ಪುಟ:ಕಥಾಸಂಗ್ರಹ ಸಂಪುಟ ೨.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

106 ಕಥಾಸಂಗ್ರಹ-೪ ನೆಯ ಭಾಗ ಸತ್ಯವಾಗಿ ಮನುಜನಲ್ಲ. ಆ ಕೋಡಗಗಳು ಮೃಗಗಳಲ್ಲ. ಲೋಕಕಂಟಕರಾದ ದುಷ್ಟ ರೆಂಬ ಕ್ರೂರ ಮೃಗಗಳನ್ನು ಕೆಡಹಿ ಕೊಲ್ಲುವದಕ್ಕೋಸ್ಕರ ಒಡ್ಡಿದ ಬಲೆಗಳೆಂದು ತಿಳಿ ಯುವವನಾಗು. ಜನಕನ ಪಟ್ಟಣದಲ್ಲಿ ನಿನ್ನನ್ನು ಕೆಡಹಿ ಮೇಲೆ ಬಿದ್ದು ಒದೆದಾಡಿಸಿದ ಶಿವನ ಬಿಲ್ಲನ್ನು ಮುರಿದವನು ಯಾರು ? ನಿನ್ನ ತಮ್ಮನಾದ ಖರಾಸುರನು ಸಾಮಾ ನ್ಯನೇ ? ದೂಷಣಾಸುರನು ಕೈಯಲ್ಲಿ ಹರಿಯದವನೇ ? ಲೋಕವಿಖ್ಯಾತರಾದ ಶೂರರ ಲವೇ ? ಅಂಥವರನ್ನು ಕೊಂದವನು ಸಾಧಾರಣನೇ ? ನೀನು ಹೆದರಿ ಸ್ನೇಹಿತನನ್ನಾಗಿ ಮಾಡಿಕೊಂಡ ವಾಲಿಯನ್ನು ಒಂದೇ ಬಾಣದಿಂದ ಕೊಂದವನು ಮಾನುಷಮಾತ್ರನೇ ?? ಈ ಮೊದಲಾದ ಸಂಗತಿಗಳನ್ನೆಲ್ಲಾ ನಿನ್ನ ಮನಸ್ಸಿನಲ್ಲಿ ಚೆನ್ನಾಗಿ ಯೋಚಿಸದೆ ಅಜ್ಞಾ ನದಿಂದ ಆ ರಾಮನಲ್ಲಿ ಹಗೆತನವನ್ನು ಬೆಳಿಸಿ ಹಾಲುಣ್ಣುವ ಬಾಯಲ್ಲಿ ಮಣ್ಣು ಹಾಕಿ ಕೊಳ್ಳಬೇಡ. ಈ ಸೀತೆಯನ್ನು ಆ ರಾಮನ ಬಳಿಗೆ ಕಳುಹಿಸಿ ಸರ್ವರೊಡನೆ ಕೂಡಿ ಸುಖವಾಗಿ ಬದುಕು ಎಂದನು. ಆ ಮಾತುಗಳನ್ನು ಕೇಳಿ ರಾವಣನು ಮಹಾ ಕೋಪವುಳ್ಳವನಾಗಿ ವಿಭೀಷಣ ನನ್ನು ನೋಡಿಎಲೇ ತಮಾ ! ನಮ್ಮಲ್ಲಿ ನಿನಗೆ ಇಷ್ಟು ನೈಷ್ಟು ರ್ಯವು ಏಕೆ ? ನೀನು ನಮ್ಮ ವೀರಭಟರ ಸಾಹಸ ಶಕ್ತಿ ಪರಾಕ್ರಮಾದಿಗಳನ್ನು ಬಲ್ಲವನಾದಾಗ ಗರ್ವದಿಂದ ಹೀಗೆ ಹೀಯಾಳಿಸಿ ನುಡಿಯಬಹುದೇ ? ಲೋಕಭೀಕರಪರಾಕ್ರಮಶಾಲಿ ಗಳಾದ ನಮ್ಮ ಅಂಜಿಕೆಯನ್ನು ಬಿಟ್ಟು ನಮ್ಮನ್ನು ಹುಲ್ಲಿಗಿಂತಲೂ ಕಡೆಯಾಗಿ ಎಣಿಸಿ ಈ ರೀತಿಯಾಗಿ ಹೇಳುವುದು ನಿನಗೆ ಯುಕ್ತವೇ ? ನಾನು ನಿನಗಿಂತಲೂ ಹಿರಿಯವನ ಲ್ಲವೇ ? ಹೀಗಿರುವಲ್ಲಿ ನೀನು ನನ್ನನ್ನು ತಿರಸ್ಕರಿಸಿ ಮಾತಾಡುವುದನ್ನು ನೋಡಿದರೆ ನನಗೆ ಹಗೆಯ ಅಲ್ಪನೂ ಆದ ರಾಮನು ದುರುಪದೇಶದಿಂದ ನಿನ್ನನ್ನು ಪ್ರೇರಿಸಿ ನನ್ನ ದೆಸೆಯಿಂದ ಹಿಗ್ಗು ದೆಗೆದಿದ್ದಾನೆಂದು ತಿಳಿಯಬೇಕಾಗಿದೆ. ನೀನು ಹೋಗಿ ಆ ರಾಮ ನನ್ನೇ ಸೇರಿಕೋ. ನಾನು ದ್ರೋಹಿಯಾದ ನಿನ್ನನ್ನೂ ರಾಮನನ್ನೂ ಸಂಹರಿಸದೆ ಎಂದಿಗೂ ಬಿಡುವುದಿಲ್ಲ ಇನ್ನು ಮೇಲೆ ನೀನು ನಮ್ಮೆದುರಿನಲ್ಲಿ ನಿಂತು ಹೆಚ್ಚಾಗಿ ಗಳಹಿದರೆ ನಾಲಿಗೆಯನ್ನು ಕೊಯ್ಲಿ ಬಿಡುವೆನು ಎಂದು ಹೇಳಿ ದೂತರನ್ನು ಕರೆದು ಈ ಪಾಪಿ ಯನ್ನು ನೂಕಿಬಿಡಿರಿ ಎಂದು ಹೇಳಲು ಆಗ ವಿಭೀಷಣನು ನೀನು ನನ್ನನ್ನು ನೂಕು ವುದೇಕೆ ? ಈ ದುಷ್ಪಸಂಗದಿಂದ ನಾನೇ ನನ್ನನ್ನು ನೂಕಿಕೊಳ್ಳುವೆನು ಎಂದು ಹೇಳಿ ಮನಸ್ಸಿನಲ್ಲಿ ಶ್ರೀರಾಮನಡಿದಾವರೆಗಳನ್ನು ಚಿಂತಿಸುತ್ತ ಚಾವಡಿಯಿ೦ದ ಶೀಘ್ರವಾಗಿ, ಹೊರಟು ತನ್ನ ತಾಯಿಯಾದ ಕೈಕಸೆಯ ಮನೆಗೆ ಬಂದು ಆಕೆಯ ಚರಣಂಗಳಿಗೆ ನಮ್ಮ ಸ್ಮರಿಸಲು ಆಕೆಯು ವಿಭೀಷಣನನ್ನು ತಬ್ಬಿಕೊಂಡು ತೊಡೆಯ ಮೇಲೆ ಕುಳ್ಳಿರಿಸಿ ಕೊಂಡು--ಮಗನೇ ! ರಾವಣನ ದುರುಕ್ಕಿಗಳನ್ನೆಲ್ಲಾ ಕೇಳಿದೆನು. ಅದುಂದ ನಿನಗೆ ಒಳ್ಳೆಯದಾಯಿತು. ಅದು ಕಾರಣ ಸ್ವಲ್ಪವೂ ವ್ಯಸನಪಡಬೇಡ. ನೀನು ನಿರಪರಾಧಿಯಾಗಿ ರಾಘವನನ್ನು ಮರೆಹೋಗುವುದಕ್ಕೆ ಇದೇ ಸಮಯವು. ಈ ಸ್ಥಳವನ್ನು ಬಿಟ್ಟು ಹೋಗು. ಆ ದಯಾಳುವಾದ ರಾಮನು ನಿನಗೆ ಚ್ಯುತಿಯಿಲ್ಲದ ಆಯುಸ್ಸನ್ನೂ ಐಶ್ವ ರ್ಯವನ್ನೂ ದಯಪಾಲಿಸುವನು. ನೀನು ಮುಂದೆ ಮೃತರಾಗುವ ನಮ್ಮೆಲ್ಲರಿಗೂ