ಪುಟ:ಕಥಾಸಂಗ್ರಹ ಸಂಪುಟ ೨.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

104 ಕಥಾಸಂಗ್ರಹ-೪ ನೆಯ ಭಾಗ ವರು ? ಆಲೋಚನಾಪರರು ಯಾರು ? ಆ ಆಲೋಚನಾಪರರಲ್ಲಿ ಒಬ್ಬರಿಗೊಬ್ಬರಿಗೆ ವೈಮನಸ್ಯವುಳ್ಳವರಾರು ಎಂಬ ಈ ಮೊದಲಾದ ಸಂಗತಿಗಳನ್ನೆಲ್ಲಾ ಸಂಪೂರ್ಣ ವಾಗಿಯೂ ಸ್ಪಷ್ಟವಾಗಿಯೂ ತಿಳಿದು ಕೊಂಡು ಬಂದು ಹೇಳುವ ಬಗ್ಗೆ ಚತುರರಾದವ ರಿಗೆ ಬೆಸಸು ಎನ್ನಲು ರಾವಣನು-ಅಹುದು, ಈ ನೀತಿಯು ಯುಕ್ತವಾದುದೇ ಸರಿ ಎಂದು ಮನಸ್ಸಿನಲ್ಲಿ ನಿಶ್ಚಯಿಸಿ ಕೂಡಲೇ ಆಪ್ತರಾದ ಬೇಹಿನವರನ್ನು ಕರಿಸಿ ಮಾಡಬೇಕಾದ ಕಾರ್ಯಕ್ರಮಗಳನ್ನೆಲ್ಲಾ ರಹಸ್ಯವಾಗಿ ತಿಳಿಸಿ ರಾಮನ ಬಂದ ಬಳಿಗೆ ಕಳುಹಿಸಿ ಮಂತ್ರಿಯಾದ ಪ್ರಹಸ್ತನನ್ನು ಮನೆಗೆ ಕಳುಹಿಸಿದನು. ಆ ಬಳಿಕ ಇಂದ್ರಜಿತ್ ಮೊದಲಾದ ಕುಮಾರರು ತಂದೆಯಾದ ರಾವಣನನ್ನು ಕುರಿತು-ಎಲೆ ಜನಕನೇ ! ಬಲದ ಪರಾಕ್ರಮದಲ್ಲೂ ನಮ್ಮೆದುರಿಗೆ ನಿಲ್ಲುವ ವರಾರು ? ಇಂಥ ನಾವು ಕೋತಿಗಳ ಬಲವನ್ನು ನಂಬಿ ಬಂದಿರುವ ಅಲ್ಪನಾದ ನರಸ ತಿಗೆ ಏಕಂಜಬೇಕು ? ಹಗೆತನದಲ್ಲಿ ನಮ್ಮನ್ನು ಸೋಲಿಸಿ ಹೆಂಡತಿಯನ್ನು ಕರೆದು ಕೊಂಡು ಹೋಗುವ ಆ ಮನುಜನ ಆಳುತನವನ್ನು ನಾವು ನೋಡಿಕೊಳ್ಳುವೆವು ಎಂದು ತಮ್ಮ ತಮ್ಮ ಶೌರ್ಯೋಕ್ತಿಗಳನ್ನು ಆಡಿಕೊಂಡರು. ರಾವಣನು ಸಂತೋಷಿಸಿ ಅವರನ್ನೆಲ್ಲಾ ಅವರವರ ಮನೆಗಳಿಗೆ ಕಳುಹಿಸಿ ತಾನು ಹಗೆಯ ಹಮ್ಮನ್ನೂ ಆತನ ಕಾರ್ಯಗಳನ್ನೂ ನೆನನೆನದು ನಿದ್ರೆಬಾರದೆ ಹಾಸಿಗೆಯಲ್ಲಿ ಹೊರಳುತ್ತ ಏಳುತ್ತ ಮಲಗುತ್ತ ಕುಳ್ಳಿರುತ್ತ ಚಿಂತಾಲಲನೆಯ ಕೂಟದಲ್ಲಿ ಇರುಳನ್ನೆಲ್ಲಾ ನೂಕುತ್ತಿದ್ದನು. ಅಷ್ಟರೊಳಗೆ ಮುಂಗೋ ಆಯು ಕೂಗಿತು, ಪಕ್ಷಿಗಳೆಲ್ಲಾ ತಮ್ಮ ತಮ್ಮ ಗೂಡುಗಳಲ್ಲಿ ಚಿಲಪಲ ಗುಟ್ಟು ದುವು. ಪೂರ್ವದಿಗಂಗನೆಯು ಸೂರ್ಯನೆಂಬ ವರನನ್ನು ವಧಿಸುವುದಕ್ಕಾಗಿ ಮನೋ ಹರವಾದ ಚಿತ್ರಾಂಬರವನ್ನು ಟ್ಟಳೋ ಎಂಬ ಹಾಗೆ ಉದಯರಾಗವು ಶೋಭಿಸುತ್ತಿ ದ್ದಿತು. ಉದಯಾಚಲವೆಂಬ ಮಾಣಿಕ್ಯದ ಮಂಚದಲ್ಲಿ ಸೂರ್ಯನೆಚ್ಚ ತ್ತು ಕೂತು ಕೊಂಡನೋ ಎಂಬಂತೆ ಸೂರ್ಯೋದಯವಾಗುತ್ತಿದ್ದಿತು. ಆ ಸೂರ್ಯೋದಯ ಕಾಲ ದಲ್ಲಿ ಮಂಗಳಪಾಠಕರ ಸ್ತುತಿವಚನಗಳಿ೦ದ ರಾವಣನು ರತ್ನ ಪರ್ಯಂಕದಿಂದಿಳಿದು ಗುರುವಾದ ಶುಕ್ರಾಚಾರ್ಯನಿಗೂ ಮುತ್ತಜ್ಜ ನಾದ ಬ್ರಹ್ಮದೇವನಿಗೂ ನಮಸ್ಕರಿಸಿ ಅವರ ಆಶೀರ್ವಾದಗಳನ್ನು ಕೈಗೊಂಡು ಸ್ನಾನ ಸಂಧ್ಯಾವಂದನೆಗಳನ್ನು ಮಾಡಿ ಶಿವಾ ರ್ಚನೆಯನ್ನು ನೆರವೇರಿಸಿ ದಿವ್ಯಾಂಬರಾಭರಣಗಳನ್ನು ಧರಿಸಿ ಓಲಗದ ಚಾವಡಿಗೆ ಬಂದನು. ಆ ಸಭಾ ಸ್ಥಾನಕ್ಕೆ ಇಂದ್ರಜಿತ್ಸಹಸ್ವಾದಿ ದನುಜ ಶ್ರೇಷ್ಟರು ಕೋಟ್ಯಂತರ ಸಂಖ್ಯೆಯಿಂದ ಬಂದು ನೆರೆದರು. ಆಗ ವಿಭೀಷಣನು ತನ್ನ ಗದಾಯುಧವನ್ನು ಕೈಯಲ್ಲಿ ಹಿಡಿದುಕೊಂಡು ಓಲ ಗಕ್ಕೆ ಬರಲು ರಾವಣನು ಕಂಡು ಮುಗುಳು ನಗೆಯಿಂದ ಕೂಡಿ ಆತನನ್ನು ಕುರಿತು ಕೈಸನ್ನೆ ಯಿಂದ-ಇತ್ಯ ಬಾರೆ ಎಂದು ಕರೆದು ತನ್ನ ಸಮೀಪದಲ್ಲಿ ಮಣಿಮಯ ವಾದ ಗದ್ದುಗೆಯಲ್ಲಿ ಕುಳ್ಳಿರಿಸಿಕೊಂಡು ಆ ಮೇಲೆ ಸಭಾ ಸ್ಥಾನದಲ್ಲಿ ನೆರೆದಿರುವ ವೀರ ಭಟರನ್ನು ನೋಡಿ-ಸೀತೆಯ ಗಂಡನಾದ ರಾಮನು ನಮ್ಮ ಸೆರೆಯಲ್ಲಿ ಸಿಕ್ಕಿ ಬಿದ್ದಿರುವ ಸೀತೆಯನ್ನು ಕರೆದು ಕೊಂಡು ಹೋಗುವುದಕ್ಕಾಗಿ ಕೊಡಗಪಡೆಯೊಡನೆ