ಪುಟ:ಕಥಾಸಂಗ್ರಹ ಸಂಪುಟ ೨.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೇತುಬಂಧನದ ಕಥೆ 107 ತಿಲೋದಕವನ್ನು ಕೊಟ್ಟು ಸದ್ದತಿಯನ್ನು ಹೊಂದಿಸುವವನಾಗು. ನಡೆ ಎಂದು ಕಣ್ಣೀ ರುಗಳನ್ನು ಸುರಿಸುತ್ತ ಅಪ್ಪಣೆಯನ್ನು ಕೊಡಲು ಆಗ ವಿಭೀಷಣನೂ ದುಃಖಿಸುತ್ತ ತಾಯಿಯ ಅಡಿಗಳಿಗೆರಗಿ ನಾಲ್ಕು ಜನ ಮಂತ್ರಿಗಳೊಡನೆ ತೇರನ್ನೇರಿ ರಾಮನನ್ನು ನೆನಸುತ್ತ ಸಂಭ್ರಮದಿಂದ ಆಕಾಶಕ್ಕೆ ಹಾರಿ ಪುನಃ ಅಣ್ಣನ ವಿಷಯದಲ್ಲಿ ಮನಸ್ಸು ಮರುಗಿಕೂರನಾದ ಅಣ್ಣನಿಗೆ ಇನ್ನೊಂದು ಸಾರಿ ವಿವೇಕವನ್ನು ಹೇಳಿ ನೋಡುವೆ ನೆಂದು ಯೋಚಿಸಿ ಚಾವಡಿಯ ಸಮೀಪವಾಗಿ ಆಕಾಶದಲ್ಲಿ ನಿಲ್ಲಲು ರಾವಣನು ಅದನ್ನು ಕಂಡು ಇಲ್ಲಿ ನಿಲ್ಲದೆ ಬೇಗ ಹೋಗಹೇಳು. ಅವನೇಕೆ ತಿರಿಗಿಲ್ಲಿಗೆ ಬಂದನು ? ಮಹಾ ದ್ರೋಹಿಯನ್ನು ಬಾಗಿಲಲ್ಲಿ ಹೊಗಿಸದಿರಿ ಎಂದು ಆಜ್ಞಾಪಿಸಲು ಕೂಡಲೆ ಕೈಗುದಿಗೆಗಳ ಖಳರು ಬಂದು ವಿಭೀಷಣನನ್ನು ತರಬಲು ಅವನು ತನ್ನ ಗದೆಯಿಂದ ಬಡಿದು ಅವರ ಪ್ರಾಣಗಳನ್ನು ತೆಗೆದು ಅಣ್ಣನನ್ನು ಕುರಿತು ಸಾಯುವ ರೋಗಿಗೆ ಮದ್ದು ಸೊಗಸದೆಂಬ ಗಾದೆಯು ಸುಳ್ಳಲ್ಲ. ಲೋಕದಲ್ಲಿ ಆಗದವರು ಮುಂಗಡೆ ಯಲ್ಲಿ ಸವಿನುಡಿಗಳನ್ನಾಡುವರು, ಹಿಂಗಡೆಯಲ್ಲಿ ಹೀಯಾಳಿಸುವರು. ಮೊದಲು ಕೂರವಾಗಿದ್ದಾಗ ಆ ಮೇಲೆ ಹಿತವಾಗುವಂಥ ಮಾತುಗಳನ್ನಾಡುವರು ಅಪೂರ್ವರು. ಅಂಥ ಮಾತುಗಳನ್ನು ಕೇಳಿ ತಿಳಿದು ನಡೆವವರೂ ದುರ್ಲಭರು. ಇಂಥವರಿಗೆ ವಿಪತ್ತುಗಳು ಒದಗಲಾರವು. ಈಗ ನಾನು ನಿರಪರಾಧಿಯಾಗುವು ದಕೋಸ್ಕರ ಸಾರಿ ಹೇಳುತ್ತೇನೆ. ಬೀದಿಯಲ್ಲಿ ಹೋಗುವ ಮಾರಿಯನ್ನು ಕೂಗಿ ಮನೆಗೆ ಕರೆದುಕೊಳ್ಳುವುದು ಯುಕ್ತವಲ್ಲ. ನೀನು ಬುದ್ದಿಶಾಲಿಯಾದರೆ ಶೀಘ್ರವಾಗಿ ಸೀತೆಯೆಂಬ ಕಂತೆಯನ್ನು ಬಿಟ್ಟು ಕೀರ್ತಿಯೆಂಬ ಕಾಂತೆಯ ಕೈ ಹಿಡಿದು ಬದುಕು ವುದು ಒಳ್ಳೆಯದು. ನಾನಾಡುವ ಹಿತದ ಮಾತುಗಳು ಈಗ ನಿನಗೆ ಒಡಂಬಡುವು ದಿಲ್ಲ. ಏಕೆಂದರೆ ಮೃತ್ಯುವು ನಿನ್ನ ಹೆಗ್ಗತ್ತಿನ ಮೇಲೇರಿ ಕುಳಿತಿರುವುದು. ಕಪಿಬಲವು ಬಂದು ರಾಕ್ಷಸರನ್ನೆಲ್ಲಾ ಕೊಂದು ಶ್ರೀರಾಮನು ನಿನ್ನ ತಲೆಗಳನ್ನು ಕತ್ತರಿಸುವಾಗ ನನ್ನ ಮಾತುಗಳನ್ನು ನೆನಸಿಕೋ ಎಂದು ಹೇಳಿ ವಿಭೀಷಣನು ತನ್ನ ಭಾತೃಸಂಗದ ಕೋಟಲೆಯನ್ನೂ ಲಂಕಾನಗರದ ಕೋಟೆಯನ್ನೂ ದಾಟಿ ರಾಕ್ಷಸ ಜನ್ಮದಿಂದುಂಟಾದ ಪಾಪವೆಂಬ ಕಡಲನ್ನೂ ಶತಯೋಜನ ವಿಸ್ತಾರವಾದ ಸಮುದ್ರವನ್ನೂ ಹಾರಿ ಬರು ತಿರುವಲ್ಲಿ ಆ ವಿಭೀಷಣನ ಕಣ್ಣುಗಳಿಗೆ ಕಪಿಬಲವು ಪಾಲ್ಗಡಲಂತೆಯ ರಾಮನು ಲಕಿ ಪತಿಯಂತೆಯೂ ತೋಳ್ಳಿರಿಯು ಶ್ರೀದೇವಿಯಂತೆಯ ಲಕ್ಷಣನು ಮಹಾ ಶೇಷನಂತೆಯ ಹನುಮಂತನು ಗರುಡನಂತೆ ಕಾಣಿಸಿದರು. ಸದ್ಯೋಜಾತ ವಾಮದೇವ ತತ್ಪುರುಷ ಅಘೋರಗಳೆಂಬ ನಾಲ್ಕು ಮೊಗಗಳ ನಡುವೆ ಪ್ರಕಾಶಿಸುವ ಈಶಾನವೆಂಬ ಈಶ್ವರನ ಏದನೆಯ ಮುಖದಂತೆ ಚತುರ್ದಿಕ್ಕುಗಳಲ್ಲಿಯ ಮೈಗಾವ ಲುಗಾರರಾಗಿರುವ ನಾಲ್ಕರು ಮಂತ್ರಿಗಳ ಮಧ್ಯದಲ್ಲಿ ಬರುತ್ತಿರುವ ವಿಭೀಷಣನನ್ನು ನೋಡಿ ಪಾಳಯದ ಮುಂಗಡೆಯಲ್ಲಿದ್ದ ಕೋತಿಗಳ ಗುಂಪು ಬೋಯೆಂದೊಡಿ ಬಂದು ವಿಭೀಷಣನ ರಥವನ್ನು ಮುತ್ತಿ ಕೊಂಡಿತು, ಆಗ ವಿಭೀಷಣನು-ಸರ್ವಜ್ಞನೇ ! ಸರ್ವಾಂತರ್ಯಾಮಿಯೇ ! ಶರಾಣಾಗತ ಸುರಧೇನುವೇ ! ಪೂರ್ಣದಯಾರಸಭರಿತನೇ ! ಕಷಾನುಭವದಿಂದ ಕಂಗೆಟ್ಟ ಜನರನ್ನು 6.