ಪುಟ:ಕಥಾಸಂಗ್ರಹ ಸಂಪುಟ ೨.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

96 | ಕಥಾಸಂಗ್ರಹ-೪ ನೆಯ ಭಾಗ ಮಾಡಿಕೊಂಡನೋ ಅಂಥ ವಾಲಿಯನ್ನು ಒಂದೇ ಬಾಣದಿಂದ ಕೊಂದವನಾಗಿಯೂ ಇಂದ್ರ ಸಮಾನನಾದ ದಶರಥರಾಜನ ಪುತ್ರನಾಗಿಯೂ ತ್ರಿಲೋಕೈಕವೀರನಾಗಿಯ ರಾಕ್ಷಸಕುಲಮಲೋತ್ಪಾಟನತತ್ಪರನಾಗಿಯೂ ಧರ್ಮಸಂಸ್ಥಾಪನಾಧುರಂಧರನಾ ಗಿಯ ಇರುವೆ ಶ್ರೀರಾಮನ ದೂತನು. ಸುಗ್ರೀವನೆಂಬ ಕಪಿಮಹಾರಾಜನ ಮಂತ್ರಿಯು, ನನ್ನ ಹೆಸರು ಹನುಮಂತನೆಂದು ಪ್ರಸಿದ್ಧ ವಾಗಿರುವುದು. ಈ ಮೂರ್ಖ ನಾದ ರಾವಣನು ತ್ರಿಭುವನ ವೀರವಂದಿತಪದಾಂಬುಜನಾದ ಶ್ರೀರಾಮನ ಪಟ್ಟಮಹಿ ಪಿಯಾಗಿಯ ಲೋಕಮಾತೃವಾಗಿಯೂ ಇರುವ ಸೀತೆಯನ್ನು ಅಪಹರಿಸಿಕೊಂಡು ಬಂದು ತನ್ನ ಪಟ್ಟಣದಲ್ಲಿಟ್ಟು ಕೊಂಡುದರಿಂದ ರಾಮನ ಅಪ್ಪಣೆಯ ಪ್ರಕಾರ ಆಕೆ ಯನ್ನು ಹುಡುಕುವುದಕ್ಕಾಗಿ ಎಲ್ಲಾ ದಿಕ್ಕುಗಳಿಗೂ ಹೋದ ಕಪಿನಾಯಕರಂತೆ ನಾನು ದಕ್ಷಿಣದಿಕ್ಕಿನಲ್ಲಿರುವ ಈ ಪಟ್ಟಣಕ್ಕೆ ಬಂದು ಸೀತೆಯನ್ನು ಕಂಡು ಮಾತನಾಡಿಸಿದೆನು. ನಿನ್ನ ಯಜಮಾನನಾದ ಈ ರಾವಣನನ್ನು ಕಾಣಬೇಕೆಂಬ ಉದ್ದೇಶದಿಂದ ಈ ಅಶೋ ಕವನವನ್ನು ಮುರಿದೆನು. ಬಹುಜನ ರಾಕ್ಷಸರು ನನ್ನನ್ನು ಕೊಲ್ಲುವುದಕ್ಕೆ ಬಂದರು. ಅದು ಕಾರಣ ಅವರನ್ನೆಲ್ಲಾ ಸಂಹರಿಸಿ ಯಮನಗರಕ್ಕಟ್ಟಿದೆನು. ಬ್ರಹ್ಮಾಸ್ತ್ರದಿಂದಲೂ ಸಾಯದಂತೆ ನನಗೆ ಬ್ರಹ್ಮ ದೇವನ ವರವುಂಟು. ಬೇಕೆಂದದರಲ್ಲಿ ಕಟ್ಟುಬಿದ್ದು ಈ ರಾವ ಣನನ್ನು ಕಂಡು ಇವನಿಗೊಂದು ಬುದ್ದಿ ವಾದವನ್ನು ಹೇಳಬೇಕೆಂದು ಈ ಚಾವಡಿಗೆ ಬಂದಿರುವೆನು. ಅದೇನೆಂದರೆ, ಈ ರಾವಣನಿಗೆ ಇನ್ನೂ ಬದುಕಬೇಕೆಂಬ ಆಶೆಯಿದ್ದರೆ ಈಗಲಾದರೂ ಸೀತೆಯನ್ನು ಕರೆದು ಕೊಂಡು ಹೋಗಿ ರಾಮನಿಗೊಪ್ಪಿಸಿ ಆತನಿಗೆ ಶರಣಾ ಗತನಾದರೆ ದಯಾಳುವಾದ ಶ್ರೀರಾಮನು ಇವನನ್ನು ಕಾಪಾಡುವನು. ಅದು ಇವನ ಮನಸ್ಸಿಗೆ ಸರಿಬಾರದಿದ್ದರೆ ಈಗಲೇ ತನ್ನ ಜೀವದ ಆಶೆಯನ್ನು ತೊರೆದು ಕೊಳ್ಳಲಿ ಎಂಬುವುದೇ ಎಂದು ಹೇಳಿದನು. ಆ ಮಾತುಗಳನ್ನು ' ಕೇಳಿದ ಕೂಡಲೆ ರಾವಣನು ಮಹಾ ಕೋಪೋದ್ದೀಪಿತ ನಾಗಿ ಹಿಂದುಮುಂದು ಯೋಚಿಸದೆ ಈ ಕೋಡಗವನ್ನು ಕೊಂದುಹಾಕಿಸೆಂದು ಪ್ರಹಸ್ತ ನಿಗೆ ಅಪ್ಪಣೆ ಕೊಡಲು ಆಗ ನೀತಿವಿದನಾದ ವಿಭೀಷಣನು ರಾವಣನನ್ನು ನೋಡಿನೀನು ರಾಕ್ಷ ಸ ಚಕ್ರವರ್ತಿಯಾಗಿ ದೂತನನ್ನು ಕೊಲ್ಲುವುದು ಧರ್ಮವಿಹಿತವಲ್ಲ ವು. ಪ್ರಪಂಚದಲ್ಲಿ ದೂತರು ತಮ್ಮ ಸ್ವಾಮಿಯನ್ನು ಹೊಗಳಿಕೊಳ್ಳುವುದು ಸ್ವಭಾವವು. ಇಷ್ಟು ಮಾತ್ರಕ್ಕೆ ಕೋಪವೇಕೆ ? ದೂತರಾದವರು ಏನಾದರೂ ಹೆಚಾ ಗಿ ಅಪರಾಧ ವನ್ನು ಮಾಡಿದರೆ ಅಂಥವರಿಗೆ ಸ್ವಲ್ಪ ಶಿಕ್ಷೆಯನ್ನು ವಿಧಿಸಬಹುದೆಂದು ಹೇಳಲು ಆಗ ರಾವಣನು ತನ್ನ ದೂತರನ್ನು ನೋಡಿ-ಲೈ, ನೀವು ಈ ಕಪಿಯ ಕಿವಿಮಗುಗ. ಳನ್ನು ಕೊಯ್ದು ಹಾಕಿರಿ. ಇಲ್ಲಿಂದ ಹೋಗಿ ತನ್ನೊಡೆಯನಿಗೆ ತೋರಿಸಲಿ ಎಂದು ಆಜ್ಞಾಪಿಸಲು ಆಗ ದೂತರು ಶೀಘ್ರವಾಗಿ ಚೂರಿ ಕತ್ತಿ ಈ ಮೊದಲಾದ ಆಯುಧ ಗಳನ್ನು ತಂದು ಕೊಯ್ಯುತ್ತಿದ್ದರೂ ಆಂಜನೇಯನ ಒಂದು ಕೂದಲಾದರೂ ಕತ್ತರಿಸಿ ಹೋಗದೆ ಆಯುಧಗಳೆಲ್ಲಾ ಮುರಿದು ನಿರರ್ಥಕವಾಗುತ್ತಿರಲು ರಾವಣನು ನೋಡಿ ಬೆರಗಾಗಿ ಮೂಗಿನ ಮೇಲೆ ಬೆರಳಿಟ್ಟು ಕೊಂಡು ಕಿರುನಗೆಯಿ೦ದ ಪ್ರಹಸ್ತನನ್ನು ನೋಡಿ