ಪುಟ:ಕಥಾಸಂಗ್ರಹ ಸಂಪುಟ ೨.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

100 ಕಥಾಸಂಗ್ರಹ-೪ ನೆಯ ಭಾಗೆ ವಾಗಿ ಮಧುಪಾನವನ್ನು ಮಾಡಿ ಆನಂದಿಸಿ ನೆಗೆಯುತ್ತ ಕುಣಿಯುತ್ತ ಕುಪ್ಪಳಿಸುತ್ತ ಕಿರುಚುತ್ತ ಆರ್ಭಟಿಸುತ್ತ ಶ್ರೀರಾಮನಿರುಪ ಋಷ್ಯಮಕಾದ್ರಿಗೆ ಬಂದನು. ಅನಂತರದಲ್ಲಿ ಶ್ರೀ ರಾಮನು ನಗೆಮೊಗಗಳಿಂದ ಕೂಡಿ ತನ್ನ ಬಳಿಗೆ ಬಂದ ಕಪಿವೀರರನ್ನು ನೋಡಿ---ಎಲೆ ಕಪಿನಾಯ ಕರೇ ! ನೀವು ಹೋಗಿದ್ದ ಕಾರ್ಯವು ಜಯ ವಾಯಿತೆ ? ನೀವೆಲ್ಲರೂ ಕ್ಷೇಮದಿಂದ ಬಂದಿರಾ ಎಂದು ಕೇಳಲು ಆಗ ಜಾಂಬ ವಂತನು ಕೈಮುಗಿದು ನಿಂತು ಜೀಯಾ ! ಅವಧರಿಸು, ಮಹಾತ್ಮನಾದ ನಿನ್ನ ಮಹಿ ಮೆಯ ಬಲವು ನಮಗಿರುವಲ್ಲಿ ಆಶ್ರಿತರಾದ ನಮ್ಮ ಕ್ಷೇಮಕ್ಕೆ ಯಾವ ಹಾನಿಯುಂಟು? ಯಾವ ಕಾರ್ಯವು ತಾನೆ ಆಸಾಧ್ಯವು ? ನಾವು ನಿನ್ನ ಸನ್ನಿಧಿಯಿಂದ ಹೊರಟು ದಾರಿ ತಪ್ಪಿ ಸ್ವಯಂಪ್ರಭಾ ಗುಹೆಯನ್ನು ಪ್ರವೇಶಿಸಿ ಆಕೆಯಿಂದ ಸತ್ಕೃತರಾಗಿ ಮುಂದಕ್ಕೆ ಹೊರಟು ಬರುತ್ತ ಅಲ್ಲಿಗೆ ಇಪ್ಪತ್ತೇಳು ದಿನಗಳು ಗತಿಸಿಹೋದುದರಿಂದ ನಾವೆಲ್ಲರೂ ವ್ಯಸನಾಕ್ರಾಂತರಾಗಿ ಕೂತಿದ್ದೆವು. ಆಗ ಅಲ್ಲಿದ್ದ ಜಟಾಯುವಿನಣ್ಣನಾದ ಸಂಪಾತಿ ಯಿಂದ ಲಂಕಾವಾರ್ಗವನ್ನು ತಿಳಿದು ದಕ್ಷಿಣಸಮುದ್ರತೀರಕ್ಕೆ ಹೋದೆವು. ಆ ಮೇಲೆ ಈ ಧೀರನಾದ ಆಂಜನೇಯನು ಸಮುದ್ರವನ್ನು ದಾಟಿ ಲಂಕಾನಗರಕ್ಕೆ ಹೋಗಿ ಸೀತಾದೇವಿಯನ್ನು ಕಂಡು ಅನೇಕ ರಾಕ್ಷಸರನ್ನು ಕೊಂದು ಲಂಕೆಯನ್ನು ಸುಟ್ಟು ಬಂದನು ಎಂದು ಹೇಳಿ ಹನುಮಂತನನ್ನು ರಾಮನ ಪಾದಗಳ ಮೇಲೆ ಕೆಡಹಲು ಶ್ರೀರಾ ಮನು ಆಂಜನೇಯನನ್ನು ತೆಗೆದಪ್ಪಿ ಮುದ್ದಾಡಿ-ನನ್ನ ಕಂದನೇ ! ನನ್ನ ಬಂಧುವೇ ! ನನ್ನ ದುಃಖವನ್ನು ಪರಿಹರಿಸುವುದಕ್ಕಾಗಿ ಅಪಾರಶ್ರಮವನ್ನು ಹೊಂದಿದೆಯಲ್ಲಾ ಎಂದು ಮೈದಡವಿ ಆತನು ಕೊಟ್ಟ ಶಿರೋರತ್ನವನ್ನು ತೆಗೆದು ಕೊಂಡು ನೋಡಿ ಸೀತೆ ಯನ್ನೇ ಕಂಡಂತೆ ಸಂತುಷ್ಟನಾದರೂ ಪರರೆಡೆಯಲ್ಲಿ ಸಿಕ್ಕಿ ಕಷ್ಟ ಪಡುತ್ತಿರುವ ಆಕೆ ಯನ್ನು ನೆನೆನೆನದು ಮರುಗಿ ಶೀಘ್ರವಾಗಿ ಮುಂದೆ ಮಾಡತಕ್ಕೆ ಪ್ರಯತ್ನಗಳನ್ನು ಸುಗ್ರೀವನಿಗೆ ನೇಮಿಸುತ್ತಿದ್ದನು. 6. BRIDGING THE SEA OVER TO LANKA, ೬, ಸೇತುಬಂಧನದ ಕಥೆ. ಶ್ರೀರಾಮನು ಋಷ್ಯಮಕಮಹೀಧರದಲ್ಲಿ ಆಂಜನೇಯನ ಮುಖದಿಂದ ಸೀತಾರಾವಣರ ವರ್ತಮಾನವನ್ನು ಕೇಳಿದ ಮೇಲೆ ಆ ರಾತ್ರಿಯೇ ಸಭೆಯನ್ನು ಮಾಡಿ ಸುಗ್ರೀವನನ್ನು ನೋಡಿ-ಎಲೈ ಪ್ರಿಯಸಖನೇ ! ಮೊದಲು ನೀನು ನನಗೆ ನಂಬುಗೆ ಯನ್ನು ಕೊಟ್ಟಂತೆಯೇ ನನ್ನ ಪ್ರಾಣವಲ್ಲಭೆಯಿರುವ ಸ್ಥಳವನ್ನೂ ಆಕೆಯನ್ನು ಅಪಹ ರಿಸಿಕೊಂಡು ಹೋದ ದುಷ್ಟ ರಾವಣನಿರುವ ಸ್ಥಾನವನ್ನೂ ಗೊತ್ತು ಮಾಡಿಸಿ ತಿಳಿಸಿ ದವನಾದಿ. ನನ್ನ ಪ್ರಿಯಳು ಸಂಕಟಪಡುತ್ತಿರುವುದನ್ನು ಕೇಳಿ ಒಂದು ಕ್ಷಣಕಾಲ ವಾದರೂ ಸಹಿಸಿಕೊಂಡಿರಲಾರೆನು. ಯಾವಾಗ ನನ್ನ ಹಗೆಯಾದ ರಾವಣನನ್ನು ಕೊಂದು ನನ್ನ ಪ್ರಿಯೆಯಾದ ಸೀತೆಯನ್ನು ಬಿಡಿಸಿಕೊಂಡುಬರುವೆನೋ ಎಂಬ