ಪುಟ:ಕಥಾಸಂಗ್ರಹ ಸಂಪುಟ ೨.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

110 ಕಥಾಸಂಗ್ರಹ-೪ ನೆಯ ಭಾಗ ಕಂಡುದರಿಂದಲೂ ತನ್ನಣ್ಣನನ್ನು ಕೊಂದು ತನಗೆ ಲಂಕಾರಾಜ್ಯಾಭಿಷೇಕವನ್ನು ನಾನು ಮಾಡುವೆನೆಂಬ ಮನೋನಿಶಯವುಳ್ಳವನಾಗಿ ನಮ್ಮನ್ನು ಮರೆಹೊಗುವುದಕ್ಕೆ ಬಂದಿದ್ದಾನೆ. ಇದರಲ್ಲಿ ಲೇಶಮಾತ್ರವೂ ಸಂದೇಹವಿಲ್ಲ ವೆಂದು ಹೇಳಲು ಆಗ ವಿನೀ ತನಾದ ಸುಗ್ರೀವನು ರಾಮನನ್ನು ಕುರಿತು-ದೇವಾ ! ನಿನ್ನ ಮಹಿಮೆಯ ಸೊಬಗು ಯಾರಿಗುಂಟು ? ನೀನು ದೇವದೇವನಲ್ಲವೇ ? ನೀನು ಲೋಕದವರಂತೆ ಪ್ರಾಕೃತ ಪುರು ಷನೇ ? ನೀನು ಸರ್ವಜ್ಞನು, ನಾವು ಅಲ್ಪಜ್ಞರು, ನಮಗೇನು ತಿಳಿಯುವುದು ? ತೋರಿದ ಸಂಗತಿಯನ್ನು ಸನ್ನಿಧಾನದಲ್ಲಿ ವಿಜ್ಞಾಪಿಸದಿರುವುದು ಅಪರಾಧವೆಂದು ತಿಳಿದು ನಾನು ಅರಿಕೆಮಾಡಿಕೊಂಡೆನಲ್ಲದೆ ಅನ್ಯಥಾ ಅಲ್ಲ ವು. ದೇವರ ಅಪ್ಪಣೆಗೆ ಬೇಕು ಬೇಡ ಎಂಬುವರು ಯಾರೂ ಇಲ್ಲವು. ಚಿತ್ರಕ್ಕೆ ಸರಿಬಂದ ರೀತಿಯಿಂದ ಆಜ್ಞಾಪಿಸಬಹುದು ಎಂದು ವಿಜ್ಞಾಪನೆ ಮಾಡಿದನು. ಆ ಮಾತುಗಳನ್ನು ಕೇಳಿ ಲಕ್ಷ್ಮಣನೂ ಜಾಂಬವಂತ ಹನುಮಂತ ನೀಲಾದಿ ಸಕಲ ಕಪಿ ಸೇನಾನಾಯಕರು ಸಂತೋಷದಿಂದ ಒಡಂಬಡಲು ರಾಮಚಂದ್ರನು ಸುಗ್ರೀವನನ್ನು ನೋಡಿಎಲೈ ಪ್ರಿಯ ಸ್ನೇಹಿತನೇ ! ರಾಜನಾದ ನೀನೇ ಹೋಗಿ ವಿಧೇ ಯನಾಗಿ ಬಂದಿರುವ ವಿಭೀಷಣನನ್ನು ಕರೆದುಕೊಂಡು ಬಾ ಎಂದು ಅಪ್ಪಣೆಯನ್ನು ಕೊಡಲು ಕೂಡಲೆ ಸುಗ್ರೀವನು ತನ್ನ ಪರಿವಾರದೊಡನೆ ಕೂಡಿ ವಿಭೀಷಣನ ಬಳಿಗೆ ಬಂದು ಬಹಳ ಸಂತೋಷದಿಂದ ಆತನನ್ನು ಆಲಿಂಗಿಸಿ-ಶ್ರೀರಾಮನ ಕೃಪಾಕಟಾಕ್ಷ ವು ನಿನ್ನಲ್ಲಿ ಸಂಪೂರ್ಣವಾಗಿದೆ. ಅದು ಕಾರಣ ಲೋಕದಲ್ಲಿ ನೀನೇ ಧನ್ಯನು. ರಾಮನ ಅಡಿದಾವರೆಗಳ ದರ್ಶನಾರ್ಥವಾಗಿ ಬರುವವನಾಗು ಎನ್ನ ಲು ವಿಭೀಷಣನು ಆಯುಧ ಗಳನ್ನು ತನ್ನ ಮಂತ್ರಿಗಳ ವಶಕ್ಕೆ ಕೊಟ್ಟು ರಥದಿಂದ ಭೂಮಿಗಿಳಿದು ಬಂದು ನವರತ್ನ ಖಚಿತವಾದ ತನ್ನ ಸಿಂಗಾಡಿಯನ್ನೂ ವಜ್ರದಲಗುಳ್ಳ ಬಾಣವನ್ನೂ ರಾಮನ ಪಾದ ಪದ್ಯಗಳಿಗೆ ಸಮರ್ಪಿಸಿ ದೀರ್ಘದಂಡ ನಮಸ್ಕಾರವನ್ನು ಮಾಡಿ ಬಹು ವಿಧವಾಗಿ ಸ್ತುತಿಸಿ. ಅನಾಥನಾದ ನನ್ನನ್ನು ಕಾಪಾಡಬೇಕೆಂದು ಬಾರಿಬಾರಿಗೂ ಬೇಡಿಕೊ ಳ್ಳುತ್ತ ನಮಸ್ಕರಿಸುತ್ತ ಇದ್ದನು. ಆಗ ಶ್ರೀ ರಾಮಚಂದ್ರನು ಶರಣಾಗತನಾದ ವಿಭೀ ಷಣನನ್ನು ಕೃಪಾದೃಷ್ಟಿಯಿಂದ ನೋಡಿ ಏಳು, ಸುಗುಣಮಣಿಗಣ ಭೂಷಿತನೇ ! ಭಯಪಡಬೇಡ. ಇಲ್ಲಿಗೆ ನಿನ್ನ ಸರ್ವಪಾಪವೂ ಕಷ್ಟ ಗಳೂ ಪರಿಹಾರವಾದುವೆಂದು ತಿಳಿ ಯುವವನಾಗು. ಎಲೈ ವಿಭೀಷಣನೇ! ಕೇಳು. ನನ್ನ ತಂದೆಯಾದ ದಶರಥರಾಜನಾಣೆ, ಲಕ್ಷಣವನ್ನು ಹೇಗೋ ಹಾಗೆ ನಿನ್ನನ್ನೂ ಕಾಪಾಡುವೆನು. ಚಿಂತೆಯನ್ನು ಬಿಡು ಎಂದು ಹೇಳಿ ಆತನ ಮಂಡೆಯನ್ನು ಹಿಡಿದೆತ್ತಿ ಪ್ರಿಯೆಯಾದ ಸೀತೆಯನ್ನು ಆಲಿಂಗಿ ಸುವ ತೋಳುಗಳಿಂದ ಆಲಿಂಗಿಸಿಕೊಂಡು ಲಕ್ಷ್ಮಣ ಸುಗ್ರೀವರನ್ನು ಕುರಿತು-ಈ ಪ್ರಿಯನಾದ ವಿಭೀಷಣನಿಗೆ ಈಗಲೇ ಲಂಕಾರಾಜ್ಯಾಭಿಷೇಕವನ್ನು ಮಾಡಿರಿ ಎಂದು ಅಪ್ಪಣೆಯನ್ನು ಕೊಡಲು ಆಗ ಅವರು ಸಕಲ ಸಾಮಗ್ರಿಗಳನ್ನು ಸಿದ್ದ ಮಾಡಿಕೊಂಡು ಸುಮುಹೂರ್ತದಲ್ಲಿ ವಿಭೀಷಣನನ್ನು ದಿವ್ಯವಾದ ರತ್ನ ಪೀಠದಲ್ಲಿ ಕುಳ್ಳಿರಿಸಿ ಪಟ್ಟಾಭಿ ಷೇಕವನ್ನು ಮಾಡಿದರು. ಆಗ ದೇವತೆಗಳು ವಿಭೀಷಣನ ತಲೆಯ ಮೇಲೆ ದೇವಗಂ