇರಿಕೊಂಡಿದ್ದ ತೋರಣಸ್ತ೦ಭದಿಂದಿಳಿದು ಹೆದರಿ ಓಡುವವನಂತೆ ಸ್ವಲ್ಪ ದೂರ